ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಕೆ ಸ್ಪೀಡ್ ಸಣ್ಣ ಬೈಕ್'ಗಳನ್ನು ಮಾಡಿಫೈ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಕೆ ಸ್ಪೀಡ್ ಈ ಹಿಂದೆ ಹೋಂಡಾ ಗ್ರೋಮ್, ಸಿ.ಟಿ 125 ಸೇರಿದಂತೆ ಹಲವಾರು ಬೈಕ್'ಗಳನ್ನು ಮಾಡಿಫೈಗೊಳಿಸಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಕೆ ಸ್ಪೀಡ್ ಈಗ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಅನ್ನು ಕಸ್ಟಮೈಸ್ ಮಾಡಿದೆ. ಕಸ್ಟಮೈಸ್ ಮಾಡಲಾದ ಬೈಕ್ ಆಕರ್ಷಕವಾಗಿ ಕಾಣುತ್ತದೆ. ಕಸ್ಟಮೈಸ್ ಆದ ಈ ಬೈಕಿಗೆ ರೋಡ್ ರಂಬ್ಲರ್ ಎಂದು ಹೆಸರಿಡಲಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಕಸ್ಟಮೈಸ್ ಮಾಡಲಾದ ಬಿಎಂಡಬ್ಲ್ಯು ಜಿ 310 ಆರ್ ಬೈಕಿನಲ್ಲಿ ಎಂ ಸ್ಪೋರ್ಟ್ ಕಲರ್ ಥೀಮ್‌ಗಾಗಿ ವಿಭಿನ್ನ ಬಣ್ಣವನ್ನು ಬಳಸಲಾಗಿದೆ. ಇದಕ್ಕಾಗಿ ವೈಟ್ ಪೌಡರ್ ಕೋಟೆಡ್ ರಿಮ್‌ಗಳನ್ನು ಬಳಸಲಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ವಿನ್ಯಾಸದ ಪ್ರಮುಖ ಬದಲಾವಣೆಗಳಲ್ಲಿ ಕಸ್ಟಮ್ ಮೇಡ್ ಸ್ಯಾಡಲ್ ಹಾಗೂ ಅಂಡರ್ ಸೀಟ್ ಎಕ್ಸಾಸ್ಟ್ ಮಫ್ಲರ್‌ಗಳನ್ನು ಹೊಂದಿರುವ ಟೇಲ್ ಪಾರ್ಟ್'ಗಳು ಸೇರಿವೆ. ಫ್ರಂಟ್ ಫೆಂಡರ್ ಮೇಲಿದ್ದ ಹೆಡ್ ಲ್ಯಾಂಪ್ ಬದಲಿಗೆ ರೆಟ್ರೊ ಲುಕ್ ಎಲ್ಇಡಿ ಯುನಿಟ್ ಅಳವಡಿಸಲಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಈ ಮಾಡಿಫೈಗೊಂಡ ಜಿ 310 ಆರ್ ಬೈಕಿನ ರೆಟ್ರೊ ಆಧುನಿಕ ನೋಟವನ್ನು ಪೂರ್ಣಗೊಳಿಸಲು ಸಾಂಪ್ರದಾಯಿಕ ಮಿರರ್'ಗಳ ಬದಲು ಬಾರ್ ಎಂಡ್ ಟೈಪ್ ಮಿರರ್'ಗಳನ್ನು ಅಳವಡಿಸಲಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ದಪ್ಪವಾದ ರಬ್ಬರ್‌ಗಳನ್ನು ವ್ಹೀಲ್'ಗಳ ಮೇಲೆ ಸುತ್ತಿಡಲಾಗಿದ್ದು, ಟ್ಯೂನ್ ಮಾಡಲಾದ ವ್ಹೀಲ್'ಗಳು ಸಿಟಿಯೊಳಗಿನ ರಸ್ತೆಗಳಲ್ಲಿ ಹಾಗೂ ಮೃದುವಾದ ಭೂಪ್ರದೇಶಗಳಲ್ಲಿ ಸರಾಗವಾಗಿ ಸಾಗಲು ನೆರವಾಗುತ್ತವೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಗೋಲ್ಡ್ ಬಣ್ಣದಲ್ಲಿದ್ದ ಅಪ್ ವರ್ಡ್ ಫೋರ್ಕ್‌ಗಳನ್ನು ಕಪ್ಪು ಬಣ್ಣಕ್ಕೆ ಬದಲಿಸಲಾಗಿದೆ. ಒಟ್ಟಾರೆಯಾಗಿ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಅನ್ನು ಸ್ಟ್ರೀಟ್‌ಫೈಟರ್ ಸ್ಟೈಲಿಂಗ್‌ನಿಂದ ನಿಯೋ ರೆಟ್ರೊ ಸ್ಕ್ರ್ಯಾಂಬ್ಲರ್‌ಗೆ ಬದಲಿಸಲಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.50 ಲಕ್ಷಗಳಾಗಿದೆ. ಟ್ಯೂಬುಲರ್ ಟ್ರೆಲ್ಲಿಸ್ ಫ್ರೇಮ್ ಹೊಂದಿರುವ ಜಿ 310 ಆರ್ ಬೈಕಿನಲ್ಲಿ 313 ಸಿಸಿ ವಾಟರ್ ಕೂಲ್ಡ್ ರಿವರ್ಸ್ ಇನ್'ಕ್ಲೈನ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಈ ಎಂಜಿನ್ 31 ಬಿ‌ಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಜಿ 310 ಆರ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 143 ಕಿ.ಮೀಗಳಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಬ್ರೇಕಿಂಗ್'ಗಳಿಗಾಗಿ ಜಿ 310 ಆರ್ ಬೈಕಿನ ಮುಂಭಾಗದಲ್ಲಿ 300 ಎಂಎಂ ರೋಟರ್ ಹಾಗೂ ಹಿಂಭಾಗದಲ್ಲಿ 240 ಎಂಎಂ ರೋಟರ್ನೀಡಲಾಗಿದೆ. ಈ ಬ್ರೇಕ್‌ಗಳನ್ನು ಎಬಿಎಸ್ ಯುನಿಟ್ ನಿಯಂತ್ರಿಸುತ್ತದೆ.

ವಿಭಿನ್ನ ವಿನ್ಯಾಸದೊಂದಿಗೆ ಬದಲಾಯ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಲುಕ್

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಸೀಟಿನ ಎತ್ತರ 785 ಎಂಎಂಗಳಾಗಿದೆ. ಇದನ್ನು ಬಿಎಂಡಬ್ಲ್ಯು ಪಾರ್ಟ್ ಬಿನ್‌ನ ಕಸ್ಟಮ್ ಸೀಟುಗಳೊಂದಿಗೆ 15 ಎಂಎಂನಷ್ಟು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಚಿತ್ರ ಕೃಪೆ: ಕೆ-ಸ್ಪೀಡ್ ಕಸ್ಟಮ್/ಇನ್ಸ್​ಟಾಗ್ರಾಂ

Most Read Articles

Kannada
English summary
BMW G 310 R bike modified with different look. Read in Kannada.
Story first published: Friday, July 2, 2021, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X