ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ BMW Motorrad ಭಾರತೀಯ ಮಾರುಕಟ್ಟೆಯಲ್ಲಿ ಹೊಸ C 400 GT ಮ್ಯಾಕ್ಸಿ-ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ BMW C 400 GT ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಹೊಸ BMW C 400 GT ಮ್ಯಾಕ್ಸಿ-ಸ್ಕೂಟರ್ ಬೆಲೆ ಘೋಷಣೆಗೂ ಮುನ್ನವೇ 100 ಪ್ರಿ-ಬುಕ್ಕಿಂಗ್ ಸ್ವೀಕರಿಸಿದೆ ಎಂದು ವರದಿಗಳಾಗಿದೆ. ಈ ಹೊಸ BMW C 400 GT ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಮೊದಲ ಮ್ಯಾಕ್ಸಿ-ಸ್ಕೂಟರ್ ಆಗಿದ್ದು, ಇದು 349 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಡೆಸಲ್ಪಡುವ ಪ್ರೀಮಿಯಂ ಮ್ಯಾಕ್ಸಿ-ಸ್ಕೂಟರ್ ಆಗಿ ಸ್ಥಾನ ಪಡೆಯಲಿದೆ. ಈ ಮ್ಯಾಕ್ಸಿ-ಸ್ಕೂಟರ್ ಪ್ರೀಮಿಯಂ ಬೆಲೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

BMW C 400 GT ಮ್ಯಾಕ್ಸಿ ಸ್ಕೂಟರ್‌ನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದರು. ಇನ್ನು ಈ ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಹೊಸ BMW C 400 GT ಮ್ಯಾಕ್ಸಿ-ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು, ಭಾರತದಲ್ಲಿ ಮುಂದಿನ ದಿನಗಳಲ್ಲಿ ಸ್ಕೂಟರ್ ಬೆಲೆಯನ್ನು ಕಂಪನಿಯು ಪ್ರಕಟಿಸುವ ಸಾಧ್ಯತೆಯಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಜಾಗತಿಕ ಪೋರ್ಟ್ಫೋಲಿಯೊದಲ್ಲಿರುವ ಕಂಪನಿಯ ಸಿ 400 ಜಿಟಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ದೊಡ್ಡ ಬದಲಾವಣೆಗಳಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. BMW C 400 GTಮಿಡ್ ಸೈಜ್ ಸ್ಕೂಟರ್ ಆರಾಮದಾಯಕವಾದ ಮಾದರಿಯಾಗಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಇನ್ನು ಜಾಗತಿಕವಾಗಿ ಮಾರಾಟವಾಗುವ BMW C 400 GT ಮ್ಯಾಕ್ಸಿ ಸ್ಕೂಟರ್ ನಲ್ಲಿ 350 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ, ಈ ಎಂಜಿನ್ ಎಂಜಿನ್‌ನೊಂದಿಗೆ ಹೊಸ 'ಇ-ಗ್ಯಾಸ್' ತಂತ್ರಜ್ಞಾನದಿಂದ (ನವೀಕರಿಸಿದ ಥ್ರೊಟಲ್-ಬೈ-ವೈರ್ ಸಿಸ್ಟಂ) ಪ್ರಯೋಜನವನ್ನು ಕೂಡ ಒಳಗೊಂಡಿದೆ

