ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಪಲ್ಸರ್ ಸರಣಿಯಲ್ಲಿ ಹೊಸ ಎನ್250 ಮತ್ತು ಎಫ್250 ಬೈಕ್ ಮಾದರಿಗಳನ್ನು ಕಳೆದ ವಾರಷ್ಟೇ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೊಸ ಪಲ್ಸರ್ ಎನ್250 ಮತ್ತು ಎಫ್250 ಬೈಕ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.38 ಲಕ್ಷ ಮತ್ತು ರೂ. 1.40 ಲಕ್ಷಕ್ಕೆ ಬಿಡುಗಡೆಯಾಗಿದ್ದು, ಹೊಸ ಬೈಕ್ ಮಾದರಿಗಳ ವಿತರಣೆಗೆ ಇದೀಗ ಚಾಲನೆ ನೀಡಲಾಗಿದೆ. ಪುಣೆಯಲ್ಲಿ ಬಜಾಜ್ ಹೊಸ ಬೈಕ್‌ಗಳ ಮೊದಲ ಯುನಿಟ್ ವಿತರಣೆಯಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ತನ್ನ ಪ್ರಮುಖ ಡೀಲರ್ಸ್‌ಗಳಲ್ಲಿ ವಿತರಣೆ ಆರಂಭಿಸಲಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಪಲ್ಸರ್ ಸರಣಿ ಮಾರಾಟದಲ್ಲಿ ಎರಡು ದಶಕಗಳ ಯಶಸ್ವಿ ಹೆಜ್ಜೆಯಿರಿಸಿರುವ ಬಜಾಜ್ ಕಂಪನಿಯು ಇದೀಗ ಪಲ್ಸರ್ ಸರಣಿಯಲ್ಲಿಯೇ ಉನ್ನತ ಮಟ್ಟದ ಪಲ್ಸರ್ ಎಫ್250 ಮತ್ತು ಎನ್250 ಮಾದರಿಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳು ಉತ್ತಮ ಕಾರ್ಯಕ್ಷಮತೆ, ಎಂಜಿನ್ ದಕ್ಷತೆ, ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೊಸ ಪಲ್ಸರ್‌ ಸರಣಿಗಳ ವಿನ್ಯಾಸ ಬಜಾಜ್‌ ಕಂಪನಿಯ ಇತರೆ ಪಲ್ಸರ್ ಮಾದರಿಗಳಿಂತಲೂ ಉತ್ತಮವಾಗಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ಬೈಕ್ ಉತ್ಪನ್ನವನ್ನು ಅತ್ಯುತ್ತಮವಾಗಿ ಸಿದ್ದಗೊಳಿಸುವಲ್ಲಿ ಬಜಾಜ್ ವಿನ್ಯಾಸ ಸಾಕಷ್ಟು ಸವಾಲುಗಳನ್ನು ಎದುರಿಸಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಈ ಬೈಕ್ ಅನ್ನು ಟ್ಯೂಬ್‌ಲೆಸ್ ಫ್ರೇಮ್ ಚಾಸಿಸ್‌ನಲ್ಲಿ ನಿರ್ಮಿಸಲಾಗಿದ್ದು, ಕಂಪನಿಯು ಈಗಾಗಲೇ ಇದನ್ನು ಏರೋ ಡೈನಾಮಿಕ್ ಮಾಡಿದೆ. ಇವುಗಳಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್ ಲೈಟ್, ಆಕರ್ಷಕ ವಿನ್ಯಾಸವಾದ ಎಲ್‌ಇಡಿ ಡಿಆರ್‌ಎಲ್ ಗಳನ್ನು ನೀಡಲಾಗಿದೆ. ಇವುಗಳ ಮುಂಭಾಗದ ಭಾಗಕ್ಕೆ ಆಕ್ರಮಣಕಾರಿ ನೋಟವನ್ನು ನೀಡಲಾಗಿದೆ. ಮುಖ್ಯ ಹೆಡ್‌ಲೈಟ್‌ನ ಎರಡೂ ಬದಿಗಳಲ್ಲಿ ಲೈಟ್ ಗಳನ್ನು ನೀಡಲಾಗಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೊಸ ಬೈಕ್ ಫೀಚರ್ಸ್‌ಗಳ ಬಗೆಗೆ ಹೇಳುವುದಾದರೆ ಟ್ಯಾಕೋಮೀಟರ್ ನೀಡಲ್ ಅನ್ನು ಹಳೆಯ ಮಾದರಿಯಿಂದ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಡಿಜಿಟಲ್ ಪರದೆಯನ್ನು ಸಹ ಕಾಣಬಹುದು. ಈ ಪರದೆಯು ರೇಂಜ್, ಗೇರ್ ಪೊಸಿಷನ್, ಡಿಸ್ಟೆನ್ಸ್ ಟು ಎಂಪ್ಟಿ ಮಾಹಿತಿಯನ್ನು ಒದಗಿಸುತ್ತದೆ. ಈ ಬೈಕಿನಲ್ಲಿ ಮೊಬೈಲ್ ಚಾರ್ಜಿಂಗ್ ಗಾಗಿ ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೊಸ ಬೈಕ್ ಮಾದರಿಗಳು 14 ಲೀಟರ್ ಫ್ಯೂಯಲ್ ಟ್ಯಾಂಕ್ ಜೊತೆ 795 ಎಂಎಂ ಎತ್ತರದ ಸೀಟ್ ಹೊಂದಿದ್ದು, ಬಜಾಜ್ ಕಂಪನಿಯು ಈ ಬೈಕ್‌ನಲ್ಲಿ 250 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 24.5 ಬಿಹೆಚ್‌ಪಿ ಪವರ್ ಹಾಗೂ 21.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೊಸ ಬೈಕ್ ಆರಂಭದ 3,000 ಆರ್‌ಪಿಎಂಗಿಂತಲೂ ಕಡಿಮೆ ಥ್ರೊಟಲ್‌ನಲ್ಲಿ ಎಂಜಿನ್ ತುಸು ನಿಧಾನವಾಗಿದ್ದರೂ 3,000 ಆರ್‌ಪಿಎಂ ನಂತರ ಬೈಕ್ ಕಾರ್ಯಕ್ಷತೆಯೇ ಬದಲಾಗುತ್ತದೆ. ಇದು ಎಲ್ಲಾ ಗೇರ್‌ಗಳಲ್ಲಿ ಸಾಕಷ್ಟು ಟಾರ್ಕ್ ನೀಡಿದರೂ ಮಧ್ಯಶ್ರೇಣಿಯಲ್ಲಿ ಅದು ಪ್ರಬಲವಾಗಿದೆ ಎನ್ನಬಹುದು. ನೀವು 5,000 ರಿಂದ 8,000ಆರ್‌ಪಿ ನಡುವೆ ಇರಿಸಿದಾಗ ಈ ಎಂಜಿನ್‌ ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೊಸ ಬೈಕ್ ಮಾದರಿಯು ಆರಂಭದಲ್ಲಿ ತುಸು ನಿಧಾನ ಎನ್ನಿಸಿದರೂ ನಂತರ ಅತ್ಯುತ್ತಮ ಥ್ರೊಟಲ್ ಹೊಂದಿದ್ದು, ಇದರ ಎಕ್ಸಾಸ್ಟ್ ನೋಟ್ 220ಎಫ್ ಮಾದರಿಗಿಂತ ತುಸು ಸುಧಾರಣೆಗೊಂಡಿದೆ ಎನ್ನಬಹುದು.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಆದರೆ ಪ್ರತಿ ಗಂಟೆ 100 ಕಿ.ಮೀ ಗಿಂತಲೂ ಹೆಚ್ಚು ವೇಗದಲ್ಲಿ ರೈಡಿಂಗ್ ಬಯಸಿದರೆ 6ನೇ ಗೇರ್ ಅಗತ್ಯ ಎನ್ನಿಸಲಿದ್ದು, ನಿರ್ವಹಣೆಯ ವಿಷಯದಲ್ಲಿ ಪಲ್ಸರ್ ಎಫ್250 ಸೇರಿ ಇತರೆ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಳಿಂತ ಉತ್ತಮವಾಗಿವೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಇನ್ನು ಈ ಬೈಕಿನಲ್ಲಿ ಅಳವಡಿಸಿರುವ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹೊಸ ಮೊನೊಶಾಕ್ ಸಸ್ಪೆಂಷನ್ ಗಳು ಆರಾಮದಾಯಕ ಸವಾರಿಯನ್ನು ಒದಗಿಸುತ್ತವೆ. ಹೊಸ ಬೈಕಿನಲ್ಲಿ ಬೈಕ್ ಅಸಿಸ್ಟ್, ಸ್ಲೀಪರ್ ಕ್ಲಚ್‌ಗಳನ್ನು ನೀಡಲಾಗಿದೆ. ಇವುಗಳು