ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಎನರ್ಜಿ ಕಂಪನಿಯು ಫೇಮ್ 2 ಸಬ್ಸಡಿ ದರ ಹೆಚ್ಚಳದ ನಂತರ ಮಾರಾಟ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ವಿವಿಧ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದೆ. ಕಂಪನಿಯು ಇತ್ತೀಚೆಗೆ ದಹೆಲಿಯಲ್ಲೂ ಮೊದಲ ಬಾರಿಗೆ ಸ್ಕೂಟರ್ ಮಾರಾಟ ಆರಂಭಿಸಿದ್ದು, ಎಥರ್ ಕಂಪನಿಯ 10ನೇ ಮಾರಾಟ ಮಳಿಗೆ ಇದಾಗಿದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ದೆಹಲಿಯಲ್ಲಿ ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಜೊತೆಗೆ ರಾಜ್ಯ ಸರ್ಕಾರದ ಇವಿ ನೀತಿಯ ವಿನಾಯ್ತಿಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಸಾಕಷ್ಟು ಅನುಕೂಲಕವಾಗಿದ್ದು, ದೆಹಲಿಯಲ್ಲಿ ಕಳೆದ ತಿಂಗಳಿನಿಂದ ಇವಿ ವಾಹನ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಹೀಗಾಗಿ ದೆಹಲಿಗೂ ತನ್ನ ಇವಿ ಸ್ಕೂಟರ್ ಮಾರಾಟವನ್ನು ವಿಸ್ತರಿಸಿರುವ ಎಥರ್ ಕಂಪನಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ದುಬಾರಿ ಪೆಟ್ರೋಲ್ ಪರಿಣಾಮ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸುತ್ತಿದ್ದು, ಎಥರ್ ಕಂಪನಿಯು ಈ ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ 27 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿರುವುದಾಗಿ ಭರವಸೆ ನೀಡಿದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ನಮ್ಮ ಬೆಂಗಳೂರಿನಲ್ಲಿ ಸದ್ಯ ಎರಡು ಮಾರಾಟ ಮಳಿಗೆಯನ್ನು ಹೊಂದಿರುವ ಎಥರ್ ಕಂಪನಿಯು ಶೀಘ್ರದಲ್ಲೇ ಮೈಸೂರು ಮತ್ತು ಹುಬ್ಬಳ್ಳಿಯಲ್ಲೂ ಕೂಡಾ ಹೊಸ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆಯಂತೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕಡಿತಗೊಳಿಸಿ ಗ್ರಾಹಕರ ಸೆಳೆಯುತ್ತಿದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಇವಿ ಸ್ಕೂಟರ್ ಸದ್ಯ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ 450 ಪ್ಲಸ್ ಮಾದರಿಗೆ ರೂ. 1.25 ಲಕ್ಷ ಮತ್ತು 450ಎಕ್ಸ್ ಮಾದರಿಯ ಬೆಲೆಯನ್ನು ರೂ. 1.44 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ದೆಹಲಿಯಲ್ಲಿ ಇದೇ ಸ್ಕೂಟರ್‌ಗಳು ರಾಜ್ಯ ಸರ್ಕಾರದ ಇವಿ ನೀತಿಯಡಿ ವಿನಾಯ್ತಿ ನೀಡಿರುವುದರಿಂದ 450 ಪ್ಲಸ್ ಮಾದರಿಯು ರೂ. 1.13 ಲಕ್ಷ ಮತ್ತು 450ಎಕ್ಸ್ ಮಾದರಿಯು ರೂ. 1.32 ಲಕ್ಷ ಬೆಲೆ ಹೊಂದಿದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಸ್ಟ್ಯಾಂಡರ್ಡ್ 450ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, 450 ಎಕ್ಸ್ ಮಾದರಿಯಲ್ಲಿ ಹಲವಾರು ಕನೆಕ್ಟೆಡ್ ಫೀಚರ್ಸ್‌ಗಳಿವೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ರಾಜಧಾನಿ ದೆಹಲಿಗೂ ವಿಸ್ತರಣೆಗೊಂಡ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಎಥರ್ ಕಂಪನಿಯು ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೂ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸುತ್ತಿದ್ದು, ಬಳಕೆದಾರರ ಸ್ನೇಹಿಯಾಗಿರುವ ಹೊಸ ಸ್ಕೂಟರ್‌ಗಳು ಹೊಸ ಮಾರಾಟ ಮಳಿಗೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿವೆ.

Most Read Articles

Kannada
English summary
Ather Energy opens tenth experience centre in New Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X