ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಪ್ರತಿಯೊಬ್ಬರು ಸದಾ ಅಪ್‌ಗ್ರೇಡ್ ಆಗಿರಲು ಬಯಸುತ್ತಾರೆ. ಅವರು ಅಪ್‌ಗ್ರೇಡ್ ಆಗುವುದರ ಜೊತೆಗೆ ತಾವು ಬಳಸುವ ಮೊಬೈಲ್ ಮತ್ತು ವಾಹನವನ್ನು ಅಪ್‌ಗ್ರೇಡ್ ಮಾಡಲು ಬಯಸುತ್ತಾರೆ. ಅದೇ ರೀತಿ 150-250 ಸಿಸಿ ಬೈಕ್ ಓಡಿಸುತ್ತಿರುವವರು ಅಪ್‌ಗ್ರೇಡ್ ಆಗಲು ಬಯಸಿದರೆ ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿವೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ದೇಶಿಯ ಮಾರುಕಟ್ಟೆಯಲ್ಲಿ ಬೈಕ್‌ಗಳ ಆಯ್ಕೆಯು ಸಾಕಷ್ಟು ಇವೆ. ನಿಮ್ಮ ಅಭಿರುಚಿಗೆ ತಕ್ಕ ಬೈಕ್ ಗಳು ಕೂಡ ಇವೆ. ಉತ್ತಮ ಪರ್ಫಾಮೆನ್ಸ್ ಬೈಕ್ ಗಳ ಆಯ್ಕೆಗಳು ಕೂಡ ಹೆಚ್ಚಾಗಿವೆ. ನೀವು ನಿಮ್ಮ ಬೈಕ್ ಅನ್ನು ಅಪ್‌ಗ್ರೇಡ್ ಮಾಡಲು ಬಯಸಿದ್ದರೆ ಅನೇಕ ಅಧಿಕ ಸಿಸಿ ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಅಧಿಕ ಸಿಸಿ ಬೈಕ್‌ಗಳು ಇರುವುದರಿಂದ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲವಿರುತ್ತದೆ. ಇದಕ್ಕಾಗಿ ಉತ್ತಮ ಪರ್ಫಾಮೆನ್ಸ್, ಅಧಿಕ ಫೀಚರ್ಸ್ ಹೊಂದಿರುವ ಅಧಿಕ ಸಿಸಿಯ ಬೈಕ್‌ಗಳ ಅತ್ಯುತ್ತಮ ಆಯ್ಕೆಗಳು ಇಲ್ಲಿವ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390 ಪರಿಚಯ ಅಗತ್ಯವಿಲ್ಲ. ಇದು ಭಾರತದ ನೆಚ್ಚಿನ ಸ್ಟ್ರೀಟ್ ಬೈಕ್ ಆಗಿದೆ, ಮುಖ್ಯವಾಗಿ ಇದು ಕೈಗೆಟುಕುವ ಬೈಕ್ ಆಗಿದೆ. ಈ ಕೆಟಿಎಂ ಡ್ಯೂಕ್ 390 ಕಡಿಮೆ ಬೆಲೆಯು ಮಾತ್ರವಲ್ಲದೆ 373 ಸಿಸಿ ಸಾಮರ್ಥ್ಯದ ಮಾದರಿಯಾಗಿದೆ. ಈ ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ 373 ಸಿಸಿ ಎಂಜಿನ್ ಸಾಮರ್ಥ್ಯ ಬೈಕ್ ಕೇವಲ 153 ಕೆಜಿ ತೂಕವನ್ನು ಹೊಂದಿದೆ. ಈ ಕೆಟಿಎಂ ಡ್ಯೂಕ್ 390 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.58 ಲಕ್ಷಗಳಾಗಿದೆ. ಇನ್ನು ಈ ಬೈಕಿನಲ್ಲಿ ಬೈ-ಡ್ರೈರಕ್ಷನಲ್ ಕ್ವೀಕ್ ಶಿಫ್ಟರ್ ಮತ್ತು ಬ್ಲೂಟೂತ್ ಕನೆಕ್ಟಿಟಿಯಂತಹ ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಕವಾಸಕಿ ಝಡ್650

ಈ ಕವಾಸಕಿ ಝಡ್650 ಬೈಕ್ ಫೇರ್ಡ್ ಸ್ಟ್ರೀಟ್ ನೇಕೆಡ್ ಆವೃತ್ತಿಯಾಗಿದೆ. ಈ ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍‍ಪಿ‍ಎಂನಲ್ಲಿ 67.3 ಬಿ‍ಹೆಚ್‍‍ಪಿ ಪವರ್ ಹಾಗೂ 6,700 ಆರ್‍‍ಪಿ‍ಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಬೈಕಿನಲ್ಲಿ ಎಲ್‍ಇ‍‍ಡಿ ಹೆಡ್‍‍ಲೈಟ್, 4.3 ಇಂಚಿನ ಟಿ‍ಎಫ್‍‍ಟಿ ಕಲರ್ ಇನ್ಸ್ ಟ್ರೂಮೆಂಟೆಷನ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍‍ಸ್ಪೋರ್ಟ್ ಟಯರ್‍‍ಗಳಿವೆ. ಈ ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಹೊಂದಿವೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಹೋಂಡಾ ಸಿಬಿಆರ್650ಆರ್

