ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಯಮಹಾ ಕಂಪನಿಯು ವೈಜೆಡ್ಎಫ್-ಆರ್3 ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಭಾರತದಲ್ಲಿ ಹೊಸ ಯಮಹಾ ಆರ್3 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಟೆಸ್ಟ್ ನಡೆಸುವಾಗ ಯಮಹಾ ಆರ್15 ವಿ4 ಮಾದರಿಯಾಗಿರಬಹುದು ಎಂದು ವರದಿಯಾಗಿತ್ತು. ಆದರೆ ನಂತರ ಇದು ಯಮಹಾ ಆರ್3 ಬೈಕ್ ಎಂಬ ಮಾಹಿತಿ ಬಹಿರಂಗವಾಯ್ತು. ಟೆಸ್ಟಿಂಗ್ ವೇಳೆ ಈ ಹೊಸ ಯಮಹಾ ಆರ್3 ಬೈಕ್ ಸೆಂಟ್ರಲ್ ನಲ್ಲಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿತ್ತು.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಈ ಹೊಸ ಯಮಹಾ ಆರ್3 ಬೈಕ್ ಹಿಂದಿನ ಬಿಎಸ್4 ಮಾದರಿಗೆ ಹೋಲುತ್ತದೆ. ಈ ಯಮಹಾ ಆರ್3 ಬೈಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ವಿನ್ಯಾಸದ ಹೊರತಾಗಿ, ಬಿಎಸ್6 ಆರ್3 ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಐಎಂಯು ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಇನ್ನು ಆರ್3 ಬೈಕ್ ಟ್ರ್ಯಾಕ್ಷನ್ ಕಂಟ್ರೋಲ್ ಅಥವಾ ಪವರ್ ಮೋಡ್‌ಗಳಂತಹ ವೈಶಿಷ್ಟ್ಯಗಳನ್ನು ಕಳೆದುಕೊಳ್ಳಬಹುದು. 2021ರ ಯಮಹಾ ಆರ್3 ಬೈಕಿನಲ್ಲಿ ಅದೇ 321 ಸಿಸಿ, ಲಿಕ್ವಿಡ್-ಕೂಲ್ಡ್, ಪ್ಯಾರೆಲಲ್-ಟ್ವಿನ್-ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಈ ಎಂಜಿನ್ ಅನ್ನು 10,750 ಆರ್‌ಪಿಎಂನಲ್ಲಿ 41 ಬಿಹೆಚ್‌ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 29 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಮತ್ತು ಟಾರ್ಕ್ ಅಂಕಿಅಂಶಗಳಲ್ಲಿ ದೊಡ್ಡ ಬದಲಾವಣೆಗಳನ್ನು ಇರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಈ ಹೊಸ ಯಮಹಾ ಆರ್3 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 298 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಯಮಹಾ ತನ್ನ 2021ರ ಆರ್3 ಬೈಕನ್ನು ಜಪಾನ್ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿತ್ತು. 2021ರ ಯಮಹಾ ಆರ್3 ಬೈಕ್ ಹೊಸ ಗ್ರಾಫಿಕ್ಸ್ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಇನ್ನು ಸಯಾನ್ ಬಣ್ಣ ಆಯ್ಕೆಯ ಹೊರತಾಗಿ, 2021ರ ಯಮಹಾ ಆರ್3 ಬೈಕ್ ನವೀಕರಿಸಿದ ಮ್ಯಾಟ್ ಬ್ಲ್ಯಾಕ್ ಶೇಡ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಆರ್3 ಬೈಕ್

ಒಟ್ಟಿನಲ್ಲಿ ಯಮಹಾ ಕಂಪನಿಯು ಆರ್3 ಬೈಕನ್ನು ಭಾರತೀಯ ಮಾರುಕಟ್ಟೆಗೆ ಮರಳಿ ತರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಯಮಹಾ ಆರ್3 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಅಪಾಚೆ ಆರ್ಆರ್310 ಮತ್ತು ಕೆಟಿಎಂ ಆರ್ಸಿ390 ಬೈಕ್ ಗಳನ್ನು ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha R3 BS6 India Launch Expected Soon. Read In Kannada.
Story first published: Wednesday, July 28, 2021, 22:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X