Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಪಲ್ಸರ್ ಜನಪ್ರಿಯ ಬ್ರ್ಯಾಂಡ್ ಆಗಿದೆ. ಈ ಬಜಾಜ್ ಪಲ್ಸರ್ ಬೈಕ್‍ಗಳಿಗೆ ಭಾರತದಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. ಪಲ್ಸರ್ ಬೈಕ್‍ಗಳು ಭಾರತದ ರಸ್ತೆಗಳಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ಪಲ್ಸರ್ ಎಫ್250 ಮತ್ತು ಎನ್250 ಎಂಬ ಹೊಸ ಬೈಕ್‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದರ ಮೂಲಕ ಪಲ್ಸರ್ ಸರಣಿಯನ್ನು ವಿಸ್ತರಿಸಿದೆ. ಹೊಸ ಪಲ್ಸರ್ 250 ರೇಂಜ್ ದೊಡ್ಡ ಮತ್ತು ಪವರ್ ಫುಲ್ ಬೈಕ್‍ಗಳಾಗಿವೆ. ಈ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಲಾಗಿವೆ. ಇದರಲ್ಲಿ ಹೊಸ ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಆಗಿದ್ದರೆ, ಪಲ್ಸರ್ ಎಫ್250 ಸೆಮಿ-ಫೇರ್ಡ್ ಬೈಕ್ ಆಗಿದೆ. ಈ ಎರಡು ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳ ನಡುವಿನ ಪ್ರಮುಖ ವ್ಯತ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ವಿನ್ಯಾಸ

ಹೊಸ ಪಲ್ಸರ್ ಎನ್250 ಮತ್ತು ಎಫ್250 ಬೈಕ್‍ಗಳ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ವಿನ್ಯಾಸ ಒಂದಾಗಿದೆ. ಇದರಲ್ಲಿ ಪಲ್ಸರ್ ಎಫ್250 ಬೈಕಿನಲ್ಲಿ ಸೆಮಿ-ಫೇರ್ಡ್ ಬೈಕ್ ಆಗಿರುವುದರಿಂದ, ಮುಂಭಾಗದಲ್ಲಿ ಸಣ್ಣ ವಿಸರ್ ಅನ್ನು ಪಡೆಯುತ್ತದೆ ಮತ್ತು ಅದರ ಹಿಂಬದಿಯ ಮೀರರ್ ಬಾಡಿ ಪ್ಯಾನೆಲ್‌ಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಎಲ್ಇಡಿ ಪ್ರೊಜೆಕ್ಟರ್ ಯುನಿಟ್ ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿದೆ ಮತ್ತು ಹೆಚ್ಚಿನ ಮತ್ತು ಲೋ ಬೀಮ್ ಅನ್ನು ಅದೇ ರೀತಿಯಲ್ಲಿ ಸಂಯೋಜಿಸಲಾಗಿದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಈ ಪಲ್ಸರ್ ಎಫ್250 ಬೈಕಿನಲ್ಲಿ ರಿವರ್ಸ್-ಬೂಮರಾಂಗ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಬಲ ಮತ್ತು ಎಡಭಾಗದಲ್ಲಿ ಇರಿಸಲಾಗಿದೆ. ಹೆಡ್‌ಲೈಟ್‌ನ ಮೇಲೆ ಸಣ್ಣ ವಿಸರ್ ಗಾಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಬೈಕ್ ಅನ್ನು ಮತ್ತಷ್ಟು ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಪಲ್ಸರ್ ಎನ್250 ಬೈಕ್ ಶಾರ್ಪ್ ಮತ್ತು ಸ್ಟೈಲಿಶ್ ಹೆಡ್‌ಲೈಟ್ ಯುನಿಟ್ ಅನ್ನು ಒಳಗೊಂಡಿದೆ. ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಅನ್ನು ನೀಡಲಾಗಿದೆ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಎರಡೂ ಬದಿಗಳಲ್ಲಿ ನೀಡಲಾಗಿದೆ ಮತ್ತು ಅನಲಾಗ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೆಡ್‌ಲೈಟ್‌ನ ಮೇಲೆ ಇರಿಸಲಾಗಿದೆ. ಇದರ ವಿನ್ಯಾಸವನ್ನು ತೀಕ್ಷ್ಣ ಮತ್ತು ಅಗ್ರೇಸಿವ್ ಆಗಿದೆ, ಇದು ಹಿಂಭಾಗದಲ್ಲಿಯೂ ಕಂಡುಬರುತ್ತದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಎರ್ಗಾನಾಮಿಕ್ಸ್

ಬಜಾಜ್ ಪಲ್ಸರ್ ಎಫ್250 ಒಂದು ಸೆಮಿ-ಫೇರ್ಡ್ ಬೈಕ್ ಆಗಿದ್ದು, ಇದು ನೇಕೆಡ್ ಪಲ್ಸರ್ ಎನ್250 ಬೈಕ್ ಗಿಂತ ಹೆಚ್ಚು ಸ್ಪೋರ್ಟಿ ಕೊಡುಗೆಯನ್ನು ನೀಡುತ್ತದೆ ಮತ್ತು ಅದೇ ಗುಣಲಕ್ಷಣವು ಎರ್ಗಾನಾಮಿಕ್ಸ್ ನಲ್ಲಿ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಎರಡೂ ಬೈಕ್‍ಗಳು ಒಂದೇ ರೀತಿಯ ಫುಟ್‌ಪೆಗ್‌ಗಳು ಮತ್ತು ಸ್ಪ್ಲಿಟ್ ಸೀಟ್‌ಗಳನ್ನು ಪಡೆದರೆ, ಪಲ್ಸರ್ ಎಫ್250 ಎತ್ತರದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ ಮತ್ತು ಹೀಗಾಗಿ ಸ್ಪೋರ್ಟಿ ರೈಡಿಂಗ್ ಪೋಸಿಶನ್ ನೀಡುತ್ತದೆ. ಇನ್ನು ಪಲ್ಸರ್ ಎನ್250 ಸಾಮಾನ್ಯ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ತೂಕ

