ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಬೌನ್ಸ್ ಮೊಬಿಲಿಟಿ ಬೌನ್ಸ್-ಇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಬೆಂಗಳೂರು ಮೂಲದ ಕಂಪನಿಯಾದ ಬೌನ್ಸ್ ಮೊಬಿಲಿಟಿ ತನ್ನ ಸೇವೆಯಲ್ಲಿರುವ ಎಲ್ಲಾ ಸ್ಕೂಟರ್‌ಗಳನ್ನು 2022ರ ವೇಳೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿ ಬದಲಿಸುವುದಾಗಿ ತಿಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಬೌನ್ಸ್ ಅಪ್ಲಿಕೇಶನ್‌ ಮೂಲಕ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬುಕ್ ಮಾಡಬಹುದು. ಅಪ್ಲಿಕೇಶನ್‌ನಲ್ಲಿ ಈ ಸ್ಕೂಟರ್ ಚಂದಾದಾರಿಕೆ ಹಾಗೂ ದೀರ್ಘಾವಧಿಯ ಬಾಡಿಗೆಗಳಿಗೆ ಲಭ್ಯವಿದೆ. ಸದ್ಯಕ್ಕೆ ಬೌನ್ಸ್ ಕಂಪನಿಯು ಈ ಸೇವೆಯನ್ನು ಬೆಂಗಳೂರು ನಗರದಲ್ಲಿ ಮಾತ್ರ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಬೌನ್ಸ್ ಕಂಪನಿಯು ಕಳೆದ ಕೆಲವು ತಿಂಗಳುಗಳಿಂದ ತನ್ನ ಎಲೆಕ್ಟ್ರಿಕ್ ಸ್ಕೂಟರಿನ ಬಗ್ಗೆ ಗಮನ ಹರಿಸಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಉತ್ಪಾದಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಈ ಸ್ಕೂಟರ್ 100 ಸಿಸಿ ಮೊಪೆಡ್‌ನಷ್ಟು ಸಾಮರ್ಥ್ಯವನ್ನು ಹೊಂದಿದ್ದು, ಇಬ್ಬರು ಸುಲಭವಾಗಿ ಕುಳಿತುಕೊಳ್ಳಬಹುದು. ಈ ಸ್ಕೂಟರ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಆರಾಮದಾಯಕವಾದ ಸೀಟ್ ಅನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಈ ಸ್ಕೂಟರ್ ಅನ್ನು ನಗರದಲ್ಲಿನ ನಿಧಾನ ಗತಿಯ ಸವಾರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ವೇಗವನ್ನು ಪ್ರತಿ ಗಂಟೆಗೆ 25-30 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ. ಈ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 60 ಕಿ.ಮೀಗಳವರೆಗೆ ಚಲಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಈ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಹೊರತೆಗೆದು ಚಾರ್ಜ್ ಮಾಡಬಹುದು. ಬೌನ್ಸ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ಸ್ಕೂಟರ್‌ಗಳಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಅಲ್ಲಿ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಡಿಸ್ಚಾರ್ಜ್ ಆಗಿರುವ ಬ್ಯಾಟರಿಗಳೊಂದಿಗೆ ಬದಲಿಸಬಹುದು.