ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಎನ್ಎಸ್ 200 ಕೂಡ ಒಂದಾಗಿದೆ. ಈ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಅಗ್ರೇಸಿವ್ ಮತ್ತು ಮಸ್ಕಲರ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ.

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಕೇರಳ ಮೂಲದ ಬೈಕ್ ಪ್ರಿಯರೊಬ್ಬರು ಪಲ್ಸರ್ ಎನ್ಎಸ್ 200 ಬೈಕನ್ನು ಸ್ಪೋರ್ಟಿಯರ್ ಆಗಿ ಮಾಡಿಫೈಗೊಳಿಸಿದ್ದಾರೆ. ಕಸ್ಟಮ್ ರೇಸಿಂಗ್ ಎಕ್ಸಾಸ್ಟ್ ಸಿಸ್ಟಂಗಳನ್ನು ಪಲ್ಸರ್ ಎನ್ಎಸ್ 200 ಬೈಕಿನಲ್ಲಿ ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಕಸ್ಟಮ್ ಟ್ವಿನ್ ಅಂಡರ್-ಸೀಟ್ ಎಕ್ಸಾಸ್ಟ್ ಸಿಸ್ಟಂ ಜೊತೆಗೆ ಸ್ಟಾಕ್ ಬೈಕಿನಂತೆ ಅಲಾಯ್ ವ್ಹೀಲ್ ನಲ್ಲಿ ಅಳವಡಿಸಲಾಗಿರುವ ಬೃಹತ್ ಹಿಂಭಾಗದ ಟೈರ್ ಅನ್ನು ಒಳಗೊಂಡಿದೆ.

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಡ್ಯುಯಲ್ ಅಂಡರ್-ಸೀಟ್ ಎಕ್ಸಾಸ್ಟ್ ಸಿಸ್ಟಂ ಮತ್ತು ಎಕ್ಸ್ಟ್ರಾ-ವೈಡ್ ರಿಯರ್ ಟೈರ್ ಮಾಡಿಫೈಗೊಂಡ ಪಲ್ಸರ್ ಎನ್ಎಸ್ 200 ಬೈಕಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ನೀಡಿದೆ. ಹೆಚ್ಚುವರಿ-ಅಗಲವಾದ ಹಿಂಭಾಗದ ಟೈರ್ ಅನ್ನು ಕಸ್ಟಮ್ ಸ್ವಿಂಗಾರ್ಮ್ ನಲ್ಲಿ ಅಳವಡಿಸಿದಂತೆ ತೋರುತ್ತಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಪಲ್ಸರ್ ಎನ್ಎಸ್ 200 ಬೈಕಿನ ಹಿಂಭಾಗದ ಟೈಲ್-ಲ್ಯಾಂಪ್ ಮತ್ತು ಇತರ ಯುನಿಟ್ ಗಳನ್ನು ಉಳಿಸಿಕೊಳ್ಳಲಾಗಿದೆ. ಉಳಿದಂತೆ ಮಾಡಿಫೈಗೊಂಡ ಪಲ್ಸರ್ ಎನ್ಎಸ್ 200 ಬೈಕಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಇನ್ನು ಮಾರುಕಟ್ಟೆಯಲ್ಲಿರುವ ಬಿ‍ಎಸ್-6 ಪಲ್ಸರ್ ಎನ್‍ಎಸ್200 ಕಪ್ಪು, ಬಿಳಿ, ಕೆಂಪು ಮತ್ತು ಹಳದಿ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಸ್- 6 ಪಲ್ಸರ್ ಎನ್‍ಎಸ್ 200 ಬೈಕ್ ಫ್ಯೂಯಲ್ ಇಂಜೆಕ್ಷನ್ ನವೀಕರಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಬಜಾಜ್ ಪಲ್ಸರ್ ಎನ್‍ಎಸ್‍200‍ ಬೈಕಿನಲ್ಲಿ 99.5 ಸಿಸಿ, ನಾಲ್ಕು-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 24.2 ಬಿಹೆಚ್‌ಪಿ ಪವರ್ ಮತ್ತು 18.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಬಿ‍ಎಸ್-6 ಪಲ್ಸರ್ ಎನ್‍ಎಸ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟಿಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಮೊನೊಶಾಕ್‍‍‍ನೊಂದಿಗೆ ಅದೇ ಟ್ವಿನ್-ಸ್ಪಾರ್ ಪೆರಿಮೆಟರ್ ಫ್ರೇಮ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಇನ್ನು ಈ ಬಿ‍ಎಸ್-6 ಪಲ್ಸರ್ ಎನ್‍ಎಸ್ ಬೈಕಿನ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಮಾಡಿಫೈಗೊಂಡು ಹೊಸ ಅವತಾರದಲ್ಲಿ ಮಿಂಚಿದ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್

ಬಜಾಜ್ ಪಲ್ಸರ್ ಎನ್ಎಸ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಇನ್ನು ಬಜಾಜ್ ಪಲ್ಸರ್ ಎನ್ಸ್‍ಎಸ್ 200 ಭಾರತೀಯ ಮಾರುಕಟ್ಟೆಯಲ್ಲಿ ಅಪಾಚೆ ಆರ್‌ಟಿಆರ್200 4 ವಿ, ಯಮಹಾ ಎಫ್‌ಜೆಡ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
This Customised Bajaj Pulsar NS 200 Gets Dual Underseat Exhausts. Read In Kananda.
Story first published: Monday, February 22, 2021, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X