ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಎಫ್ 900 ಆರ್ ಹಾಗೂ ಎಫ್ 900 ಎಕ್ಸ್ಆರ್ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಈ ಎರಡೂ ಬೈಕ್‌ಗಳ ಬೆಲೆಯನ್ನು ರೂ.90,000ಗಳವರೆಗೆ ಹೆಚ್ಚಿಸಲಾಗಿದೆ.

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಬೆಲೆ ಏರಿಕೆಯ ನಂತರ ಬಿಎಂಡಬ್ಲ್ಯು ಎಫ್ 900 ಆರ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.80 ಲಕ್ಷಗಳಾಗಿದೆ. ಇನ್ನು ಎಫ್ 900 ಎಕ್ಸ್‌ಆರ್‌ನ ಸ್ಟ್ಯಾಂಡರ್ಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.95 ಲಕ್ಷಗಳಾದರೆ, ಎಫ್ 900 ಎಕ್ಸ್‌ಆರ್ ಪ್ರೊ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.40 ಲಕ್ಷಗಳಾಗಿದೆ. ಬೆಲೆ ಏರಿಕೆಯ ಹೊರತಾಗಿ ಈ ಬೈಕುಗಳ ಫೀಚರ್'ಗಳಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ.

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಈ ಎರಡೂ ಬೈಕುಗಳು 895 ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿವೆ. ಆದರೆ ಎರಡೂ ಎಂಜಿನ್'ಗಳು ವಿಭಿನ್ನ ಪವರ್ ಹಾಗೂ ಟಾರ್ಕ್ ಉತ್ಪಾದಿಸುತ್ತವೆ. ಎಫ್ 900 ಎಕ್ಸ್‌ಆರ್ ಬೈಕಿನಲ್ಲಿರುವ ಎಂಜಿನ್ 99 ಬಿಹೆಚ್‌ಪಿ ಪವರ್ ಹಾಗೂ 90.8 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಎಫ್ 900 ಆರ್ ಬೈಕಿನಲ್ಲಿರುವ ಎಂಜಿನ್ 104 ಬಿಹೆಚ್‌ಪಿ ಪವರ್ ಹಾಗೂ 92 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಬಿಎಂಡಬ್ಲ್ಯು ಎಫ್ 900 ಸರಣಿಯ ಬೈಕ್‌ಗಳನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು.ಈ ಎರಡೂ ಬೈಕ್‌ಗಳನ್ನು ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (ಸಿಬಿಯು) ಆಗಿ ಆಮದು ಮಾಡಿಕೊಳ್ಳಲಾಗುತ್ತದೆ. ಈ ಬೈಕ್‌ಗಳಲ್ಲಿ ಕಂಪನಿಯು 3 ವರ್ಷಗಳ ಹಾಗೂ ಅನ್ ಲಿಮಿಟೆಡ್ ಕಿ.ಮೀಗಳ ವಾರಂಟಿಯನ್ನು ನೀಡುತ್ತದೆ. ಈ ವಾರಂಟಿಯನ್ನು 2 ವರ್ಷಗಳವರೆಗೆ ವಿಸ್ತರಿಸ ಬಹುದಾಗಿದೆ.

