Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಕಳೆದ ವರ್ಷ ಬಜಾಜ್ ಕಂಪನಿಯು ಬಿಡುಗಡೆಗೊಳಿಸಿದ್ದರು. ಈ ಐಕಾನಿಕ್ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸುವ ಪ್ರಯತ್ನವನ್ನು ಬಜಾಜ್ ಆಟೋ ಕಂಪನಿಯು ಮಾಡಿತು.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿರುವುದರಿಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವಾಗಿ ಮಾರಾಟವಾಗುತ್ತಿದೆ. ಅದರಲ್ಲಿಯು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಅದರಂತೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಭಾರೀ ಏರಿಕೆಯಾಗಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇನ್ನು ಸುಜುಕಿ ಬರ್ಗ್‌ಮ್ಯಾನ್ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ. ಇದರಿಂದ ಇಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಲಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಇದರಿಂದ ಬಜಾಜ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಸರಣಿಯನ್ನು ಹೆಚ್ಚು ಕೈಗೆಟುಕುವ ದರದಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ. ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್ ಅಥವಾ ಫ್ಲ್ಯೂರ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪುಣೆಯಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಕಾಣಿಸಿಕೊಂಡಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಈ ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ನಡೆಸುವಾಗ ಹೆಚ್ಚು ಭಾಗ ಮರೆಮಾಚಲಾಗಿತ್ತು. ಆದರೆ ಕೆಲವು ವಿವರಗಳನ್ನು ನೋಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ ಸ್ಟೈಲಿಂಗ್ ಅನ್ನು ಹೊಂದಿದೆ. ಆದರೆ ಹೆಡ್‌ಲ್ಯಾಂಪ್ ಅನ್ನು ಏಪ್ರನ್‌ನಲ್ಲಿ ಅಳವಡಿಸಲಾಗಿದೆ ಎಂದು ತೋರುತ್ತದೆ ಆದರೆ ಹಿಂಭಾಗದ ತುದಿಯು ಚೇತಕ್‌ಗೆ ಹೋಲಿಸಿದರೆ ಕನಿಷ್ಠವಾಗಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಈ ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ನಂಬರ್ ಪ್ಲೇಟ್ ಹೋಲ್ಡರ್ ಅನ್ನು ಸ್ವಿಂಗರ್ಮ್ ಪ್ರದೇಶದ ಮೇಲೆ ನಿಗದಿಪಡಿಸಲಾಗಿದೆ ಮತ್ತು ಇದು ಚೇತಕ್ ಎಲೆಕ್ಟ್ರಿಕ್‌ನಂತೆಯೇ ಕಾಣುತ್ತದೆ. ಉತ್ಪಾದನಾ ವೆಚ್ಚವನ್ನು ಸ್ಪರ್ಧಾತ್ಮಕವಾಗಿಡಲು ಎರಡೂ ಸ್ಕೂಟರ್‌ಗಳು ಸಾಮಾನ್ಯವಾಗಿ ಬ್ಯಾಟರಿ ಅಗತ್ಯತೆಗಳು ಮತ್ತು ನಿರ್ಣಾಯಕ ಯುನಿಟ್ ಗಳನ್ನು ಹೊಂದಲು ನಿರೀಕ್ಷಿಸಲಾಗಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಎಲೆಕ್ಟ್ರಿಕ್ 4kW ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಬಹುದು ಮತ್ತು ಮುಂಬರುವ ಕೈಗೆಟುಕುವ ಆವೃತ್ತಿಯು ಕಡಿಮೆ ವ್ಯಾಪ್ತಿಯೊಂದಿಗೆ ಸಣ್ಣ ಬ್ಯಾಟರಿಯನ್ನು ಹೊಂದಬಹುದು ಮತ್ತು ರೈಡ್ ಮೋಡ್‌ಗಳನ್ನು ನೀಡಬಹುದು.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಟೇಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ಸ್ಪೈ ಚಿತ್ರದಲ್ಲಿ ಕಾಣಬಹುದು ಆದರೆ ಅವು ಇನ್ನೂ ಉತ್ಪಾದನೆಗೆ ಸಿದ್ಧವಾಗಿರುವ ಸ್ಥಿತಿಯಲ್ಲಿವೆಯೇ ಎಂಬ ಬಗ್ಗೆ ನಮಗೆ ಸಂದೇಹವಿದೆ. ಬಜಾಜ್ ಕಂಪನಿಯು ಮುಂಬರುವ ಸ್ಕೂಟರ್‌ನಲ್ಲಿ ಕೀಲೆಸ್ ಫೀಚರ್ ಮತ್ತು ಸ್ವಿಗಿನಿಟಿಯಲ್ ಟರ್ನ್ ಸಿಗ್ನಲ್‌ಗಳಂತಹ ವೈಶಿಷ್ಟ್ಯಗಳನ್ನು ನೀಡುವುದಿಲ್ಲ ಮತ್ತು ಚೇತಕ್ ಎಲೆಕ್ಟ್ರಿಕ್‌ಗೆ ಹೋಲಿಸಿದರೆ ಸ್ವಿಚ್‌ಗಿಯರ್ ಮತ್ತು ಬಾಡಿ ಪ್ಯಾನೆಲ್‌ಗಳು ವೆಚ್ಚ ಕಡಿತಕ್ಕೆ ಒಳಗಾಗಬಹುದು.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಫ್ಲೋರ್ ಅಥವಾ ಫ್ಲೂಯರ್ ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಅಂದಾಜು ರೂ.1 ಲಕ್ಷ ಬೆಲೆಯನ್ನು ಹೊಂದಿರಬಹುದು. ಸ್ಪೈ ಚಿತ್ರವು ಇತ್ತೀಚಿನ ಎಪ್ರಿಲಿಯಾ ಎಸ್‌ಆರ್ ಸರಣಿಯಂತೆ ಫ್ಲಾಟ್ ಫ್ಲೋರ್‌ಬೋರ್ಡ್ ಮತ್ತು ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಸಹ ಬಹಿರಂಗಪಡಿಸುತ್ತದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿನ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಬಜಾಜ್ ಆಟೋ, ಕಳೆದ ವರ್ಷದ ಆರಂಭದಲ್ಲಿ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿತು, ಇದು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 288 ಯುನಿಟ್‌ಗಳನ್ನು ಮಾರಾಟವಾಗಿತ್ತು. ಈ ವರ್ಷದ ಅದೇ ತಿಂಗಳಿನಲ್ಲಿ 642 ಯುನಿಟ್‌ಗಳು ಮಾರಾಟವಾಗಿವೆ. ಇದು ವರ್ಷದಿಂದ ವರ್ಷದ ಶೇ.123 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಮೊದಲ ತಿಂಗಳಲ್ಲಿ ಕೇವಲ 21 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದ್ದರು. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್, ಅಥರ್ 450, ಸಿಂಪಲ್ ಎನರ್ಜಿ ಒನ್ ಮತ್ತು ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತಿದೆ. ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಕೊರೋನಾ ಸೋಂಕಿನಿಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗದೆ ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಬುಕ್ಕಿಂಗ್ ಸ್ವೀಕರಿಸುವುದನ್ನು ಕೆಲವು ಬಾರೀ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಚೇತಕ್ ಸ್ಕೂಟರ್ ತಯಾರಿಸಲು ವಿದೇಶದಿಂದ ಹಲವಾರು ಯುನಿಟ್ ಗಳನ್ನು ಬಳಸಿಕೊಳ್ಳುತ್ತದೆ ಮತ್ತು ಅವುಗಳ ಕೊರತೆಯಿಂದ ಉತ್ಪಾದನೆಗೆ ಅಡಚಣೆಯಾಗಿತ್ತು.