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಬಗ್ಗೆ ಹೇಳುವುದಾದರೆ, ಬ್ಯಾಟರಿ ವಿನಿಮಯವನ್ನು ಚಾರ್ಜ್ ಮಾಡುವುದಕ್ಕಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ಬ್ಯಾಟರಿ ವಿನಿಮಯವು ಬ್ಯಾಟರಿಯನ್ನು ಚಾರ್ಜ್ ಮಾಡುವ ಮೂಲಕ ಸಮಯವನ್ನು ಉಳಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಬೆಂಗಳೂರಿನ ಹಲವು ಕಂಪನಿಗಳು ಚಾರ್ಜಿಂಗ್ ಸ್ಟೇಷನ್ ಜೊತೆಗೆ ಬ್ಯಾಟರಿ ವಿನಿಮಯ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿಯನ್ನು ಒಂದು ನಿಮಿಷದಲ್ಲಿ ಬದಲಿಸಬಹುದು ಎಂದು ಬೌನ್ಸ್ ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.46,000ಗಳಿಗೆ ಖರೀದಿಸಬಹುದು. ಇದರಲ್ಲಿ ಬ್ಯಾಟರಿಯ ಬೆಲೆಯನ್ನು ಸೇರಿಸಲಾಗಿಲ್ಲ. ಬ್ಯಾಟರಿಗಳನ್ನು ಗ್ರಾಹಕರಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಸ್ಕೂಟರ್‌ನ ಬೆಲೆಯನ್ನು ಕಡಿಮೆ ಮಾಡುವ ಸಲುವಾಗಿ ಈ ರೀತಿ ಮಾಡಲಾಗಿದೆ. ಬೌನ್ಸ್ ಕಂಪನಿಯು ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ಬೆಂಗಳೂರಿನಲ್ಲಿ 22,000 ಸ್ಕೂಟರ್ ಹಾಗೂ ಹೈದರಾಬಾದ್'ನಲ್ಲಿ 5,000 ಸ್ಕೂಟರ್'ಗಳೊಂದಿಗೆ ಸೇವೆಗಳನ್ನು ಒದಗಿಸುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಕಂಪನಿಯು ಇತರ ಪ್ರಮುಖ ನಗರಗಳಲ್ಲಿಯೂ ಸೇವೆಗಳನ್ನು ನೀಡಲು ಬಯಸಿದೆ. ಬೌನ್ಸ್ ಕಂಪನಿಯು ಅಲ್ಪಾವಧಿಯ ಬಾಡಿಗೆ, ದೀರ್ಘಾವಧಿ ಬಾಡಿಗೆ ಹಾಗೂ ಬಾಡಿಗೆ ವೇದಿಕೆಯಲ್ಲಿ ಸವಾರಿ ಷೇರ್ ಎಂಬ ಮೂರು ರೀತಿಯ ಸವಾರಿಗಳನ್ನು ನೀಡುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಬೌನ್ಸ್ ಮೊಬಿಲಿಟಿ

ಅಲ್ಪಾವಧಿಯ ಬಾಡಿಗೆ ಸವಾರಿಗಳಲ್ಲಿ, ಸ್ಕೂಟರ್‌ಗಳನ್ನು 2-12 ಗಂಟೆಗಳ ಕಾಲ ಕಾಯ್ದಿರಿಸಬಹುದು. ದೀರ್ಘಾವಧಿಯ ಬಾಡಿಗೆ ಸವಾರಿಗಳಲ್ಲಿ 15-45 ದಿನಗಳವರೆಗೆ ಕಾಯ್ದಿರಿಸಬಹುದು. ಸವಾರಿಗೆ ನೀಡುವ ಮುನ್ನ ಕಂಪನಿಯು ಎಲ್ಲಾ ಸ್ಕೂಟರ್‌ಗಳನ್ನು ಸ್ವಚ್ಛಗೊಳಿಸುತ್ತದೆ. ಬೌನ್ಸ್ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 4,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತನ್ನ ಸೇವೆಗೆ ಸೇರಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ಕೂಟರ್‌ಗಳನ್ನು ವೇಗವಾಗಿ ಉತ್ಪಾದಿಸಲಾಗುತ್ತಿದೆ. ಕ್ಯಾಬ್ ಸೇವಾ ಕಂಪನಿಯಾದ ಓಲಾ ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರುಕಟ್ಟೆಗೆ ಕಾಲಿಟ್ಟಿದೆ. ಓಲಾ ಕಂಪನಿಯು ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Bounce mobility launches bounce e electric scooters. Read in Kannada.
Story first published: Saturday, February 27, 2021, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X