ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಖ್ಯಾತ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಎಥರ್ ಎನರ್ಜಿ (Ather Energy) ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ 12 ಪಟ್ಟು ಹೆಚ್ಚಳವನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 450 X ಹಾಗೂ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸುಮಾರು 3,500 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಎಥರ್ ಎನರ್ಜಿಯ ಸಿಇಒ ಹಾಗೂ ಸಹ ಸಂಸ್ಥಾಪಕ ತರುಣ್ ಮೆಹ್ತಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಇದರ ಬಗ್ಗೆ ಮಾತನಾಡಿರುವ ಅವರು, ಹಬ್ಬದ ಋತುವಿನಲ್ಲಿ ಎಥರ್ ಸ್ಕೂಟರ್ ಗಳ ಮಾರಾಟವು ಹೆಚ್ಚಾಗಿದೆ. ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವು 12 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಎಥರ್ ಎನರ್ಜಿ ಕಂಪನಿಯು ತನ್ನ ಡೀಲರ್‌ಶಿಪ್ ಜಾಲವನ್ನು ದೇಶದ ಪ್ರಮುಖ ನಗರಗಳಲ್ಲಿ ವಿಸ್ತರಿಸುತ್ತಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಸದ್ಯಕ್ಕೆ ಕಂಪನಿಯು ದೇಶದ 19 ನಗರಗಳಲ್ಲಿ ಸುಮಾರು 22 ಎಕ್ಸ್ ಪಿರಿಯನ್ಸ್ ಕೇಂದ್ರಗಳನ್ನು ಹೊಂದಿದೆ. ಎಥರ್ ಕಂಪನಿಯು 2022ರ ಮಾರ್ಚ್ ವೇಳೆಗೆ 42 ನಗರಗಳಿಗೆ ವಿಸ್ತರಿಸಲು ಹಾಗೂ 50ಕ್ಕೂ ಹೆಚ್ಚು ಎಕ್ಸ್ ಪಿರಿಯನ್ಸ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ. ಎಥರ್ ಕಂಪನಿಯು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಕಾರ್ಯದಲ್ಲಿ ನಿರತವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಕಂಪನಿಯು ಇದುವರೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ 22 ಕ್ಕೂ ಹೆಚ್ಚು ನಗರಗಳಲ್ಲಿ ಹಾಗೂ ದೇಶದ 220ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಥರ್ ಗ್ರಿಡ್ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ. ಇದೇ ವೇಳೆ ಕಂಪನಿಯು 2022ರ ವೇಳೆಗೆ 500 ಹೊಸ ಸ್ಥಳಗಳಲ್ಲಿ ಚಾರ್ಜಿಂಗ್ ಗ್ರಿಡ್ ಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ. ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್ ಲಭ್ಯವಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಇದು 2021ರ ಡಿಸೆಂಬರ್ ವರೆಗೆ ಉಚಿತವಾಗಿರುತ್ತದೆ ಎಂದು ಎಥರ್ ಎನರ್ಜಿ ಹೇಳಿದೆ. ಕಂಪನಿಯು ಇತ್ತೀಚೆಗೆ ದೀಪಾವಳಿ ಪ್ರಯುಕ್ತ ವಿಶೇಷ ಯೋಜನೆಯನ್ನು ಘೋಷಿಸಿತ್ತು. ಇದರ ಅಡಿಯಲ್ಲಿ ಕಂಪನಿಯು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಆರು ತಿಂಗಳವರೆಗೆ ಉಚಿತ ಸಂಪರ್ಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ರೂ. 130 ಕೋಟಿ ಹೂಡಿಕೆ ಮಾಡುತ್ತಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಉತ್ಪಾದನಾ ಘಟಕದಲ್ಲಿ ಕಂಪನಿಯ ಒಟ್ಟು ಹೂಡಿಕೆ ರೂ. 650 ಕೋಟಿಗಳಾಗಲಿದೆ. ಎಥರ್ ಕಂಪನಿಯು ಸದ್ಯಕ್ಕೆ 450 X ಹಾಗೂ 450 ಪ್ಲಸ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಎಥರ್ 450 X ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 2.9 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ 6 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್‌ ಅಳವಡಿಸಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಎಲೆಕ್ಟ್ರಿಕ್ ಮೋಟರ್ ಗರಿಷ್ಠ 8 ಬಿ‌ಹೆಚ್‌ಪಿ ಪವರ್ ಹಾಗೂ 26 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 3.3 ಸೆಕೆಂಡುಗಳಲ್ಲಿ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 116 ಕಿ.