ಬಜಾಜ್ ಪಲ್ಸರ್ ಎಫ್250 ಪಲ್ಸರ್ ಎನ್250 ಬೈಕ್ ಗಿಂತ 2 ಕೆಜಿ ಹೆಚ್ಚು ತೂಕವಿದೆ. ಇದು ಪ್ರಾಥಮಿಕವಾಗಿ ಹೆಚ್ಚುವರಿ ಸೆಮಿ-ಫೇರಿಂಗ್ ಪ್ಲಾಸ್ಟಿಕ್ ಬಿಟ್‌ಗಳಿಂದಾಗಿ .ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ 162 ಕೆಜಿ ತೂಕವನ್ನು ಹೊಂದಿದೆ. ಆದರೆ ಸೆಮಿ-ಫೇರ್ಡ್ ಪಲ್ಸರ್ ಎಫ್250 ಬೈಕ್ 164 ಕೆಜಿ ತೂಕವನ್ನು ಹೊಂದಿದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಬೆಲೆ

ಈ ಎರಡು ಹೊಸ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳ ನಡುವಿನ ಮತ್ತೊಂದು ವ್ಯತ್ಯಾಸವೆಂದರೆ ಬೆಲೆಯಾಗಿದೆ. ಬಜಾಜ್ ಪಲ್ಸರ್ ಎನ್250 ಬೈಕ್ ಬೆಲೆಯು ರೂ.1.38 ಲಕ್ಷಗಳಾದರೆ, ಪಲ್ಸರ್ ಎಫ್250 ಬೈಕ್ ಬೆಲೆಯು ರೂ.1.40 ಲಕ್ಷಗಳಾಗಿದೆ.. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋ ರೂಂ ಪ್ರಕಾರವಾಗಿದೆ. ಇದರಲ್ಲಿ ಪಲ್ಸರ್ ಎಫ್250 ಬೈಕ್ ತುಸು ದುಬಾರಿಯಾಗಿದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಸೀಟ್ ಪೋಸಿಶನ್

ಪಲ್ಸರ್ ಎಫ್250 ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ, ಇದರಿಂದಾಗಿ ಸೀಟ್ ಪೋಸಿಶನ್ ನೇರವಾಗಿರುತ್ತದೆ, ಅಂದರೆ ರೈಡರ್ ಮೇಲೆ ನೇರವಾಗಿ ಕುಳಿತುಕೊಳ್ಳಬಹುದು. ಇನ್ನು ಪಲ್ಸರ್ ಎನ್250 ಬೈಕಿನಲ್ಲಿ ಸಿಂಗಲ್ ಪೀಸ್ ಬಾರ್ ಹ್ಯಾಂಡಲ್ ಅನ್ನು ನೀಡಲಾಗಿದೆ, ಇದರಿಂದಾಗಿ ಸೀಟ್ ಪೋಸಿಶನ್ ಅಗ್ರೇಸಿವ್ ಆಗಿದೆ. ಅಂದರೆ ಸವಾರನು ಸ್ವಲ್ಪ ಹೊರೆಯಾಗಿ ಕುಳಿತುಕೊಳ್ಳಬೇಕಾಗುತ್ತದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಲೆನ್ಸ್

ಹೊಸ ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ಲೆನ್ಸ್ ಸ್ವಲ್ಪಮಟ್ಟಿಗೆ ಮುಚ್ಚಲ್ಪಟ್ಟಿದೆ. ಆದರೆ ಪಲ್ಸರ್ ಎನ್250 ಬೈಕಿನಲ್ಲಿ ಪ್ರೊಜೆಕ್ಟರ್ ಲೆನ್ಸ್ ತೆರೆದಿರುತ್ತದೆ. ಆದರೆ ಇದು ಮುಂಚಿರುವಂತೆ ಕಾಣುತ್ತದೆ. ಇದು ಕೂಡ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳ ನಡುವಿನ ವ್ಯತ್ಯಾಸಗಳಲ್ಲಿ ಒಂದಾಗಿದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಬಜಾಜ್ ಪಲ್ಸರ್ ಎಫ್250 ಮತ್ತು ಪಲ್ಸರ್ ಎನ್250 ಬೈಕ್‍ಗಳಲ್ಲಿ 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,750rpm ನಲ್ಲಿ 24.1 ಬಿಹೆಚ್‍ಪಿ ಪವರ್ ಮತ್ತು 6,500rpm ನಲ್ಲಿ 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಒಳಗೊಂಡಿರುತ್ತದೆ.

Bajaj Pulsar N250 vs F250: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಹೊಸ ಬಜಾಜ್ ಪಲ್ಸರ್ ಎನ್250 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ FZ25 ಮತ್ತು ಸುಜುಕಿ ಜಿಕ್ಸರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಕ್ವಾರ್ಟರ್-ಲೀಟರ್ ವಿಭಾಗದಲ್ಲಿ ಕೆಲವು ಇತರ ಬೈಕ್ ಗಳು ಬಜಾಜ್ ಡೊಮಿನಾರ್ 250, ಕೆಟಿಎಂ 250 ಡ್ಯೂಕ್, ಇತ್ಯಾದಿಗಳನ್ನು ಒಳಗೊಂಡಿವೆ.

Most Read Articles

Kannada
English summary
Bajaj pulsar n250 vs pulsar f250 top differences design price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X