ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಥರ್ ಎನರ್ಜಿ ನಿನ್ನೆ (ಜುಲೈ 7) ತನ್ನ 11ನೇ ಶೋರೂಂ ಅನ್ನು ತೆರೆದಿದೆ. ಎಥರ್ ಎನರ್ಜಿ ಶೋರೂಂಗಳನ್ನು ಎಥರ್ ಸ್ಪೇಸ್ ಎಂದು ಕರೆಯಲಾಗುತ್ತದೆ. ತಿರುಚ್ಚಿಯ ತಿಳ್ಳೈ ನಗರದಲ್ಲಿ ಎಥರ್ ಸ್ಪೇಸ್ ತೆರೆಯಲಾಗಿದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಶೋರೂಂ ತೆರೆಯಲು ಎಥರ್ ಎನರ್ಜಿ ಕಂಪನಿಯು ವೆಲಾ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಎಥರ್ 450 ಎಕ್ಸ್ ಹಾಗೂ ಎಥರ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಟೆಸ್ಟ್ ರೈಡ್'ಗಳಿಗೆ ಹಾಗೂ ಮಾರಾಟಕ್ಕೆ ಇಲ್ಲಿ ಲಭ್ಯವಿರಲಿವೆ ಎಂದು ಎಥರ್ ಎನರ್ಜಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಈ ಬಗ್ಗೆ ಮಾತನಾಡಿರುವ ಎಥರ್ ಎನರ್ಜಿ ಸಿಇಒ ರಾವ್ನೀತ್ ಬೊಕ್ಲಾ, ನಮ್ಮ ಕಂಪನಿಯ ವಾಹನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ ವಿತರಣೆಗಳು ಹೆಚ್ಚಾಗುವ ನಿರೀಕ್ಷೆಗಳಿವೆ. ತಿರುಚ್ಚಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸ್ವಾಗತಿಸಲಾಗುತ್ತದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಬೆಲೆ ಕಡಿಮೆ ಮಾಡಿರುವುದರಿಂದ ನಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕಡಿಮೆಯಾಗಿದೆ. ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದರಿಂದ, ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಇಂಧನ ಬೆಲೆ ಏರಿಕೆಯಾಗುತ್ತಿರುವುದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚು ಬೇಡಿಕೆ ಉಂಟಾಗುತ್ತಿದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಲಾ ಆಟೋಮೊಬೈಲ್ಸ್‌ನ ನಿರ್ದೇಶಕ ಮಣಿವಣ್ಣನ್, ಎಥರ್ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ತಿರುಚ್ಚಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಲು ನಮಗೆ ಸಂತೋಷವಾಗುತ್ತದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಎಥರ್ ಸ್ಪೇಸ್ ಮೂಲಕ ಉತ್ತಮ ಗ್ರಾಹಕ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಅನುಕೂಲಕ್ಕಾಗಿ ತಿರುಚ್ಚಿಯ 5 ಸ್ಥಳಗಳಲ್ಲಿ ಎಥರ್ ಗ್ರಿಡ್ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಅಣ್ಣಾಮಲೈ ನಗರ, ಸಿಂಗರಾಮ್ ನಗರ, ಕಂಟೋನ್ಮೆಂಟ್ ಹಾಗೂ ತಿರುವನಾಯ್ಕೋಯಿಲ್ ಸೇರಿದಂತೆ 5 ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ತಿರುಚ್ಚಿಯಲ್ಲಿ ಇನ್ನೂ 8 ರಿಂದ 10 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಯೋಜನೆಗಳಿವೆ. ಗ್ರಾಹಕರು ಮನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಸೌಲಭ್ಯವನ್ನು ಸ್ಥಾಪಿಸಿಕೊಳ್ಳಲು ನೆರವು ನೀಡುವುದಾಗಿ ಎಥರ್ ಎನರ್ಜಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಕಳೆದ ಎರಡು ವರ್ಷಗಳಲ್ಲಿ ಚೆನ್ನೈನಲ್ಲಿ 450 ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಎಥರ್ ಎನರ್ಜಿ ಹೋಮ್ ಚಾರ್ಜರ್'ಗಳನ್ನು ಸ್ಥಾಪಿಸಲಾಗಿದೆ. ಎಥರ್ ಎನರ್ಜಿಯ ಮೊದಲ ಎಥರ್ ಸ್ಪೇಸ್ ಶೋರೂಂ 2018ರ ಜೂನ್‌ನಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. ನಂತರ ಇದನ್ನು ಚೆನ್ನೈಗೆ ವಿಸ್ತರಿಸಲಾಯಿತು.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಮುಂಬೈ, ಪುಣೆ, ಹೈದರಾಬಾದ್, ಕೊಚ್ಚಿ, ಜೈಪುರ ಹಾಗೂ ಅಹಮದಾಬಾದ್‌ ನಗರಗಳಲ್ಲೂ ಎಥರ್ ಎನರ್ಜಿ ಶೋರೂಂಗಳನ್ನು ತೆರೆಯಲಾಗಿದೆ. ಈಗ ಚೆನ್ನೈಗೆ ಸಮೀಪವಿರುವ ತಿರುಚ್ಚಿಯಲ್ಲಿ ಎಥರ್ ಸ್ಪೇಸ್ ತೆರೆಯಲಾಗಿದೆ. ಶೀಘ್ರದಲ್ಲಿಯೇ ಕೊಯಮತ್ತೂರಿನಲ್ಲಿಯೂ ಎಥರ್ ಸ್ಪೇಸ್ ತೆರೆಯಲಾಗುವುದು.

ತಿರುಚ್ಚಿ ನಗರದಲ್ಲಿ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ತಿರುಚ್ಚಿಯಲ್ಲಿ ಎಥರ್ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ.1,46,296ಗಳಾದರೆ, ಎಥರ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ.1,27,286ಗಳಾಗಿದೆ. ಫೇಮ್ 2 ಯೋಜನೆಯಡಿಯಲ್ಲಿ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದ ನಂತರ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಕಡಿತವಾಗಿವೆ.

Most Read Articles

Kannada
English summary
Ather Energy opens its showroom in Trichy. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X