ಈ ಹೋಂಡಾ ಸಿಬಿಆರ್650ಆರ್ ನಿಯೋ ಕೆಫೆ ರೇಸರ್ ಬೈಕ್ ಆಗಿದೆ. ಇತ್ತೀಚಿನ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಪೂರೈಸಲು ಇನ್-ಲೈನ್ ನಾಲ್ಕು-ಸಿಲಿಂಡರ್ 649 ಸಿಸಿ ಎಂಜಿನ್ ಅನ್ನು ನವೀಕರಿಸಲಾಗಿದೆ. ಈ ಎಂಜಿನ್ 12,000 ಆರ್‌ಪಿಎಂನಲ್ಲಿ 86 ಬಿಹೆಚ್‌ಪಿ ಮತ್ತು 8,500 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ 57.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಸಿಬಿಆರ್650ಆರ್ ಬೈಕ್ ಸೈಡ್-ಸ್ವಿಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದ್ದು, ಈ ಬೈಕ್ ಒಟ್ಟಾರೆ ಲುಕ್ ಅನ್ನು ಹೆಚ್ಚಿಸುತ್ತದೆ. ಎಡ ಹ್ಯಾಂಡಲ್‌ಬಾರ್‌ನಲ್ಲಿರುವ ಸ್ವಿಚ್ ಮೂಲಕ ಟಾರ್ಕ್ ನಿಯಂತ್ರಣವನ್ನು (ಟಿಸಿ) ಆನ್ ಅಥವಾ ಆಫ್ ಮಾಡಲು ರೈಡರ್ ಆಯ್ಕೆ ಮಾಡಬಹುದು. ಎರಡು ಬೈಕ್‌ಗಳಲ್ಲಿ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಒಂದೇ ಆಗಿರುತ್ತದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಇನ್ನು ಹೋಂಡಾ ಸಿಬಿಆರ್650ಆರ್ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ಏಡ್ಸ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, (ಎಚ್ಐಎಸ್ಎಸ್) ಹೋಂಡಾ ಇಗ್ನಿಷನ್ ಸೆಕ್ಯುರಿಟಿ ಸಿಸ್ಟಂ ಮತ್ತು (ಎಚ್ಎಸ್ಟಿಸಿ) ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಟ್ರಯಂಫ್ ಟ್ರೈಡೆಂಟ್ 660

1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಟ್ರೈಡೆಂಟ್ 660 ಬೈಕ್ ಎಲ್ಇಡಿ ಲೈಟಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಟಿಎಫ್ಟಿ ಡಿಸ್ ಪ್ಲೇಯನ್ನು ಸಹ ಹೊಂದಿದೆ. ಇನ್ನು ‘ಮೈ ಟ್ರಯಂಫ್' ಆ್ಯಪ್ ಬಳಸಿ ಈ ಬೈಕಿನಲ್ಲಿರುವ ಡಿಜಿಟಲ್ ಡಿಸ್ಪ್ಲೇಯನ್ನು ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ನೇಕೆಡ್ ಬೈಕುಗಳ ಸರಣಿಗೆ ಸೇರುತ್ತದೆ. ಈ ಬೈಕಿನ ಬಾಡಿ ಗ್ರಾಫಿಕ್ಸ್, ನವೀಕರಿಸಿದ ರಿಯರ್-ವ್ಯೂ ಮಿರರ್, ಮರುವಿನ್ಯಾಸಗೊಳಿಸಲಾದ ಎಕ್ಸಾಸ್ಟ್ ಮತ್ತು ಸಫಿಯರ್ ಬ್ಲ್ಯಾಕ್ ಮತ್ತು ಮ್ಯಾಟ್ ಸಿಲ್ವರ್ ಐಸ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಯನ್ನು ಕೂಡ ಒಳಗೊಂಡಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನಲ್ಲಿ 765 ಸಿಸಿ, 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 12,000 ಆರ್‌ಪಿಎಂನಲ್ಲಿ 116 ಬಿಹೆಚ್‌ಪಿ ಪವರ್ ಮತ್ತು 9,400 ಆರ್‌ಪಿಎಂನಲ್ಲಿ 77 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಎಂಜಿನ್ ನೊಂದಿಗೆ ಸ್ಲಿಪ್-ಅಸಿಸ್ಟ್ ಕ್ಲಚ್ ಮೂಲಕ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನಲ್ಲಿ ಮೂರು ರೈಡಿಂಗ್ ಮೋಡ್‌ಗಳನ್ನು ಸಹ ಒಳಗೊಂಡಿವೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ರಾಯಲ್ ಎನ್‍ಫೀಲ್ಡ್ 650 ಟ್ವಿನ್

ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಮಾದರಿಗಳು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕ್ ಗಳಾಗಿವೆ. ಈ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್ ಗಳಲ್ಲಿ 649ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅಧಿಕ ಸಿಸಿಯ ಬೈಕ್‌ಗಳಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇಲ್ಲಿವೆ ಅತ್ಯುತ್ತಮ ಆಯ್ಕೆಗಳು

ಈ ಬೈಕ್‌ಗಳಲ್ಲಿ 18 ಇಂಚಿನ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿದ್ದು, ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು, ಟ್ವಿನ್ ಎಕ್ಸಾಸ್ಟ್ ಸೆಟಪ್, ಸಿಂಗಲ್-ಪೀಸ್ ಫ್ಲಾಟ್ ಸೀಟ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಇನ್ನ್ಯ್ ಈ ಟ್ವಿನ್ ಬೈಕಿನಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ನೀಡಲಾಗಿಲ್ಲ. ಆದರೆ ಕಸ್ಟಮೈಸ್ ಮಾಡಲು ಒಂದು ಆಯ್ಕೆಯನ್ನು ಸಹ ಕಂಪನಿಯು ಒದಗಿಸಿದೆ.

Most Read Articles

Kannada
English summary
Bike rider can upgrade to high cc motorcycle best options details
Story first published: Wednesday, August 4, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X