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಬಿಎಂಡಬ್ಲ್ಯು ಮೋಟೊರಾಡ್ ತನ್ನ ಜಿ 310 ಆರ್ ಹಾಗೂ ಜಿ 310 ಜಿಎಸ್ ಆಫ್-ರೋಡ್ ಬೈಕ್‌ಗಳನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಿದೆ. ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.45 ಲಕ್ಷಗಳಾದರೆ, ಜಿ 310 ಜಿಎಸ್ ಬೈಕಿನ ಬೆಲೆ ರೂ.2.85 ಲಕ್ಷಗಳಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಈ ಎರಡೂ ಬೈಕುಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಬಿಎಂಡಬ್ಲ್ಯು ಕಂಪನಿಯ ಬೈಕುಗಳಾಗಿವೆ. ಬಿಎಂಡಬ್ಲ್ಯು ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಈ ಬೈಕ್‌ಗಳನ್ನು ಉತ್ಪಾದಿಸುತ್ತದೆ. ಕಂಪನಿಯು ಇತ್ತೀಚೆಗೆ ಸಿಇ -04 ಎಲೆಕ್ಟ್ರಿಕ್ ಕಾನ್ಸೆಪ್ಟ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಈ ಸ್ಕೂಟರ್ ಚಲನಶೀಲತೆಯ ಭವಿಷ್ಯವನ್ನು ಬದಲಿಸಬಹುದು ಎಂದು ಕಂಪನಿ ಹೇಳಿದೆ. ಈ ಸ್ಕೂಟರ್ ಡ್ರೈವರ್‌ಗಾಗಿ ಅನಲಾಗ್ ಹಾಗೂ ಡಿಜಿಟಲ್ ಪ್ರಪಂಚಗಳ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಕೂಟರ್‌ನಲ್ಲಿ ಸ್ಕೇಟ್ ಬೋರ್ಡ್ ಮಾದರಿಯ ವಿನ್ಯಾಸವನ್ನು ನೀಡಲಾಗಿದೆ. ಸ್ಕೂಟರ್‌ನಲ್ಲಿ ಫ್ಯೂಯಲ್ ಟ್ಯಾಂಕ್ ಹಾಗೂ ಎಂಜಿನ್ ಬದಲಿಗೆ ಬ್ಯಾಟರಿಯನ್ನು ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಕಂಪನಿಯು ಕಳೆದ ವರ್ಷ ತನ್ನ ಎಸ್ 1000 ಆರ್ ಬೈಕ್ ಅನ್ನು ಸಹ ಅನಾವರಣಗೊಳಿಸಿದೆ. ಈ ಬೈಕ್ ಅನ್ನು ಹಲವಾರು ದಿನಗಳ ನಂತರ ನವೀಕರಿಸಲಾಗಿದೆ. ಬಿಎಂಡಬ್ಲ್ಯು ಎಸ್ 1000 ಆರ್ ಅನ್ನು 2014ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನ ನವೀಕರಣಗಳಿಗಾಗಿ ಗ್ರಾಹಕರು ಕಾಯುತ್ತಿದ್ದರು.

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಕಂಪನಿಯು ಈ ಬೈಕ್‌ನ್ನು ಈ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕಿನಲ್ಲಿ ಹೊಸ ಫೀಚರ್'ಗಳೊಂದಿಗೆ ಎಂಜಿನ್ ಹಾಗೂ ವಿನ್ಯಾಸವನ್ನು ನವೀಕರಿಸಲಾಗಿದೆ. ಈ ಬೈಕಿನಲ್ಲಿ ಅಳವಡಿಸಿರುವ ಸಾಂಪ್ರದಾಯಿಕ ಹೆಡ್‌ಲೈಟ್ ಅದ್ಭುತವಾಗಿ ಕಾಣುತ್ತದೆ. ಈ ಬೈಕ್ ಪರ್ಫಾಮೆನ್ಸ್'ನಲ್ಲಿ ಯಾವುದೇ 1000 ಸಿಸಿ ಬೈಕಿಗಿಂತ ಕಡಿಮೆಯಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಫ್ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಈ ಬೈಕಿನಲ್ಲಿ ಹಲವಾರು ಹೊಸ ಎಕ್ವಿಪ್'ಮೆಂಟ್ ಹಾಗೂ ಸುರಕ್ಷತಾ ಫೀಚರ್'ಗಳನ್ನು ನೀಡಲಾಗಿದೆ. ಇವುಗಳಲ್ಲಿ ಮಲ್ಟಿ-ಲೆವೆಲ್ ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಮೂರು ರೈಡ್ ಮೋಡ್‌, ವ್ಹೀಲಿ ಕಂಟ್ರೋಲ್ ಹಾಗೂ ಎಂಜಿನ್ ಬ್ರೇಕ್ ಕಂಟ್ರೋಲ್'ಗಳು ಸೇರಿವೆ. ಭಾರತದಲ್ಲಿ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.18 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
BMW Motorrad increases price of F 900 R and F 900 XR bikes. Read in Kannada.
Story first published: Tuesday, January 19, 2021, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X