ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಡೋಮಿನಾರ್ 250 ಆವೃತ್ತಿಯನ್ನು ಗ್ರಾಹಕರ ಬೇಡಿಕೆಯೆಂತೆ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಇದೀಗ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

250 ಸಿಸಿ ವಿಭಾಗದಲ್ಲಿ ಸದ್ಯ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಡೋಮಿನಾರ್ 250 ಆವೃತ್ತಿಯು ಇದೀಗ ಮೂರು ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಮಾದರಿಯು ಸಿಂಗಲ್ ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.54 ಲಕ್ಷ ಬೆಲೆ ಪಡೆದುಕೊಂಡಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಡೋಮಿನಾರ್ 400 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಹೊಸ ಡೋಮಿನಾರ್ 250 ಮಾದರಿಯು ಈಗಾಗಲೇ ಕ್ಯಾನಿಯಾನ್ ರೆಡ್ ಮತ್ತು ಚಾರ್ಕೊಲ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಡ್ಯುಯಲ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ರೇಸಿಂಗ್ ಜೊತೆ ಮ್ಯಾಟ್ ಸಿಲ್ವರ್, ಸಿಟ್ರಸ್ ರಷ್ ಜೊತೆ ಮ್ಯಾಟ್ ಸಿಲ್ವರ್ ಮತ್ತು ಸ್ಪಾರ್ಕಿಂಗ್ ಬ್ಲ್ಯಾಕ್ ಜೊತೆ ಮ್ಯಾಟೆ ಸಿಲ್ವರ್ ಬಣ್ಣಗಳ ಆಯ್ಕೆ ನೀಡಲಾಗಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಡೋಮಿನಾರ್ 250 ಮಾದರಿಯಲ್ಲಿ ಡ್ಯುಯಲ್ ಬಣ್ಣಗಳ ಆಯ್ಕೆ ಹೊರತುಪಡಿಸಿ ಫೀಚರ್ಸ್ ಎಂಜಿನ್ ಆಯ್ಕೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಂತೆ ಮುಂದುವರಿಸಿದ್ದು, ಹೊಸ ಬಣ್ಣದ ಆಯ್ಕೆಯು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ಹೊಸ ಬೈಕ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದ್ದು, ಹೊಸ ಬೈಕ್ ಮುಂದಿನ ಕೆಲವೇ ವಾರಗಳಲ್ಲಿ ಗ್ರಾಹಕರ ಕೈಸೇರಲಿದೆ. ಇನ್ನು ಡೋಮಿನಾರ್ 250 ಮಾದರಿಯು 248 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, ಸ್ಲಿಪ್-ಅಸಿಸ್ಟ್ ಕ್ಲಚ್ ಪಡೆದುಕೊಂಡಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಬೈಕ್ ಮಾದರಿಯು ಸ್ಲಿಪ್-ಅಸಿಸ್ಟ್ ಕ್ಲಚ್ ಪ್ರೇರಿತ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, 25 ಬಿಎಚ್‌ಪಿ ಮತ್ತು 23.5 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಡೋಮಿನಾರ್ 250 ಬೈಕಿನಲ್ಲಿ ಎಲ್ಇಡಿ ಲೈಟಿಂಗ್ಸ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್, 17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 13 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಮತ್ತು ವಿಭಜಿತ ಆಸನ ಸೌಲಭ್ಯ ಪಡೆದುಕೊಂಡಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್, 320 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 230 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೋಡಿಸಲಾಗಿದ್ದು, ಮುಂಭಾಗದಲ್ಲಿ ಯುಎಸ್‌ಡಿ ಫೋಕ್ಸ್ ಸಸ್ಷೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾರ್ಕ್ ಸಸ್ಷೆಷನ್ ನೀಡಲಾಗಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಬೈಕ್ ವಿನ್ಯಾಸವನ್ನು ಡೋಮಿನಾರ್ ಸರಣಿಯ ಹಿರಿಯಣ್ಣ ಡೋಮಿನಾರ್ 400 ಮಾದರಿಯಿಂದಲೇ ವಿನ್ಯಾಸವನ್ನು ಎರವಲು ಪಡೆದುಕೊಳ್ಳಲಾಗಿದ್ದು, ಸ್ಪೋರ್ಟ್ ಟೂರಿಂಗ್ ವಿಭಾಗದಲ್ಲಿ ಡೋಮಿನಾರ್ ಸರಣಿ ಅತ್ಯಧಿಕ ಮಾರಾಟಗೊಂಡ ಮಾದರಿಯಾಗಿದೆ.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಜೊತೆಗೆ ಸ್ಪೋರ್ಟ್ ಟೂರಿಂಗ್ ವಿಭಾಗವನ್ನು ಬಲಪಡಿಸುವ ಉದ್ದೇಶದಿಂದ ಡೋಮಿನಾರ್ ಸರಣಿಯಲ್ಲಿ 250 ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಕಳೆದ ತಿಂಗಳು ಇದೇ ಬೈಕಿನ ಬೆಲೆಯಲ್ಲಿ ಕಡಿತ ಮಾಡಿ ಗ್ರಾಹಕರ ಆಯ್ಕೆ ಹೆಚ್ಚಿಸಿತ್ತು.

ಡೋಮಿನಾರ್ 250 ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ ಬಜಾಜ್ ಆಟೋ

ಡೋಮಿನಾರ್ 250 ಬೈಕಿನ ಬೆಲೆಯನ್ನು ಕಳೆದ ತಿಂಗಳು ರೂ. 1.64 ಲಕ್ಷದಿಂದ ರೂ. 1.54 ಲಕ್ಷಕ್ಕೆ ಇಳಿಕೆ ಮಾಡಿದ್ದು, ಇದೀಗ ಹೊಸ ಬಣ್ಣದ ಆಯ್ಕೆ ನೀಡಿದಾಗಲೂ ಬೈಕಿನ ಬೆಲೆ ಯಾವುದೇ ಹೆಚ್ಚಳ ಮಾಡಲಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿದೆ.

Most Read Articles

Kannada
English summary
Bajaj dominar 250 dual tone colours launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X