ಸಬ್ಸಡಿ ವಿನಾಯ್ತಿ ನಂತರ ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಕೇಂದ್ರದ ಸರ್ಕಾರದ ಫೇಮ್ 2 ಯೋಜನೆ ಅಡಿಯ ಸಬ್ಸಡಿ ವಿನಾಯ್ತಿ ನಂತರ ತನ್ನ ಸ್ಕೂಟರ್ ಮಾದರಿಗಳ ಬೆಲೆ ಇಳಿಕೆ ಮಾಡಿದ್ದು, ರಾಜ್ಯವಾರು ಹೊಸ ಸ್ಕೂಟರ್ ಬೆಲೆ ಮಾಹಿತಿಯು ಇದೀಗ ಪ್ರಕಟವಾಗಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ ಸಬ್ಸಡಿ ಪ್ರಮಾಣವನ್ನು ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಫೇಮ್ 2 ಸಬ್ಸಡಿ ಹೆಚ್ಚಳವಾದ ಬೆನ್ನಲ್ಲೇ ಎಥರ್ ಎನರ್ಜಿ ಕಂಪನಿ ಸೇರಿದಂತೆ ಬಹುತೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಇವಿ ದ್ವಿಚಕ್ರ ವಾಹನ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಿವೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಎಥರ್ ಎನರ್ಜಿ ಕಂಪನಿಯು ಸಹ ತನ್ನ 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರಿನ ಪರಿಷ್ಕರಣೆ ಮಾಡಲಾಗಿದ್ದು, ಸದ್ಯ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿರುವ 450 ಎಕ್ಸ್ ಮಾದರಿಯು ಸಬ್ಸಡಿ ಪರಿಷ್ಕರಣೆ ನಂತರ ಸುಮಾರು ರೂ.15 ಸಾವಿರದಷ್ಟು ಬೆಲೆ ಇಳಿಕೆ ಕಂಡಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಫೇಮ್ 2 ಯೋಜನೆಯಡಿಯಲ್ಲಿ ಈಗಾಗಲೇ ಲಭ್ಯವಿರುವ ಸಬ್ಸಡಿ ಪ್ರಮಾಣವನ್ನು ದ್ವಿಚಕ್ರ ವಾಹನಗಳಿಗಾಗಿ ಶೇ.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಎಥರ್ ಕಂಪನಿಯು ಹೊಸ ಸಬ್ಸಡಿ ಮಾರ್ಗಸೂಚಿಯೆಂತೆ 450ಎಕ್ಸ್ ಸ್ಕೂಟರ್ ಬೆಲೆಯಲ್ಲಿ ರೂ. 15 ಸಾವಿರದಷ್ಟು ಇಳಿಕೆ ಮಾಡಿರುವುದು ಎಲೆಕ್ಟ್ರಿಕ್ ವಾಹನ ಖರೀದಿಯನ್ನು ಉತ್ತೇಜಿಸುವ ಮಹತ್ವದ ಕ್ರಮವಾಗಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಹೊಸ ಸಬ್ಸಡಿ ಯೋಜನೆಗಾಗಿ ಕೇಂದ್ರ ಸರ್ಕಾರವು ಹಲವಾರು ಹೊಸ ಮಾನದಂಡಗಳನ್ನು ಕಡ್ಡಾಯಗೊಳಿಸಿದ್ದು, ಹೊಸ ಮಾನದಂಡಗಳನ್ನು ಪೂರೈಸಿರುವ ಎಥರ್ 450ಎಕ್ಸ್ ಮಾದರಿಯ ಬೆಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಬೆಲೆ ಪರಿಷ್ಕರಣೆ ನಂತರ ಎಥರ್ 450ಎಕ್ಸ್ ಸ್ಕೂಟರ್ ಬೆಲೆಯು ಬೆಂಗಳೂರಿನ ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷದಿಂದ ರೂ. 1.44 ಲಕ್ಷಕ್ಕೆ ಇಳಿಕೆಯಾಗಿದ್ದು, ದೆಹಲಿಯಲ್ಲಿ ಎಥರ್ ಹೊಸ ಸ್ಕೂಟರ್ ಮಾದರಿಯು ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಇತರೆ ರಾಜ್ಯಗಳಿಂತ ದೆಹಲಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗವಾಗಿರಲು ಅಲ್ಲಿ ಸರ್ಕಾರವು ಇವಿ ವಾಹನಗಳ ಖರೀದಿ ಪ್ರೊತ್ಸಾಹಿಸಲು ಕೇಂದ್ರ ಸರ್ಕಾರದ ಸಬ್ಸಡಿ ಜೊತಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚಿನ ಮಟ್ಟದ ಸಬ್ಸಡಿ ನೀಡುತ್ತಿದ್ದು, ಈ ಹಿನ್ನಲೆ ಎಥರ್ 450ಎಕ್ಸ್ ಮಾದರಿಯು ದೆಹಲಿಯಲ್ಲಿ ರೂ. 1.32 ಲಕ್ಷ ಬೆಲೆ ಹೊಂದಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಹೊಸ ದರಪಟ್ಟಿಯು ಜೂನ್ 11ರ ನಂತರ ವಾಹನ ಖರೀದಿ ಮಾಡಿರುವ ಗ್ರಾಹಕರಿಗೆ ಅನ್ವಯವಾಗಲಿದ್ದು, ಜೂನ್ 11ರ ಮೊದಲು ವಾಹನ ಖರೀದಿ ನೋಂದಣಿ ಮಾಡಿರುವ ಗ್ರಾಹಕರಿಗೆ ಯಾವುದೇ ಮರುಪಾವತಿಯ ಆಯ್ಕೆಗಳನ್ನು ನೀಡಿಲ್ಲ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಇನ್ನುಇವಿ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಹೊಸ ನಿರ್ಧಾರವನ್ನು ಸ್ವಾಗತಿಸಿರುವ ಎಥರ್ ಕಂಪನಿಯು ಈ ವರ್ಷಾಂತ್ಯಕ್ಕೆ ದೇಶದ 30 ಪ್ರಮುಖ ನಗರಗಳಲ್ಲಿಇವಿ ಮಾರಾಟ ಮಳಿಗೆಗಳನ್ನು ತೆರೆಯುವ ಸಿದ್ದತೆಯಲ್ಲಿದೆ.

ಇವಿ ಸ್ಕೂಟರ್‌ಗಳ ರಾಜ್ಯವಾರು ಹೊಸ ದರ ಪ್ರಕಟಿಸಿದ ಎಥರ್

ಈ ವರ್ಷದ ಅಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 30 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದುವ ವಿಶ್ವಾಸ ವ್ಯಕ್ತಪಡಿಸಿದ್ದು, ಎರಡನೇ ಹಂತದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆ ವಿಸ್ತರಣೆ ಯೋಜನೆಯಲ್ಲಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲೂ ಕೂಡಾ ಎಥರ್ ಕಾರ್ಯಾಚರಣೆ ಆರಂಭಿಸುತ್ತಿದೆ.

Most Read Articles

Kannada
English summary
Ather Energy announces new city-wise prices of the 450x electric scooter. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X