ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಹೀರೋ ಸ್ಪ್ಲೆಂಡರ್ ಪ್ಲಸ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಸ್ಪ್ಲೆಂಡರ್ ಪ್ಲಸ್ ಬೈಕ್ ಮೈಲೇಜ್ ಹಾಗೂ ಕಡಿಮೆ ನಿರ್ವಹಣಾ ವೆಚ್ಚದ ಕಾರಣಕ್ಕೆ ಹೆಚ್ಚು ಜನಪ್ರಿಯವಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಬಿಎಸ್ 6 ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ 97.2 ಸಿಸಿ ಫ್ಯೂಯಲ್ ಇಂಜೆಕ್ಟ್, ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 7.91 ಬಿಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಬಿಎಸ್ 6 ಹೀರೋ ಸ್ಪ್ಲೆಂಡರ್ ಕಿಕ್ ಸ್ಟಾರ್ಟ್ ಬೇಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.63,750 ಗಳಾದರೆ, ಸೆಲ್ಫ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 67,260 ಗಳಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಹೀರೋ ಸ್ಪ್ಲೆಂಡರ್ ಪ್ಲಸ್ 100 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದ್ದರೂ, ಈ ಸೆಗ್ ಮೆಂಟಿನಲ್ಲಿ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಹಲವು ಬೈಕ್‌ಗಳಿವೆ. ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕಿಗೆ ಪೈಪೋಟಿ ನೀಡುವ 5 ಪ್ರಮುಖ ಬೈಕ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

1. ಬಜಾಜ್ ಪ್ಲಾಟಿನಾ 100 ಇ.ಎಸ್

ಪ್ಲಾಟಿನಾ 100 ಇಎಸ್ ಬಜಾಜ್ ಕಂಪನಿಯ ಅತ್ಯುತ್ತಮ ಬೈಕ್‌ಗಳಲ್ಲಿ ಒಂದಾಗಿದ್ದು, ಹೀರೋ ಸ್ಪ್ಲೆಂಡರ್ ಬೈಕಿಗಿಂತ ಹೆಚ್ಚಿನ ಫೀಚರ್'ಗಳನ್ನು ಹೊಂದಿದೆ. ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನಲ್ಲಿ 100 ಸಿಸಿ ಏರ್ ಕೂಲ್ಡ್ ಡಿಟಿಎಸ್ಐ ಎಂಜಿನ್ ಅಳವಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಈ ಎಂಜಿನ್ 7.8 ಬಿಹೆಚ್‌ಪಿ ಪವರ್ ಹಾಗೂ 8.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ತೂಕ 117 ಕೆ.ಜಿಗಳಾಗಿದೆ. ಪ್ಲಾಟಿನಾ 100 ಇಎಸ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 56,480 ಗಳಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

2. ಬಜಾಜ್ ಸಿಟಿ 100

ಬಜಾಜ್ ಸಿಟಿ 100 ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದ್ದು, ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕಿಗೆ ಕಠಿಣ ಪೈಪೋಟಿಯನ್ನು ನೀಡುತ್ತದೆ. ಈ ಬೈಕಿನಲ್ಲಿ 115 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8.5 ಬಿಹೆಚ್‌ಪಿ ಪವರ್ ಹಾಗೂ 9.81 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಈ ಎಂಜಿನ್ ಅನ್ನು 4 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಬಜಾಜ್ ಸಿಟಿ 100 ಬೈಕ್ 118 ಕೆಜಿ ತೂಕವನ್ನು ಹೊಂದಿದೆ. ಈ ಬೈಕ್ 10.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಬಜಾಜ್ ಸಿಟಿ 100 ಬೈಕ್ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದರೆ, ಸ್ಪ್ಲೆಂಡರ್ ಪ್ಲಸ್ ಬೈಕ್ 18 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

