ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಯಾವುದಾದರೂ ದ್ವಿಚಕ್ರ ವಾಹನಗಳನ್ನು ನೋಡಿದ ತಕ್ಷಣ ಅದು ಬೈಕ್, ಸ್ಕೂಟರ್ ಅಥವಾ ಸೈಕಲ್ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ಮೂಡುತ್ತದೆ. ಆದರೆ ಈಗ ವಿಶ್ವ ವಿಖ್ಯಾತ ಕಂಪನಿಯೊಂದು ದ್ವಿಚಕ್ರ ವಾಹನವೊಂದನ್ನು ಬಿಡುಗಡೆಗೊಳಿಸಿದೆ. ಈ ವಾಹನವನ್ನು ನೋಡಿದರೆ ಇದು ಬೈಕ್ ಅಥವಾ ಸೈಕಲ್ ಎಂಬ ಅನುಮಾನ ಬರುವಂತೆ ಈ ದ್ವಿಚಕ್ರ ವಾಹನವನ್ನು ವಿನ್ಯಾಸಗೊಳಿಸಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಕಂಪನಿಯು ಈ ವಾಹನವನ್ನು ವಿಶ್ವಾದ್ಯಂತ ಕಾನ್ಸೆಪ್ಟ್ ಮಾದರಿಯಾಗಿ ಬಿಡುಗಡೆಗೊಳಿಸುತ್ತಿದೆ. ಅಂದ ಹಾಗೆ ಈ ವಿಲಕ್ಷಣ ದ್ವಿಚಕ್ರ ವಾಹನವನ್ನು ವಿನ್ಯಾಸಗೊಳಿಸಿರುವುದು ಖ್ಯಾತ ಐಷಾರಾಮಿ ಕಾರು ತಯಾರಕ ಕಂಪನಿಯಾದ BMW. BMW ಕಂಪನಿಯು BMW Motorrad ಪ್ರೀಮಿಯಂ ಗುಣಮಟ್ಟದ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಇತ್ತೀಚಿನ ಕಾರ್ಪೊರೇಟ್ ಹಗರಣಗಳಿಂದಾಗಿ ಈ ರೀತಿಯ ವಾಹನಗಳಿಗೆ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ. ಈ ಕಾರಣಕ್ಕೆ BMW ಕಂಪನಿಯು ಹೊಸ ಮಾದರಿಯ Vision AMBY ಹೆಸರಿನ ದ್ವಿಚಕ್ರ ವಾಹನವನ್ನು ಉತ್ಪಾದಿಸಲು ಮುಂದಾಗಿದೆ. ಸದ್ಯಕ್ಕೆ ಕಂಪನಿಯು ಈ ದ್ವಿಚಕ್ರ ವಾಹನವನ್ನು ವಿಶ್ವದಾದ್ಯಂತ ಕಾನ್ಸೆಪ್ಟ್ ಮಾದರಿಯಾಗಿ ಬಿಡುಗಡೆಗೊಳಿಸಲಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಈ ದ್ವಿಚಕ್ರ ವಾಹನವು ಹಲವರ ಗಮನ ಸೆಳೆದಿದೆ. ಸೈಕಲ್ ಹಾಗೂ ಬೈಕಿನ ಮಿಶ್ರಣದಂತಿರುವ ಹಾಗೂ ಎಲೆಕ್ಟ್ರಿಕ್ ಮೂಲಕ ಚಲಿಸುವ ಸಾಮರ್ಥ್ಯವಿರುವ ಕಾರಣಕ್ಕೆ ಈ ದ್ವಿಚಕ್ರ ವಾಹನವು ಜನರ ಗಮನ ಸೆಳೆದಿದೆ. BMW Vision Amby ದ್ವಿಚಕ್ರ ವಾಹನದಲ್ಲಿ ಹಲವಾರು ಬೆರಗುಗೊಳಿಸುವ ಫೀಚರ್ ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಈ ಡ್ಯುಯಲ್ ಲುಕ್ ದ್ವಿಚಕ್ರ ವಾಹನವನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನ, ಉಪಯುಕ್ತತೆ ಹಾಗೂ ಪ್ರಾಯೋಗಿಕತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. Vision Amby ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಅತಿ ಚಿಕ್ಕ ಎಲೆಕ್ಟ್ರಿಕ್ ಲೈಟ್ ಅಳವಡಿಸಲಾಗಿದೆ. ಇದರ ಜೊತೆಗೆ ಯು ಶೇಪಿನ BMW ದ್ವಿಚಕ್ರ ವಾಹನದಲ್ಲಿ ಸಿಗ್ನೆಚರ್ ಎಲೆಕ್ಟ್ರಿಕ್ ಲೈಕ್ ಅಳವಡಿಸಲಾಗಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಈ ದ್ವಿಚಕ್ರ ವಾಹನದಲ್ಲಿ ದೊಡ್ಡ ವ್ಹೀಲ್ ಹಾಗೂ ಫೋರ್ಕ್ ಅನ್ನು ಸಹ ನೀಡಲಾಗಿದೆ. ಈ ದ್ವಿಚಕ್ರ ವಾಹನವು ಸಾಮಾನ್ಯವಾಗಿ ಬೈಕ್ ಗಳಲ್ಲಿ ಕಂಡು ಬರುವುದಕ್ಕಿಂತ ಎತ್ತರವಾಗಿರುವ ವ್ಹೀಲ್ ಹಾಗೂ ದಪ್ಪವಾದ ಟಯರ್ ಅನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಈ ವಾಹನವು ಬೈಕ್ ಅಥವಾ ಸೈಕಲ್ ಎಂಬ ಬಗ್ಗೆ ಅನುಮಾನ ಮೂಡುತ್ತದೆ. ಮತ್ತೊಂದು ನೋಟವು ಈ ದ್ವಿಚಕ್ರ ವಾಹನವನ್ನು ಬೈಕ್ ಎಂದು ದೃಢಪಡಿಸುತ್ತದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

