110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ತನ್ನ 110 ಸಿಸಿ ಪ್ಲಾಟಿನಾ ಬೈಕಿನ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಇತ್ತೀಚೆಗೆ ಈ ಮಾದರಿಯ ಕೆಲವು ಚಿತ್ರಗಳನ್ನು ಬಹಿರಂಗಪಡಿಸಲಾಗಿತ್ತು.

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಈ ಬೈಕಿನಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದ ಡ್ರಮ್ ಬ್ರೇಕ್‌ನೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ರಿಂಗ್ ನೀಡಲಾಗಿದೆ. ಬಜಾಜ್ ಆಟೋ ತನ್ನ 110 ಸಿಸಿ ಬೈಕ್ ಅನ್ನು ಎಬಿಎಸ್ ಟೆಕ್ನಾಲಜಿಯೊಂದಿಗೆ ಬಿಡುಗಡೆಗೊಳಿಸಿದ ಮೊದಲ ಬೈಕ್ ಕಂಪನಿಯಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ 125 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬೈಕುಗಳನ್ನು ಸಿಂಗಲ್ ಹಾಗೂ ಡ್ಯುಯಲ್ ಚಾನೆಲ್ ಎಬಿಎಸ್'ನೊಂದಿಗೆ ಮಾರಾಟ ಮಾಡಲಾಗುತ್ತದೆ.

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಪ್ಲಾಟಿನಾ 110 ಎಬಿಎಸ್ ಬೈಕಿನ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಪ್ಲಾಟಿನಾ ಬೈಕಿನ ವಿನ್ಯಾಸವನ್ನು ಹೋಲುತ್ತದೆ. ಈ ಬೈಕಿನ ವಿನ್ಯಾಸ ಹಾಗೂ ಇತರ ಫೀಚರ್'ಗಳನ್ನು ಬದಲಿಸಿಲ್ಲ. ಪ್ಲಾಟಿನಾ ಐದು ಗೇರುಗಳನ್ನು ಹೊಂದಿರುವ ಮೊದಲ 110 ಸಿಸಿ ಬೈಕ್. ಕಂಪನಿಯು ಐದನೇ ಗೇರ್ ಅನ್ನು ಹೆಚ್-ಗೇರ್ ಅಂದರೆ ಹೈವೇ ಗೇರ್ ಎಂದು ಕರೆಯುತ್ತದೆ. ಹೈವೇಯಲ್ಲಿ ಈ ಬೈಕಿನ ಸ್ಟೆಬಿಲಿಟಿ ಹೆಚ್ಚುವರಿ ಗೇರ್‌ನೊಂದಿಗೆ ಹೆಚ್ಚಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಪ್ಲಾಟಿನಾ 110 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಐ ಸ್ಮಾರ್ಟ್ 110, ಟಿವಿಎಸ್ ವಿಕ್ಟರ್ ಹಾಗೂ ಹೋಂಡಾ ಲಿವೊ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಬೈಕಿನಲ್ಲಿ ಅಳವಡಿಸಿರುವ 110 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಡಿಟಿಎಸ್-ಐ ಎಂಜಿನ್ 7.8 ಬಿಹೆಚ್‌ಪಿ ಪವರ್ ಹಾಗೂ 8.3 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಹೊಸ ಪ್ಲಾಟಿನಾ 110 ಬೈಕಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.59,859ಗಳಾಗಿದೆ. ಬಜಾಜ್ ಆಟೋ ಕಂಪನಿಯು ಉತ್ತಮ ಗುಣಮಟ್ಟದ, ಹೆಚ್ಚು ಮೈಲೇಜ್ ನೀಡುವ ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಹೊಸ ಪ್ಲ್ಯಾಟಿನಾ 110 ಬೈಕಿನಲ್ಲಿ ಸ್ಪ್ರಿಂಗ್ ಆನ್ ಸ್ಪ್ರಿಂಗ್ ನೈಟ್ರಾಕ್ಸ್ ಸಸ್ಪೆಂಷನ್ ಅಳವಡಿಸಲಾಗಿದೆ. ಈ ಸಸ್ಪೆಂಷನ್ ಮೂಲಕ ಬೈಕ್ ಸವಾರಿಯು 15%ನಷ್ಟು ಹೆಚ್ಚು ಆರಾಮದಾಯಕವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸಸ್ಪೆಂಷನ್ ರಸ್ತೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದು, ಹಳೆಯ ಸಸ್ಪೆಂಷನ್ ಗಿಂತ ಬೈಕಿಗೆ ಹೆಚ್ಚು ಸಮತೋಲನವನ್ನು ನೀಡುತ್ತದೆ.

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಈ ಬೈಕಿನಲ್ಲಿರುವ ಸಸ್ಪೆಂಷನ್ ಗಾತ್ರವನ್ನು 20%ನಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಕೆಟ್ಟ ರಸ್ತೆಗಳಲ್ಲಿ ಬೈಕ್ ಚಾಲನೆ ಮಾಡುವಾಗ ಹೆಚ್ಚು ವೈಬ್ರೇಷನ್ ಉಂಟಾಗುವುದಿಲ್ಲ. ಈ ಬೈಕಿನಲ್ಲಿ ಟ್ಯೂಬ್‌ಲೆಸ್ ಟಯರ್‌ಗಳನ್ನು ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಹೊಸ ಪ್ಲಾಟಿನಾ ಬೈಕಿನ ಸ್ಟೈಲಿಂಗ್ ಹಾಗೂ ಫೀಚರ್'ಗಳನ್ನು ಅಪ್ ಡೇಟ್ ಮಾಡಿರುವ ಕಂಪನಿಯು ಎಲ್ಇಡಿ ಹೆಡ್ಲೈಟ್ ಅಳವಡಿಸಿದೆ. ಜೊತೆಗೆ ಎಲ್ಇಡಿ ಡಿ‌ಆರ್‌ಎಲ್'ಗಳನ್ನು ಸಹ ನೀಡಲಾಗಿದೆ. ಎಲ್ಇಡಿ ಹೆಡ್‌ಲೈಟ್‌ನ ಗೋಚರತೆ ಹಳೆಯ ಹೆಡ್‌ಲೈಟ್‌ಗಿಂತ ಹೆಚ್ಚಾಗಿದೆ.

110 ಸಿಸಿ ಸೆಗ್'ಮೆಂಟಿನಲ್ಲಿ ಎಬಿಎಸ್ ಬೈಕ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು 20201ರ ಫೆಬ್ರವರಿ ತಿಂಗಳಿನಲ್ಲಿ ಭಾರತದಲ್ಲಿ 1,48,934 ಯುನಿಟ್ ಬೈಕುಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು ಕಳೆದ ವರ್ಷದ ಫೆಬ್ರವರಿ ತಿಂಗಳ ಮಾರಾಟಕ್ಕಿಂತ 1%ನಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಫೆಬ್ರವರಿ ತಿಂಗಳಿನಲ್ಲಿ ಒಟ್ಟು 1,83,629 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿದೆ. ಈ ಬಗ್ಗೆ ಟೀಂ ಬಿಹೆಚ್‌ಪಿ ವರದಿ ಮಾಡಿದೆ.

Most Read Articles

Kannada
English summary
Bajaj Auto launches single channel abs bike in 110 cc segment. Read in Kannada.
Story first published: Monday, March 1, 2021, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X