ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಿಎಸ್-6 300ಎನ್‌ಕೆ ಬೈಕಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಇನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಟೀಸರ್ ಚಿತ್ರ ಹೆಡ್‌ಲೈಟ್ ಬೆಳಕಿನ ಪ್ರದರ್ಶನದಿಂದ ಕೂಡಿದೆ. ಇದು ಹಿಂದಿನ ಬಿಎಸ್-4 ಮಾದರಿಯನ್ನು ಹೋಲುತ್ತದೆ. ಸ್ಟೈಲಿಂಗ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸುವುದಿಲ್ಲ, ಆದರೂ ಹೊಸ ಮಾದರಿಯನ್ನು ಹಿಂದಿನ ಮಾದರಿಗಿಂತ ವಿಭಿನ್ನವಾಗಿ ಕಾಣಲು ಹೊಸ ಬಣ್ಣಗಳ ಆಯ್ಕೆ ಮತ್ತು ಗ್ರಾಫಿಕ್ಸ್ ಅನ್ನು ಪರಿಷ್ಕರಿಸಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್ 1,990 ಎಂಎಂ ಉದ್ದ, 1,070 ಎಂಎಂ ಎತ್ತರವಿದೆ ಮತ್ತು 1,360 ಎಂಎಂ ವೀಲ್‌ಬೇಸ್ ಹೊಂದಿದೆ. ಈ ಬೈಕು ಸೀಟ್ ಎತ್ತರವನ್ನು 795ಎಂಎಂ ನೀಡಿದರೆ, ಗ್ರೌಂಡ್ ಕ್ಲಿಯರೆನ್ಸ್ 150 ಎಂಎಂ ಆಗಿದೆ. ಇನ್ನು 2.5-ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಇನ್ನು ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್ ಡ್ಯುಯಲ್-ಟೋನ್ ಬಣ್ಣ, ಸ್ಪ್ಲಿಟ್-ಸ್ಟೈಲ್ ಸೀಟ್, ಹಿಂಭಾಗದ ಫೆಂಡರ್ ಮೌಂಟಡ್ ನಂಬರ್‌ಪ್ಲೇಟ್ ಮತ್ತು ಅಂಡರ್‌ಬೆಲ್ಲಿ ಎಕ್ಸಾಸ್ಟ್ ಫಿಚರ್ ನೊಂದಿಗ ಬೈಕ್ ಅಗ್ರೇಸಿವ್ ಲುಕ್ ಹೊಂದಿರುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಇನ್ನು ಈ ಬಿಎಸ್-6 300ಎನ್‌ಕೆ ಬೈಕ್ ಫುಲ್ ಎಲ್ಇಡಿ ಲೈಟಿಂಗ್ ಮತ್ತು ಕಲರ್ ಟಿಎಫ್ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಬಿಎಸ್-6 3 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಹೊಸ ಫೀಚರ್ ಗಳು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಇನ್ನು ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅಪ್ ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಸಿಎಫ್‌ಮೋಟೋ 300ಎನ್‌ಕೆ ಬೈಕ್ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಬಹುದು. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒದಗಿಸುತ್ತದೆ. ಈ ಬೈಕ್ ಒಟ್ಟು 151 ಕೆ.ಜಿ. ತೂಕವಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಸ್ಟೈಲಿಂಗ್ ಮತ್ತು ಫೀಚರ್ ಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಆದರೆ ಇದರಲ್ಲಿ ಪ್ರಮುಖ ಬದಲಾವಣೆ ಅಂದರೆ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಅದೇ 292.4ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದರ ಹಿಂದಿನ ಬಿಎಸ್ 4 ಮಾದರಿಯು 33.5 ಬಿಹೆಚ್‌ಪಿ ಪವರ್ ಮತ್ತು 20.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್

ಸಿಎಫ್‌ಮೋಟೋ 300ಎನ್‌ಕೆ ಬೈಕ್ 139 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಆದರೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಸ್ವಲ್ಪ ಕಡಿಮೆಯಾಗಬಹುದು. ಇನ್ನು ಈ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
CFMoto 300NK BS6 Launching Soon. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X