ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಜಾಜ್ ಪಲ್ಸರ್ ಸರಣಿಯ ಬೈಕುಗಳನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸಿತು. ಇದೀಗ ತನ್ನ ಡೋಮಿನಾರ್ 250 ಬೈಕ್ ಕೂಡ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಹೊಸ ಬಜಾಜ್ ಡೋಮಿನಾರ್ 250 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಮತ್ತು ಮ್ಯಾಟ್ ಸಿಲ್ವರ್, ರೇಸಿಂಗ್ ರೆಡ್ ಮತ್ತು ಮ್ಯಾಟ್ ಸಿಲ್ವರ್, ಮತ್ತು ಸಿಟ್ರಸ್ ರಶ್ ಮತ್ತು ಮ್ಯಾಟ್ ಸಿಲ್ವರ್ ಎಂಬ ಮೂರು ಹೊಸ ಬಣ್ಣಗಳ ಆಯ್ಕೆಯನು ಪಡೆದುಕೊಂಡಿದೆ. ಇನ್ನು ಈಗಗಾಲೇ ಭಾರತೀಯ ಮಾರುಕಟ್ಟೆಯಲ್ಲಿ ಕ್ಯಾನ್ಯನ್ ರೆಡ್ ಮತ್ತು ಚಾರ್ಕೋಲ್ ಬ್ಲಾಕ್ ಬಣ್ಣಗಳ ಆಯ್ಕೆಯ ಮಾದರಿಗಳು ಲಭ್ಯವಿರುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಹೊಸ ಬಜಾಜ್ ಡೋಮಿನಾರ್ 250 ಬೈಕ್ ಅಲಾಯ್ ವ್ಹೀಲ್ ಗಳ ವಿನ್ಯಾಸವು ಕ್ವಾರ್ಟರ್-ಲೀಟರ್ ಬೈಕಿನಲ್ಲಿರುವ ಫಿನಿಶ್‌ನಂತೆಯೇ ಉಳಿದಿದೆ. ಎಂಜಿನ್ ಗಾರ್ಡ್, ಇಂಧನ ಟ್ಯಾಂಕ್ ಮತ್ತು ವಿಸ್ತರಣೆಗಳು, ಸೈಡ್ ಪ್ಯಾನಲ್‌ಗಳು, ಮುಂಭಾಗದ ಕೌಲ್ ಪ್ರದೇಶ, ಇತ್ಯಾದಿಗಳನ್ನು ಕೆಂಪು, ಕಪ್ಪು ಅಥವಾ ಹಸಿರು ಬಣ್ಣದಲ್ಲಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಈ ಹೊಸ ಬಣ್ಣಗಳ ಆಯ್ಕೆಯ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಗಳ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡು ಜಾಜ್ ಡೋಮಿನಾರ್ 250 ಬೈಕ್ ಮತ್ತಷ್ಟು ಆಕರ್ಷಕವಾಗಿದೆ. ಹೊಸ ಬಣ್ಣಗಳ ಆಯ್ಕೆಯು ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯುವಂತಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೋಮಿನಾರ್ 250 ಬೈಕ್ ತನ್ನದೆ ಹಿರಿಯಣ್ಣ ಎಂದೇ ಹೇಳಬಹುದಾದ ಡೋಮಿನಾರ್ 400 ಬೈಕಿನ ಮಾದರಿಯಲ್ಲಿದೆ. ಆದರೆ ಡೋಮಿನಾರ್ 250 ಬೈಕಿನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಡೋಮಿನಾರ್ 250 ಬೈಕ್ 'ಡಿ250' ಬ್ಯಾಡ್ಜ್ ನೊಂದಿಗೆ ಆಕರ್ಷಕ ಬಣ್ಣವನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೋಮಿನಾರ್ 250 ಬೈಕ್ ಸ್ಪೂರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳಿವೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್, ಯುಎಸ್ಡಿ ಫೋರ್ಕ್ ಹಾಗೂ ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸಗಳಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೋಮಿನಾರ್ 400 ಬೈಕಿಗೆ ಹೋಲಿಸಿದರೆ ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಟಯರ್ ಪ್ರೊಫೈಲ್‍ ಗಳು ಕೂಡ ಭಿನ್ನವಾಗಿದೆ. ಇನ್ನು ಈ ಬೈಕ್ ಡೋಮಿನಾರ್ 400 ಮಾದರಿಗಿಂತ ತೂಕ ಕಡಿಮೆ ಇದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಕೆಟಿಎಂ 250 ಡ್ಯೂಕ್‍‍ನಲ್ಲಿರುವಂತಹ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 26.6 ಬಿಹೆಚ್‍ಪಿ ಪವರ್ ಮತ್ತು 23.5 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಈ ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಸುರಕ್ಷತಾ ದೃಷ್ಠಯಿಂದ ಪ್ರಮುಖವಾದ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೋಮಿನಾರ್ 400 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡಿದರೆ, ಬಜಾಜ್ ಡೋಮಿನಾರ್ 250 ಮಾದರಿಯು ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಫ್‌ಜೆಡ್ 25 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿರುವುದರಿಂದ ಡೋಮಿನಾರ್ 250 ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Bajaj auto ready to introduced new colour options for dominar 250 details
Story first published: Thursday, August 5, 2021, 20:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X