ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ 2021ರ ನವೆಂಬರ್ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಬಜಾಜ್ ಆಟೋ ಕಂಪನಿಯ ದ್ವಿಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳ ಒಟ್ಟಾರೆ ಪ್ರಮಾಣವು ಶೇಕಡಾ 10 ರಷ್ಟು ಕಡಿಮೆಯಾಗಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,22,240 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಇನ್ನು ಈ ವರ್ಷದ ಇದೇ ತಿಂಗಳಿನಲ್ಲಿ 3,79,276 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಬಜಾಜ್‌ನ ಒಟ್ಟಾರೆ ದ್ವಿಚಕ್ರ ವಾಹನ ಮಾರಾಟದಲ್ಲಿ ಇಳಿಕೆಯಾಗಿದೆ. 2021ರ ನವೆಂಬರ್ ತಿಂಗಳಿನಲ್ಲಿ 3,38,473 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 3,84,993 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.12 ರಷ್ಟು ಇಳಿಕೆಯಾಗಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಕಡಿಮೆಯಾಗಿದೆ. ವಾಸ್ತವವಾಗಿ, ಬಜಾಜ್ ಆಟೋದ ಒಟ್ಟು ದೇಶೀಯ ಮಾರುಕಟ್ಟೆಯಲ್ಲಿ (ದ್ವಿಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ) ನವೆಂಬರ್ 2021 ರಲ್ಲಿ ಶೇಕಡಾ 20 ರಷ್ಟು ಕಡಿಮೆಯಾಗಿದೆ, 2020ರ ನವೆಂಬರ್ ತಿಂಗಳಿನಲ್ಲಿ 1,98,933 ಯುನಿಟ್‌ಗಳಾದರೆ 1,58,755 ಯುನಿಟ್‌ಗಳಿಗೆ ಇಳಿದಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ವಾಣಿಜ್ಯ ವಾಹನಗಳ ಮಾರಾಟವು ದೇಶೀಯ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿದೆ, 2021ರ ನವೆಂಬರ್ ತಿಂಗಳಿನಲ್ಲಿ 13,802 ಯುನಿಟ್‌ಗಳ ಮಾರಾಟವು ನವೆಂಬರ್ 2020 ಕ್ಕಿಂತ 29 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಬಜಾಜ್ ಆಟೋ ಮೋಟಾರ್‌ಸೈಕಲ್‌ಗಳ ವಿಶ್ವದ ಮೂರನೇ ಅತಿದೊಡ್ಡ ತಯಾರಕ ಮತ್ತು ಭಾರತದ ಅತಿದೊಡ್ಡ ಮೋಟರ್‌ಸೈಕಲ್‌ಗಳ ರಫ್ತುದಾರ, 70 ದೇಶಗಳಲ್ಲಿ ಬಜಾಜ್ ಆಟೋ ವಾಹನಗಳನ್ನು ಮಾರಾಟ ಮಾಡುತ್ತಿದೆ. ಬಜಾಜ್ ಆಟೋ ತನ್ನ ಉತ್ಪಾದನಾ ಸೌಲಭ್ಯಗಳನ್ನು ಪುಣೆ ಬಳಿಯ ಚಕನ್, ಔರಂಗಾಬಾದ್ ಬಳಿಯ ವಾಲುಜ್ ಮತ್ತು ಉತ್ತರಾಖಂಡದ ಪಂತನಗರದಲ್ಲಿ ಹೊಂದಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಪಲ್ಸರ್ ಜನಪ್ರಿಯ ಬ್ರ್ಯಾಂಡ್ ಆಗಿದೆ. ಈ ಬಜಾಜ್ ಪಲ್ಸರ್ ಬೈಕ್‍ಗಳಿಗೆ ಭಾರತದಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. ಪಲ್ಸರ್ ಬೈಕ್‍ಗಳು ಭಾರತದ ರಸ್ತೆಗಳಲ್ಲಿ ದಶಕಗಳಿಂದ ಪಾರುಪತ್ಯವನ್ನು ಸಾಧಿಸುತ್ತಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ಪಲ್ಸರ್ ಎಫ್250 ಮತ್ತು ಎನ್250 ಎಂಬ ಹೊಸ ಬೈಕ್‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದರ ಮೂಲಕ ಪಲ್ಸರ್ ಸರಣಿಯನ್ನು ವಿಸ್ತರಿಸಿದೆ. ಹೊಸ ಪಲ್ಸರ್ 250 ರೇಂಜ್ ದೊಡ್ಡ ಮತ್ತು ಪವರ್ ಫುಲ್ ಬೈಕ್‍ಗಳಾಗಿವೆ. ಈ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಲಾಗಿವೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಇದರಲ್ಲಿ ಹೊಸ ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಆಗಿದ್ದರೆ, ಪಲ್ಸರ್ ಎಫ್250 ಸೆಮಿ-ಫೇರ್ಡ್ ಬೈಕ್ ಆಗಿದೆ. ಈ ಹೊಸ ಬಜಾಜ್ ಪಲ್ಸರ್ ಎನ್250 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ FZ25 ಮತ್ತು ಸುಜುಕಿ ಜಿಕ್ಸರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿರುವುದರಿಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವಾಗಿ ಮಾರಾಟವಾಗುತ್ತಿದೆ. ಅದರಲ್ಲಿಯು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಬಜಾಜ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಸರಣಿಯನ್ನು ಹೆಚ್ಚು ಕೈಗೆಟುಕುವ ದರದಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಈ ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್ ಅಥವಾ ಫ್ಲ್ಯೂರ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪುಣೆಯಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಕಾಣಿಸಿಕೊಂಡಿದೆ. ಈ ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ನಡೆಸುವಾಗ ಹೆಚ್ಚು ಭಾಗ ಮರೆಮಾಚಲಾಗಿತ್ತು. ಆದರೆ ಕೆಲವು ವಿವರಗಳನ್ನು ನೋಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ ಸ್ಟೈಲಿಂಗ್ ಅನ್ನು ಹೊಂದಿದೆ. ಆದರೆ ಹೆಡ್‌ಲ್ಯಾಂಪ್ ಅನ್ನು ಏಪ್ರನ್‌ನಲ್ಲಿ ಅಳವಡಿಸಲಾಗಿದೆ ಎಂದು ತೋರುತ್ತದೆ ಆದರೆ ಹಿಂಭಾಗದ ತುದಿಯು ಚೇತಕ್‌ಗೆ ಹೋಲಿಸಿದರೆ ಕನಿಷ್ಠವಾಗಿದೆ.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಈ ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ನಂಬರ್ ಪ್ಲೇಟ್ ಹೋಲ್ಡರ್ ಅನ್ನು ಸ್ವಿಂಗರ್ಮ್ ಪ್ರದೇಶದ ಮೇಲೆ ನಿಗದಿಪಡಿಸಲಾಗಿದೆ ಮತ್ತು ಇದು ಚೇತಕ್ ಎಲೆಕ್ಟ್ರಿಕ್‌ನಂತೆಯೇ ಕಾಣುತ್ತದೆ. ಉತ್ಪಾದನಾ ವೆಚ್ಚವನ್ನು ಸ್ಪರ್ಧಾತ್ಮಕವಾಗಿಡಲು ಎರಡೂ ಸ್ಕೂಟರ್‌ಗಳು ಸಾಮಾನ್ಯವಾಗಿ ಬ್ಯಾಟರಿ ಅಗತ್ಯತೆಗಳು ಮತ್ತು ನಿರ್ಣಾಯಕ ಯುನಿಟ್ ಗಳನ್ನು ಹೊಂದಬಹುದು ಎಂದು ನಿರೀಕ್ಷಿಸುತ್ತೇವೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ 4kW ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಬಹುದು ಮತ್ತು ಮುಂಬರುವ ಕೈಗೆಟುಕುವ ಆವೃತ್ತಿಯು ಕಡಿಮೆ ವ್ಯಾಪ್ತಿಯೊಂದಿಗೆ ಸಣ್ಣ ಬ್ಯಾಟರಿಯನ್ನು ಹೊಂದಬಹುದು ಮತ್ತು ರೈಡ್ ಮೋಡ್‌ಗಳನ್ನು ನೀಡಬಹುದು.

ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Bajaj Auto

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಎಲ್ಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಎಲ್ಕ್ಟ್ರಿಕ್ ಸ್ಕೂಟರ್ ಮಾದರಿಯು ಪೈಪೋಟಿ ನೀಡುತ್ತದೆ.

Most Read Articles

Kannada
English summary
Bajaj auto sales report november 2021 find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X