3. ಟಿವಿಎಸ್ ರೇಡಿಯಾನ್

ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕಿಗೆ ಪೈಪೋಟಿ ನೀಡಲು ಟಿವಿಎಸ್ ಕಂಪನಿಯು ರೇಡಿಯಾನ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕಿನಲ್ಲಿ ಅಳವಡಿಸಿರುವ 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8.08 ಬಿಹೆಚ್‌ಪಿ ಪವರ್ ಹಾಗೂ 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಟಿವಿಎಸ್ ರೇಡಿಯಾನ್‌ ಬೈಕಿನ ಪವರ್ ಉತ್ಪಾದನೆಯು ಸ್ಪ್ಲೆಂಡರ್ ಪ್ಲಸ್‌ ಬೈಕಿಗಿಂತ ಸ್ವಲ್ಪ ಹೆಚ್ಚಾಗಿದೆ. ಟಿವಿಎಸ್ ರೇಡಿಯಾನ್, ಹೀರೋ ಸ್ಪ್ಲೆಂಡರ್ ಪ್ಲಸ್ ಗಿಂತ ಉದ್ದವಾದ ವ್ಹೀಲ್ ಬೇಸ್ (1265 ಎಂಎಂ) ಹಾಗೂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ (165 ಎಂಎಂ) ಹೊಂದಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಟಿವಿಎಸ್ ರೇಡಿಯಾನ್ ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 59,992 ಗಳಾದರೆ, ಟಾಪ್ ಎಂಡ್ ಡಿಸ್ಕ್ ಬ್ರೇಕ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 69,782 ಗಳಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

4. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಪ್ರೀಮಿಯಂ 110 ಸಿಸಿ ಪ್ಯಾಸೆಂಜರ್ ಸೆಗ್ ಮೆಂಟ್ ಬೈಕ್ ಆಗಿದ್ದು, ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕಿಗೆ ಪೈಪೋಟಿ ನೀಡುತ್ತದೆ. ಟಿವಿಎಸ್ ರೇಡಿಯಾನ್‌ ಬೈಕಿನಂತೆ ಸ್ಟಾರ್ ಸಿಟಿ ಪ್ಲಸ್ ಬೈಕಿನಲ್ಲಿಯೂ 110 ಸಿಸಿ ಎಂಜಿನ್‌ ಅಳವಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಈ ಎಂಜಿನ್ 7,350 ಆರ್‌ಪಿಎಂನಲ್ಲಿ 8.08 ಬಿಹೆಚ್‌ಪಿ ಪವರ್ ಹಾಗೂ 4,500 ಆರ್‌ಪಿಎಂನಲ್ಲಿ 8.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 4 ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಬೈಕ್ ರೇಡಿಯಾನ್‌ ಬೈಕಿಗಿಂತ ಸ್ವಲ್ಪ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

172 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮೂಲಕ ಈ ಬೈಕ್ ಸ್ಪ್ಲೆಂಡರ್ ಪ್ಲಸ್ ಬೈಕಿಗಿಂತ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಡ್ರಮ್ ಬ್ರೇಕ್ ಹೊಂದಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೇಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 68,475 ಗಳಾದರೆ, ಡಿಸ್ಕ್ ಬ್ರೇಕ್ ಹೊಂದಿರುವ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 70,975 ಗಳಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

5. ಹೋಂಡಾ ಸಿಡಿ ಡ್ರೀಮ್ ಡೀಲಕ್ಸ್

ಹೋಂಡಾ ಸಿಡಿ ಡ್ರೀಮ್ ಡೀಲಕ್ಸ್ ಬೈಕ್ ಸ್ಪ್ಲೆಂಡರ್ ಪ್ಲಸ್ ಬೈಕಿಗಿಂತ ಉತ್ತಮವಾದ ವಿನ್ಯಾಸ ಹಾಗೂ ಸ್ಟೈಲಿಂಗ್ ಹೊಂದಿದೆ. ಈ ಬೈಕಿನಲ್ಲಿ ಹೋಂಡಾ ಸೈಲೆಂಟ್ ಎಸಿಜಿ ಸ್ಟಾರ್ಟ್, ಎಂಜಿನ್ ಕಿಲ್ ಸ್ವಿಚ್ ಸೇರಿದಂತೆ ಹಲವು ಫೀಚರ್'ಗಳನ್ನು ನೀಡಲಾಗಿದೆ. ಹೋಂಡಾ ಸಿಡಿ ಡ್ರೀಮ್ ಡಿಲಕ್ಸ್ ಬೈಕಿನಲ್ಲಿ 110 ಸಿಸಿ ಎಂಜಿನ್ ಅಳವಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8.7 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 9.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 4 ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುವ ಪ್ರಮುಖ ಬೈಕುಗಳಿವು

ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಸ್ಟ್ಯಾಂಡರ್ಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 65,248 ಗಳಾದರೆ, ಡಿಎಲ್ಎಕ್ಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 66,248 ಗಳಾಗಿದೆ.

Most Read Articles

Kannada
English summary
Bikes which rivals Hero splendor plus bike in domestic market. Read in Kannada.
Story first published: Wednesday, July 28, 2021, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X