ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಕ್ವಾರ್ಟರ್-ಲೀಟರ್ ಫೇರ್ಡ್ 250ಎಸ್‌ಆರ್ ರೇಸ್ ಎಡಿಷನ್ ಬೈಕನ್ನು ಚೀನಾದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್ ಹೊಸ ಬಣ್ಣಗಳೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಹೊಸ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್ ಕಿತ್ತಳೆ ಮತ್ತು ನೀಲಿ ಬಣ್ಣಗಳ ಹೊಂದಾಣಿಕೆಯ ಸಂಯೋಜನೆಯನ್ನು ಹೊಂದಿದೆ. ಸಿಎಫ್‌ಮೋಟೋ ಕಂಪನಿಯು 250ಎಸ್‌ಆರ್ ಬೈಕನ್ನು ಭಾರತಕ್ಕೆ ತರಲು ಯೋಜಿಸಿದರೆ, ಈ ಬೈಕ್ ಕೆಟಿಎಂ ಆರ್‌ಸಿ200 ಮಾದರಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಆದರೆ ಈ 250ಎಸ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸಿಎಫ್‌ಮೋಟೋ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಹೊಸ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್ ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ಟ್ವಿನ್-ಪಾಡ್ ಎಲ್ಇಡಿ ಫ್ರಂಟ್ ಹೆಡ್ ಲ್ಯಾಂಪ್ ಅನ್ನು ಎಲ್ಇಡಿ ಡಿಆರ್ಎಲ್ ಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಈ ಬೈಕಿನಲ್ಲಿ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ಟೈಲ್ ವಿಭಾಗವನ್ನು ಚೆನ್ನಾಗಿ ಸಂಯೋಜಿಸುತ್ತದೆ. ಇದಲ್ಲದೆ, ಡೈನಾಮಿಕ್ ಆರೇಂಜ್ ಮತ್ತು ಬ್ಲೂ ಬಣ್ಣವು ಅದನ್ನು ಸಾಕಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಇನ್ನು ಈ ರೇಸ್ ಎಡಿಷನ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವ ಕಲರ್ ಟಿಎಫ್‌ಟಿ ಡಿಸ್ ಪ್ಲೇಯನ್ನು ನೀಡಲಾಗಿದೆ. ಇನ್ನು ಈ ಬೈಕಿನಲ್ಲಿ ಹಲವು ಅತ್ಯಾಧುನಿಕ ಫೀಚರ್ಸ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಹೊಸ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್ 249.2 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,750 ಆರ್‌ಪಿಎಂನಲ್ಲಿ 27.5 ಬಿಹೆಚ್‌ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 22 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಈ ರೇಸ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಗೋಲ್ಡನ್ 37 ಎಂಎಂ ಉಲ್ಟಾ-ಡೌನ್ ಫೋರ್ಕ್ ಮತ್ತು ಹಿಂಭಾಗದ ಮೊನೊ-ಶಾಕ್ ಸೆಟಪ್ ಆಗಿದೆ. ಇದು ಡ್ಯಾಂಪಿಂಗ್ ಕೆವೈಬಿ ಮೂಲದ ಸಸ್ಪೆಂಕ್ಷನ್ ಸೆಟಪ್ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 292 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಈ ರೇಸ್ ಎಡಿಷನ್ ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್

ಹೊಸ ಸಿಎಫ್‌ಮೋಟೋ 250ಎಸ್‌ಆರ್ ರೇಸ್ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಆದರೆ ಸಿಎಫ್‌ಮೋಟೋ ದೊಡ್ಡದಾದ 300ಎಸ್‌ಆರ್‌ ಬೈಕನ್ನು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Most Read Articles

Kannada
English summary
CFMoto 250SR Race Edition Revealed. Read In Kannada.
Story first published: Thursday, July 22, 2021, 21:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X