ಮೀಗಳವರೆಗೆ ಚಲಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಹಾಗೂ ಇಕೋ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಇಕೋ ಮೋಡ್‌ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 85 ಕಿ.ಮೀಗಳವರೆಗೆ ಚಲಿಸಿದರೆ, ರೈಡ್ ಮೋಡ್‌ನಲ್ಲಿ 75 ಕಿ.ಮೀಗಳವರೆಗೆ ಚಲಿಸುತ್ತದೆ. ಕಂಪನಿಯು ತನ್ನ ಮೊದಲ ಎಥರ್ ಸ್ಪೇಸ್ ಶೋರೂಂ ಅನ್ನು 2018ರಲ್ಲಿ ಬೆಂಗಳೂರಿನಲ್ಲಿ ತೆರೆಯಿತು. ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಕೊಚ್ಚಿ, ಜೈಪುರ ಹಾಗೂ ಅಹಮದಾಬಾದ್‌ನಂತಹ ಪ್ರಮುಖ ನಗರಗಳಲ್ಲಿ ಮಾರಾಟವಾಗುತ್ತಿವೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಮುಂಬರುವ ದಿನಗಳಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ರೂ. 1 ಲಕ್ಷಗಳಾಗಿರಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಪೈಪೋಟಿಯ ನಡುವೆ ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಸ್ಕೂಟರ್ ಗಾಗಿ ಗ್ರಾಹಕರು ಇನ್ನೂ ಕೆಲವು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಮಾಹಿತಿಗಳ ಪ್ರಕಾರ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2023 ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ. ಕಂಪನಿಯು ಇತ್ತೀಚಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ಮೊದಲ ಮಾರಾಟ ಮಳಿಗೆಯನ್ನು ತೆರೆದಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಎನರ್ಜಿ ಕಂಪನಿಯು ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯುವುದಾಗಿ ತಿಳಿಸಿದೆ. ಇದುವರೆಗೂ ಕಂಪನಿಯು ಒಟ್ಟು 20 ಮಾರಾಟ ಮಳಿಗೆಗಳನ್ನು ತೆರೆದಿದೆ. ಕಂಪನಿಯು ಕರ್ನಾಟಕದಲ್ಲಿ ಇದುವರೆಗೂ ಮೂರು ಮಾರಾಟ ಮಳಿಗೆಗಳನ್ನು ತೆರೆದಿದೆ. ಬೆಂಗಳೂರಿನ ಇಂದಿರಾನಗರ ಹಾಗೂ ಜೆಪಿ ನಗರದಲ್ಲಿ ತಲಾ ಒಂದೊಂದು ಮಾರಾಟ ಮಳಿಗೆಗಳಿವೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈಗ ಮೈಸೂರಿನ ಹುಣಸೂರು ರಸ್ತೆಯಲ್ಲಿ ರಾಜ್ಯದ ಮೂರನೇ ಮಾರಾಟ ಮಳಿಗೆ ತೆರೆಯಲಾಗಿದೆ. ಕಂಪನಿಯು ಶೀಘ್ರದಲ್ಲೇ ಹುಬ್ಬಳ್ಳಿಯಲ್ಲೂ ಮಾರಾಟ ಮಳಿಗೆ ತೆರೆಯಲು ಸಿದ್ದತೆ ನಡೆಸುತ್ತಿದೆ. ಎಥರ್ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಸೂರು ಹಾಗೂ ಹುಬ್ಬಳ್ಳಿ ನಗರಗಳ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಗ್ಗೆ ಮಾಹಿತಿ ನೀಡಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಚಾರ್ಜಿಂಗ್ ಕೇಂದ್ರಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಹುಬ್ಬಳ್ಳಿಯಲ್ಲಿ ಮಾರಾಟ ಮಳಿಗೆಗೆ ಚಾಲನೆ ನೀಡಲಾಗುತ್ತದೆ. ತನ್ನ ವಾಹನ ಮಾರಾಟ ಮಳಿಗೆಗಳನ್ನು ಎಥರ್ ಎನರ್ಜಿ ಕಂಪನಿಯು ಎಕ್ಸ್ಪಿರೆನ್ಸ್ ಸೆಂಟರ್ ಎಂದು ಕರೆಯುತ್ತದೆ. ಎಕ್ಸ್ಪಿರೆನ್ಸ್ ಸೆಂಟರ್‌ನಲ್ಲಿ ಗ್ರಾಹಕರು ವಾಹನ ಖರೀದಿಯ ಜೊತೆಗೆ ಖರೀದಿ ಮಾಡುವ ವಾಹನದ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದು.

ಅಕ್ಟೋಬರ್ ತಿಂಗಳಿನಲ್ಲಿ 12 ಪಟ್ಟು ಏರಿಕೆ ಕಂಡ Ather ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಹಾಗೂ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ. 450 ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚು ಫೀಚರ್ ಗಳನ್ನು ಹೊಂದಿದೆ. ಸಬ್ಸಿಡಿಯ ನಂತರ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಬೆಂಗಳೂರಿನ ಎಕ್ಸ್‌ಶೋರೂಂ ದರದಂತೆ ರೂ. 1,44,500 ಗಳಾದರೆ, 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಬೆಂಗಳೂರಿನ ಎಕ್ಸ್‌ಶೋರೂಂ ದರದಂತೆ ರೂ. 1,25,490 ಗಳಾಗಿದೆ.

Most Read Articles

Kannada
English summary
Ather electric scooter sales increases in october 2021 details
Story first published: Tuesday, November 9, 2021, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X