ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಕಳೆದ ವರ್ಷ ಬಜಾಜ್ ಕಂಪನಿಯು ಬಿಡುಗಡೆಗೊಳಿಸಿದ್ದರು. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿರುವುದರಿಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವಾಗಿ ಮಾರಾಟವಾಗುತ್ತಿದೆ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಅದರಲ್ಲಿಯು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಅದರಂತೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 288 ಯುನಿಟ್‌ಗಳನ್ನು ಮಾರಾಟವಾಗಿತ್ತು.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಈ ವರ್ಷದ ಅದೇ ತಿಂಗಳಿನಲ್ಲಿ 642 ಯುನಿಟ್‌ಗಳು ಮಾರಾಟವಾಗಿವೆ. ಇದು ವರ್ಷದಿಂದ ವರ್ಷದ ಶೇ.123 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಭಾರತದಲ್ಲಿನ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಬಜಾಜ್ ಆಟೋ, ಕಳೆದ ವರ್ಷದ ಆರಂಭದಲ್ಲಿ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿತು, ಇದೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಈ ಐಕಾನಿಕ್ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸುವ ಪ್ರಯತ್ನವನ್ನು ಬಜಾಜ್ ಕಂಪನಿಯು ಮಾಡಿತು. ಆದರೆ ಆರಂಭಿಕ ಹಂತದಿಂದಲ್ಲೇ ಬಜಾಜ್ ಕಂಪನಿಯು ಹಲವು ವಿಘ್ನಗಳನ್ನು ಎದುರಿಸಬೇಕಾಯಿತು. ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದ ಬಗ್ಗೆ ಹಲವರು ಟೀಕೆಯನ್ನು ಮಾಡಿದರು.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿದ್ದರು. ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಮೊದಲ ತಿಂಗಳಲ್ಲಿ ಕೇವಲ 21 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದ್ದರು. ಕೊರೋನಾ ಸೋಂಕಿನಿಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿತ್ತು.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಇದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗದೆ ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಬುಕ್ಕಿಂಗ್ ಸ್ವೀಕರಿಸುವುದನ್ನು ಕೆಲವು ಬಾರೀ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಚೇತಕ್ ಸ್ಕೂಟರ್ ತಯಾರಿಸಲು ವಿದೇಶದಿಂದ ಹಲವಾರು ಯುನಿಟ್ ಗಳನ್ನು ಬಳಸಿಕೊಳ್ಳುತ್ತದೆ ಮತ್ತು ಅವುಗಳ ಕೊರತೆಯಿಂದ ಉತ್ಪಾದನಾ ಅಡಚಣೆಯಾಗಿತ್ತು.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಬಜಾಚ್ ಚೇತಕ್ ಉತ್ಪಾದಿಸಲು ಕೆಲವು ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ವಿದೇಶದಿಂದ ಬರುವ ಬಿಡಿಭಾಗಗಳ ಆಮದು ಮಾಡಿಕೊಳ್ಳುವಲ್ಲಿ ಸಮಸ್ಯೆಯಾಗಿತ್ತು. ಇನ್ನು ಇತ್ತೀಚೆಗೆ ಎಲೆಕ್ಟ್ರಿಕಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯ ಜನರ ಜೊತೆ ಸೆಲಬ್ರಿಟಿಗಳನ್ನು ಈ ಸ್ಕೂಟರ್ ಆಕರ್ಷಿಸಿದೆ. ಬಾಲಿವುಡ್ ನಿರ್ದೇಶಕಿ ಮತ್ತು ನಿರ್ಮಾಪಕಿ ಕಿರಣ್ ರಾವ್ ಅವರು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದಾರೆ. ನಿರ್ದೇಶಕಿ ಕಿರಣ್ ರಾವ್ ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನವನ್ನು ಕೂಡ ಒಳಗೊಂಡಿದೆ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌‌ನಲ್ಲಿ ಭವಿಷ್ಯದಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಸೌಲಭ್ಯವನ್ನು ಒದಗಿಸುವ ಗುರಿಹೊಂದಿದೆ. ಇನ್ನು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಕೂಡ ಹೊಂದಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಗಗನಕ್ಕೇರಿದ ಇಂಧನ ಬೆಲೆ: ಭಾರೀ ಬೇಡಿಕೆ ಪಡೆದುಕೊಂಡ Bajaj Chetak ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್, ಅಥರ್ 450, ಸಿಂಪಲ್ ಎನರ್ಜಿ ಒನ್ ಮತ್ತು ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತಿದೆ. ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.

Most Read Articles

Kannada
English summary
Bajaj chetak electric scooter registers 123 percent sales growth in september 2021 details
Story first published: Friday, October 29, 2021, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X