Vision Amby ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಮುಂಭಾಗದಲ್ಲಿ 26 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿ 24 ಇಂಚಿನ ವ್ಹೀಲ್ ಹೊಂದಿದೆ. ಈ ವಾಹನದ ಟಯರ್ ಒರಟು ರಸ್ತೆಗಳನ್ನು ತಡೆದುಕೊಳ್ಳುವ ವಿಶೇಷ ಆಕಾರವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ವಾಹನದ ತೆಳುವಾದ ಆಕಾರವು ಡರ್ಟ್ ಬೈಕಿನಂತೆ ಕಾಣುವಂತೆ ಮಾಡುತ್ತದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

BMW Motorrad ಕಂಪನಿಯು ಈ ವಾಹನದಲ್ಲಿ ಬ್ಯಾಟರಿ ಪ್ಯಾಕ್ ಅನ್ನು ಬಳಸಿದೆ. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಕಾನ್ಸೆಪ್ಟ್ ವಾಹನವು ಸುಮಾರು 110 ಕಿ.ಮೀಗಳವರೆಗೆ ಚಲಿಸುತ್ತದೆ. ಇದರ ಜೊತೆಗೆ ರಸ್ತೆಯನ್ನು ಆಟೋಮ್ಯಾಟಿಕ್ ಆಗಿ ಪತ್ತೆಹಚ್ಚುವ ಹಾಗೂ ವೇಗವನ್ನು ಹೆಚ್ಚಿಸುವ ತಂತ್ರಜ್ಞಾನವನ್ನು BMW ಕಂಪನಿಯು ಈ ದ್ವಿಚಕ್ರ ವಾಹನದಲ್ಲಿ ನೀಡಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಈ ದ್ವಿಚಕ್ರ ವಾಹನವು ಭಾರೀ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಹಾಗೂ ಹೆದ್ದಾರಿಗಳಲ್ಲಿ ಪ್ರತಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಾಹನವು ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಈ ವಾಹನವನ್ನು ಚಾಲನೆ ಮಾಡುವವರು ಡ್ರೈವಿಂಗ್ ಲೈಸೆನ್ಸ್, ಇನ್ಸ್ಯೂರೆನ್ಸ್ ಹಾಗೂ ಹೆಲ್ಮೆಟ್ ಹೊಂದಿರುವುದು ಕಡ್ಡಾಯ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಈ ವಾಹನದಲ್ಲಿ ಥ್ರೊಟಲ್‌ಗೆ ಬದಲು ಪೆಡಲ್ ನೀಡಲಾಗುತ್ತದೆ. ಇದರಿಂದ ಈ ವಾಹನವನ್ನು ಎಲೆಕ್ಟ್ರಿಕ್ ಬೈಕಿನಂತೆ ಮಾತ್ರವಲ್ಲದೇ ಸೈಕಲ್ ರೀತಿಯಲ್ಲೂ ಬಳಸಬಹುದು. BMW Motorrad ಕಂಪನಿಯು ಇತ್ತೀಚೆಗೆ CE 02 ಎಂಬ ಕಾನ್ಸೆಪ್ಟ್ ಮಾದರಿಯನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸಿದೆ. ಈಗ ಪರಿಚಯಿಸಲಾಗುತ್ತಿರುವ ಕಾನ್ಸೆಪ್ಟ್ ಮಾದರಿಯಂತೆ ಈ ವಾಹನವು ಸಹ ಆಧುನಿಕ ಶೈಲಿಯನ್ನು ಹೊಂದಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಈ ವಾಹನವು ಈಗಾಗಲೇ ಜನರ ಗಮನವನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ. BMW Motorrad ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ C 400 GT ಐಷಾರಾಮಿ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ BMW C 400 GT ಮ್ಯಾಕ್ಸಿ ಸ್ಕೂಟರಿನ ಬೆಲೆಯನ್ನು ಘೋಷಿಸುವ ಮುನ್ನವೇ ಈ ಸ್ಕೂಟರಿನ 100 ಯುನಿಟ್ ಗಳನ್ನು ಪ್ರಿ ಬುಕ್ಕಿಂಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡ್ಯುಯಲ್ ಲುಕ್ ಹೊಂದಿರುವ ದ್ವಿಚಕ್ರ ವಾಹನ ಅನಾವರಣಗೊಳಿಸಿದ BMW Motorrad

ಹೊಸ BMW C 400 GT ಭಾರತದಲ್ಲಿ BMW Motorrad ಕಂಪನಿಯ ಮೊದಲ ಮ್ಯಾಕ್ಸಿ ಸ್ಕೂಟರ್ ಆಗಿದೆ. ಈ ಮ್ಯಾಕ್ಸಿ ಸ್ಕೂಟರ್ 349 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿರಲಿದೆ. ಈ ಮ್ಯಾಕ್ಸಿ ಸ್ಕೂಟರ್ ಪ್ರೀಮಿಯಂ ಬೆಲೆಯನ್ನು ಹೊಂದುವ ನಿರೀಕ್ಷೆಗಳಿವೆ. ಜಾಗತಿಕವಾಗಿ ಮಾರಾಟವಾಗುವ BMW C 400 GT ಮ್ಯಾಕ್ಸಿ ಸ್ಕೂಟರ್ 350 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ.

Most Read Articles

Kannada
English summary
Bmw motorrad unveils dual look vision amby concept two wheeler details
Story first published: Tuesday, September 7, 2021, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X