ವೇಗವಾದ ಗೇರ್‌ಶಿಫ್ಟ್‌ಗಳಿಗೆ ನೆರವಾಗುತ್ತವೆ. ಬ್ರೇಕಿಂಗ್‌ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ನೀಡಲಾಗಿದೆ. ಈ ಬೈಕ್ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬಜಾಜ್ 250 ಬೈಕಿನ ಮುಂಭಾಗದಲ್ಲಿ 100/80 ಪ್ರೊಫೈಲ್ ಟಯರ್‌ ಹಾಗೂ 17 ಇಂಚಿನ ವ್ಹೀಲ್ ಹೊಂದಿರುವ 130/70 ಟಯರ್ ಗಳನ್ನು ನೀಡಲಾಗಿದೆ. ಕಂಪನಿಯು ಈ ಬೈಕ್ ಅನ್ನು ಟೆಕ್ನೋ ಗ್ರೇ ಹಾಗೂ ರೇಸಿಂಗ್ ರೆಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಎಫ್250 ಮಾದರಿಯಲ್ಲಿನ ಟ್ವಿನ್ ಎಕ್ಸಾಸ್ಟ್ ಘಟಕವು ಮೋಟಾರ್‌ಸೈಕಲ್‌ನ ಒಟ್ಟಾರೆ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆ ನೀಡಿದ್ದು, ಟ್ವಿನ್-ಪೋರ್ಟ್ ಎಕ್ಸಾಸ್ಟ್ ಅನ್ನು ಸಿಲ್ವರ್-ಬಣ್ಣದ ಕವರ್ ಪಡೆಯುತ್ತದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಸೆಮಿ-ಫೇರ್ಡ್ ಮೋಟಾರ್‌ಸೈಕಲ್‌ಗಳು ನಿಮ್ಮ ಆಯ್ಕೆಯಾಗಿದ್ದರೆ ಹೊಸ ಪಲ್ಸರ್ ಎಫ್250 ಆವೃತ್ತಿಯು ನಿಮ್ಮ ಆಯ್ಕೆಗೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದಾಗಿದ್ದು, ಆದರೆ ಆಧುನಿಕ ಬೈಕ್‌ಗಳಲ್ಲಿ ಅಗತ್ಯವಾಗಿರುವ ಸ್ಮಾರ್ಟ್‌ಫೋನ್ ಸಂಪರ್ಕಿತ ಬ್ಲೂಟೂಥ್ ಸಂಪರ್ಕವು ಎಫ್250 ಮಾದರಿಯಲ್ಲಿ ನೀಡದಿರುವುದು ಗ್ರಾಹಕರ ಆಯ್ಕೆಗೆ ಹಿನ್ನಡೆ ಉಂಟುಮಾಡಬಹುದಾಗಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಆದರೂ ಹೊಸ ಬೈಕ್ ಮಾದರಿಗಳು 250 ಸಿಸಿ ವಿಭಾಗದಲ್ಲಿನ ಇತರೆ ಪ್ರತಿಸ್ಪರ್ಧಿ ಮಾದರಿಗಳ ಬೆಲೆಗಿಂತಲೂ ಅತ್ಯಂತ ಕಡಿಮೆ ವೆಚ್ಚದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಹೊಸ ಎನ್250 ಮತ್ತು ಎಫ್250 ಬೈಕ್ ವಿತರಣೆ ಆರಂಭಿಸಿದ ಬಜಾಜ್ ಆಟೋ

ಪಲ್ಸರ್ 250 ಮಾದರಿಗಳು ನೇರವಾಗಿ ಯಮಹಾ ಫೇಜರ್ 25 ಮತ್ತು ಸುಜುಕಿ ಜಿಕ್ಸರ್ 250 ಎಸ್ಎಫ್ ಮಾದರಿಗೆ ನೇರ ಸ್ಪರ್ಧೆ ನೀಡಲಿದ್ದರೆ ಕ್ವಾರ್ಟರ್-ಲೀಟರ್ ವಿಭಾಗದಲ್ಲಿರುವ ಕೆಟಿಎಂ 250 ಡ್ಯೂಕ್ ಸೇರಿದಂತೆ ಇತರೆ ಮಾದರಿಗಳಿಗೂ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Bajaj pulsar 250 series bikes delivery starts details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X