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಇನ್ನು ಇದರಲ್ಲಿ ಆಕ್ಸಿಜನ್ ಸೆನ್ಸರ್ ಮತ್ತು ನವೀಕರಿಸಿದ ಎಕ್ಸಾಸ್ಟ್ ಸಿಸ್ಟಂ ಸಹ ಹೊಂದಿದೆ. ಈ ಎಲ್ಲಾ ನವೀಕರಣಗಳು ಯುರೋ5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ಇನ್ನು ಈ ಎಂಜಿನ್ 7.55 ಆರ್‌ಪಿಎಂನಲ್ಲಿ 33.5 ಬಿಹೆಚ್‍ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 139 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಈ BMW C 400 GT ಸ್ಕೂಟರ್ 139 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಇದರೊಂದಿಗೆ ಹೊಸ ಕ್ಲಚ್ ಸ್ಪ್ರಿಂಗ್‌ಗಳೊಂದಿಗೆ ನವೀಕರಿಸಲಾಗಿದೆ. ಇನ್ನು ಈ ಮ್ಯಾಕ್ಸಿ-ಸ್ಕೂಟರ್ ಆಲ್ಪೈನ್ ವೈಟ್, ಮೂನ್ವಾಲ್ಕ್‌ಗ್ರೇ ಮೆಟಾಲಿಕ್ ಮತ್ತು ಬ್ಲಾಕ್‌ಸ್ಟಾರ್ಮ್ ಮೆಟಾಲಿಕ್ ಎಂಬ ಮೂರು ಬಣ್ಣಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಹೊಸ BMW C 400 GT ಮ್ಯಾಕ್ಸಿ-ಸ್ಕೂಟರ್ ನಲ್ಲಿ ಎಲ್‌ಇಡಿ ಲೈಟಿಂಗ್ ಸಿಸ್ಟಂ, ಸ್ಪೋರ್ಟಿ ವಿ-ಆಕಾರದ ಟ್ರಿಮ್ ಪ್ಯಾನಲ್ ಯುನಿಟ್ ಗಳು, ದೊಡ್ಡ-ಸ್ವರೂಪದ ವಿಂಡ್‌ಸ್ಕ್ರೀನ್, ಏರೋಡೈನಾಮಿಕ್ ವಿನ್ಯಾಸಗೊಳಿಸಲಾದ ಸೀಟ್ ಮತ್ತು ಹೆಚ್ಚಿನವು ಇದರ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಇತ್ತೀಚೆಗೆ ನವೀಕರಿಸಿದ ಮಾದರಿಯು ಹೊಸ ಬ್ರೇಕ್‌ಗಳು ಮತ್ತು ಪರಿಷ್ಕೃತ ಆಟೋಮ್ಯಾಟಿಕ್ ಸ್ಟಿಬಿಲಿಟಿ ಕಂಟ್ರೋಲ್ (ಎಎಸ್‌ಸಿ) ಯೊಂದಿಗೆ ಬರುತ್ತದೆ. ಎರಡನೆಯದು ಲೋಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಇನ್ನು BMW Motorrad ತನ್ನ ಹೊಸ 2021ರ ಎಸ್1000ಆರ್ ಬೈಕನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ನೇಕೆಡ್ ರೋಡ್‌ಸ್ಟರ್ ಸ್ಟೈಲಿಂಗ್ ಅನ್ನು ಹೊಂದಿದೆ. ಇದೀಗ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಭಾರತದಲ್ಲಿ ಈ ಬಿಎಂಡಬ್ಲ್ಯು ಎಸ್1000ಆರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ. ಬಿಎಂಡಬ್ಲ್ಯುಎಸ್1000ಆರ್ ವಿನ್ಯಾಸ ಮಾತ್ರವಲ್ಲದೇ ಇದರ ಪರ್ಫಾಮೆನ್ಸ್ ಮತ್ತು ಉತ್ತಮ ಕಂಟ್ರೋಲ್ ಗಳಿಂದ ಹೆಚ್ಚು ಜನಪ್ರಿಯತೆಯ ಗಳಿಸಿದ ಬೈಕ್ ಆಗಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಈ ಸೂಪರ್ ಬೈಕ್ ರೇಸಿಂಗ್ ರೆಡ್ ಮತ್ತು ಲೈಟ್ ವೈಟ್/ಎಂ ಮೋಟಾರ್ಸ್ಪೋರ್ಟ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಈ ಬೈಕ್ ವಿನ್ಯಾಸದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಬಿಎಂಡಬ್ಲ್ಯು ಎಸ್1000ಆರ್ ಬೈಕಿನೊಂದಿಗೆ ಮತ್ತಷ್ಟು 'ಎಂ ಪ್ಯಾಕೇಜ್' ಆಯ್ಕೆ ಮಾಡಿಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಲಾಗಿದ್ದರೂ, ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯ ಎಂಜಿನ್ ಅನ್ನು ಮುಂದೆ ಸಾಗಿಸಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಂಡ BMW C 400 GT ಮ್ಯಾಕ್ಸಿ-ಸ್ಕೂಟರ್

ಭಾರತದಲ್ಲಿ BMW C 400 GT ಮ್ಯಾಕ್ಸಿ-ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,6 ಲಕ್ಷಕ್ಕೆ ಬಿಡುಗಡೆಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ, ಅಲ್ಲದೇ ಈ ಹೊಸ BMW ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Bmw motorrad planning to launch new c 400 gt maxi scooter soon india details
Story first published: Tuesday, August 31, 2021, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X