Ola S1 ಪ್ರತಿಸ್ಪರ್ಧಿಯಾಗಿ ಬರಲಿದೆ ಕೈಗೆಟುಕುವ ದರದ ಹೊಸ Bajaj ಎಲೆಕ್ಟ್ರಿಕ್ ಸ್ಕೂಟರ್

ಬಜಾಚ್ ಚೇತಕ್ ಉತ್ಪಾದಿಸಲು ಕೆಲವು ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ವಿದೇಶದಿಂದ ಬರುವ ಬಿಡಿಭಾಗಗಳ ಆಮದು ಮಾಡಿಕೊಳ್ಳುವಲ್ಲಿ ಸಮಸ್ಯೆಯಾಗಿತ್ತು. ಇನ್ನು ಇತ್ತೀಚೆಗೆ ಎಲೆಕ್ಟ್ರಿಕಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಎಲ್ಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಎಲ್ಕ್ಟ್ರಿಕ್ ಸ್ಕೂಟರ್ ಮಾದರಿಯು ಪೈಪೋಟಿ ನೀಡುತ್ತದೆ.

Image Courtesy: Tushar Pawar

Most Read Articles

Kannada
English summary
Bajaj planning to launch new affordable electric scooter in india details
Story first published: Monday, November 29, 2021, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X