ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ದೇಶಿಯ ಮಾರುಕಟ್ಟೆಯಲ್ಲಿ ಕ್ರಮಣಕಾರಿ ಮಾರುಕಟ್ಟೆ ತಂತ್ರವನ್ನು ಹೊಂದಿದ್ದಾರೆ. ಇತ್ತೀಚೆಗೆ ಬಜಾಜ್ ಆಟೋ ಕಂಪನಿಯು ಭಾರತದಲ್ಲಿ ಪಲ್ಸರ್ ಎನ್ಎಸ್ 125 ಬೈಕನ್ನು ಬಿಡುಗಡೆಗೊಳಿಸಿತ್ತು.

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಇದೀಗ ಬಜಾಜ್ ಆಟೋ ಕಂಪನಿಯು ತನ್ನ ಪಲ್ಸರ್ 150, ಪಲ್ಸರ್ 180 ಮತ್ತು ಪಲ್ಸರ್ 220ಎಫ್ ಬೈಕ್‌ಗಳಿಗಾಗಿ ಹೊಸ ಡೆಗರ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಡೆಗರ್ ಎಡಿಷನ್ ಮಾದರಿಗಳು ಹೊಸ ಬಣ್ಣಗಳ ಆಯ್ಕೆ ಮತ್ತು ಗ್ರಾಫಿಕ್ ಗಳನ್ನು ಪಡೆದುಕೊಂಡಿದೆ. ಅಲ್ಲದೇ ಈ ಮಾದರಿಗಳು ಬಜಾಜ್ ಆಟೋ ಕಂಪನಿಗೆ ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಹೊಸ ಡೆಗರ್ ಎಡಿಷನ್ ಮಾದರಿಗಳು ಹೆಚ್ಚಾಗಿ ಯುವಗ್ರಾಹಕರನ್ನು ಸೆಳೆಯುತ್ತದೆ.

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಪಲ್ಸರ್ 150 ಡೆಗರ್ ಎಡ್ಜ್ ಎಡಿಷನ್

ಈ ಬಜಾಜ್ ಪಲ್ಸರ್ 150 ಡೆಗರ್ ಎಡಿಷನ್ ಮಾದರಿಯು ಪರ್ಲ್ ವೈಟ್ ಮತ್ತು ಸ್ಯಾಫೈರ್ ಬ್ಲೂ. ಪರ್ಲ್ ವೈಟ್ ಬಣ್ಣವನ್ನು ರೆಡ್ ಮುಖ್ಯಾಂಶಗಳೊಂದಿಗೆ ನೀಡಲಾಗುತ್ತದೆ, ಇದು ಮಡ್‌ಗಾರ್ಡ್ ಮತ್ತು ರಿಮ್ಸ್‌ನಲ್ಲಿ ಲಭ್ಯವಿದೆ. ರೆಡ್-ಬ್ಲ್ಯಾಕ್ ಗ್ರಾಫಿಕ್ಸ್ ಅನ್ನು ಇಂಧನ ಟ್ಯಾಂಕ್ ಮತ್ತು ಬೆಲ್ಲಿ ಪ್ಯಾನ್‌ನಲ್ಲಿ ಕಾಣಬಹುದು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಇನ್ನು ಸಫೈರ್ ಬ್ಲೂ ಬಣ್ಣವು ಮಡ್‌ಗಾರ್ಡ್ ಮತ್ತು ರಿಮ್ಸ್‌ನಲ್ಲಿ ವೈಟ್ ಬಣ್ಣದ ಮುಖ್ಯಾಂಶಗಳೊಂದಿಗೆ ಬರುತ್ತದೆ. ಇನ್ನು ಈ ಬೈಕಿನ ಮೇಲೆ ಬ್ಲ್ಯಾಕ್ ಗ್ರಾಫಿಕ್ಸ್ ಅನ್ನು ನೀಡಿದೆ. ಈ ಪಲ್ಸರ್ 150 ಬೈಕಿನ ಬೆಲೆಯು ರೂ.1,01,818 ಗಳಾದರೆ ಪಲ್ಸರ್ 150 ಟ್ವಿನ್-ಡಿಸ್ಕ್ ಮಾದರಿಯ ಬೆಲೆಯು ರೂ.1,01,818 ಗಳಾಗಿದೆ.

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಈ ಬೈಕಿನಲ್ಲಿ 149.5 ಸಿಸಿ ಫೋರ್-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 13.8 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 13.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಈ ರೂಪಾಂತರವು ಹೊಸ ಹೆಚ್ಚುವರಿ ವಾಲ್ಕನೊ ರೆಡ್ ಮತ್ತು ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳೊಂದಿಗೆ ಪಲ್ಸರ್ 150 ನಲ್ಲಿ ನೀಡಲಾಗುವ ಪರ್ಲ್ ವೈಟ್ ಬಣ್ಣವನ್ನು ಹೊಂದಿದೆ. ವಾಲ್ಕನೊ ರೆಡ್ ಬಣ್ಣವು ವೈಟ್-ಬ್ಲ್ಯಾಕ್ ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ, ಆದರೆ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣವು ರೆಡ್ ಗ್ರಾಫಿಕ್ಸ್ ಮತ್ತು ಮುಖ್ಯಾಂಶಗಳನ್ನು ಪಡೆಯುತ್ತದೆ.

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಇನ್ನು ಪಲ್ಸರ್ 180 ಡೆಗರ್ ಎಡಿಷನ್ ನಲ್ಲಿ 178.6 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 16.8 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 14.52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ಬೆಲೆಯು ರೂ,1,09,651 ಆಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಪಲ್ಸರ್ 220ಎಫ್ ಡೆಗರ್ ಎಡ್ಜ್ ಎಡಿಷನ್

ಈ ಪಲ್ಸರ್ 220ಎಫ್ ಡೆಗರ್ ಎಡಿಷನ್ ರೂಪಾಂತರವು ಪರ್ಲ್ ವೈಟ್, ಸ್ಯಾಫೈರ್ ಬ್ಲೂ, ವಾಲ್ಕೆನೊ ರೆಡ್ ಮತ್ತು ಸ್ಪಾರ್ಕಲ್ ಬ್ಲ್ಯಾಕ್ ಎಂಬ 4 ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದರೊಂದಿಗೆ ಆಕರ್ಷಕ ಗ್ರಾಫಿಕ್ಸ್ ಅನ್ನು ಹೊಂದಿದೆ.

ಪಲ್ಸರ್ ಬೈಕ್‌ಗಳಿಗಾಗಿ ಡೆಗರ್ ಎಡ್ಜ್ ಎಡಿಷನ್ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಇನ್ನು ಈ ಡೆಗರ್ ಎಡಿಷನ್ ಮಾದರಿಯಲ್ಲಿ 220 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 20.1 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 18.55 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪಲ್ಸರ್ 220ಎಫ್ ಡೆಗರ್ ಎಡ್ಜ್ ಎಡಿಷನ್ ಬೆಲೆಯು ರೂ.1,28,250 ಆಗಿದೆ.

Most Read Articles

Kannada
English summary
New Bajaj Pulsar Dagger Edge Edition Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X