Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

2007ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಬಜಾಜ್ ಪಲ್ಸರ್ (Bajaj Pulsar) 220 F ಬೈಕ್ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಬಿಡುಗಡೆಯಾದ 14 ವರ್ಷಗಳ ನಂತರವೂ ಈ ಬೈಕಿನ ಕ್ರೇಜ್ ಕಡಿಮೆಯಾಗಿಲ್ಲ ಎಂಬುದು ವಿಶೇಷ. ಪುಣೆ ಮೂಲದ Bajaj ಕಂಪನಿಯು ದೇಶದಲ್ಲಿ ಹಲವು ಸರಣಿಯ ಬೈಕುಗಳನ್ನು ಬಿಡುಗಡೆಗೊಳಿಸಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಆದರೂ ಪಲ್ಸರ್ 220 F ಬೈಕ್ ಹೊಂದಿರುವ ಜನಪ್ರಿಯತೆಯನ್ನು ಬೇರೆ ಬೈಕುಗಳು ಹೊಂದಲು ಸಾಧ್ಯವಾಗದೇ ಹೆಣಗಾಡುತ್ತಿದೆ. ಬಜಾಜ್ ಕಂಪನಿಯು ಇತ್ತೀಚಿಗೆ ಎರಡು ಹೊಸ 250 ಸಿಸಿ ಬೈಕುಗಳನ್ನು ಪರಿಚಯಿಸಿದೆ. ಈ ಬೈಕುಗಳು ಸಹ 250 ಸಿಸಿ ಆಗಿರುವುದರಿಂದ ಇವುಗಳನ್ನು ಬಜಾಜ್ ಕಂಪನಿಯ ಮತ್ತೊಂದು ಬೈಕ್ ಆದ Dominor 250 ಬೈಕಿನೊಂದಿಗೆ ಹೋಲಿಸಲಾಗುತ್ತಿದೆ. Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸವನ್ನು ಈ ಲೇಖನದಲ್ಲಿ ನೋಡೋಣ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

1. ವಿನ್ಯಾಸ

ಬಜಾಜ್ ಕಂಪನಿಯು ಡೊಮಿನಾರ್ ಬೈಕ್ ಅನ್ನು ಬಿಡುಗಡೆಗೊಳಿಸಿದಾಗ, ಆ ಬೈಕಿನ ಪವರ್ ಕ್ರೂಸರ್ ನಿಲುವಿನಿಂದಾಗಿ ಅದರ ವಿನ್ಯಾಸವನ್ನು ಡುಕಾಟಿ ಡಯಾವೆಲ್‌ ಬೈಕಿಗೆ ಹೋಲಿಸಲಾಗುತ್ತಿತ್ತು. ಬಜಾಜ್ ಡೊಮಿನಾರ್ 250 ಬೈಕಿನ ವಿನ್ಯಾಸವು ಮಸ್ಕ್ಯುಲರ್ ಫ್ಯೂಯಲ್ ಟ್ಯಾಂಕ್ ಹಾಗೂ ಚಂಕಿಯರ್ ಲುಕಿಂಗ್ ಟೈಲ್ ವಿಭಾಗವನ್ನು ಹೊಂದಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಮತ್ತೊಂದೆಡೆ ಹೊಸ 250 ಟ್ವಿನ್ ಬೈಕುಗಳು ಹೆಚ್ಚು ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದ್ದು, ತೀಕ್ಷ್ಣವಾದ ರೇಖೆಗಳು ಹಾಗೂ ಹೆಚ್ಚು ಸಾಂಪ್ರದಾಯಿಕವಾಗಿ ಕಾಣುವ ನಿಲುವುಗಳನ್ನು ಹೊಂದಿವೆ. ಆದರೂ ಸೆಮಿ ಫೇರಿಂಗ್‌ನೊಂದಿಗೆ ಹೊಸ ಬಜಾಜ್ F 250 ಬೈಕ್ ನೇಕೆಡ್ ಕೌಂಟರ್‌ಪಾರ್ಟ್‌ ಬಜಾಜ್ N250 ಬೈಕಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಟೂರರ್ ಫ್ರೆಂಡ್ಲಿಯಾಗಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

2. ಫೀಚರ್'ಗಳು

ಈ ಎರಡೂ ಬೈಕುಗಳು ಯುವ ಜನರನ್ನು ಆಕರ್ಷಿಸುವ ಗುರಿ ಹೊಂದಿರುವುದರಿಂದ ಅವುಗಳು ಹಲವಾರು ಫೀಚರ್ ಗಳನ್ನು ಹೊಂದಿವೆ. ಆದರೆ ಈ ಎರಡೂ ಬೈಕ್‌ಗಳು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿಲ್ಲ. ಹೊಸ ಬಜಾಜ್ ಪಲ್ಸರ್ 250 ಟ್ವಿನ್‌ ಬೈಕುಗಳು ಬೈ ಫಂಕ್ಷನಲ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಗಳನ್ನು ಹೊಂದಿದ್ದರೆ, ಬಜಾಜ್ ಡೊಮಿನಾರ್ 250 ಬೈಕ್ ಮಲ್ಟಿಪಲ್ ಲೈಟಿಂಗ್ ಅಂಶಗಳೊಂದಿಗೆ ಪೂರ್ಣ ಪ್ರಮಾಣದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಹೊಸ ಬಜಾಜ್ ಪಲ್ಸರ್ 250 ಟ್ವಿನ್‌ ಬೈಕುಗಳಲ್ಲಿ, ಬಜಾಜ್ ಟ್ಯಾಕೋಮೀಟರ್, ಸ್ಪೀಡೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಎಫಿಶಿಯನ್ಸಿ ಇಂಡಿಕೇಟರ್, ಸರ್ವೀಸ್ ರಿಮ್ಯಾಂಡರ್, ಗೇರ್ ಪೊಸಿಷನ್ ಇಂಡಿಕೇಟರ್, ಡಿಸ್ಟೆನ್ಸ್ ಟು ಎಂಟಿ ಫ್ಯೂಯಲ್ ಗೇಜ್, ಕ್ಲಾಕ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಬಜಾಜ್ ಪಲ್ಸರ್ 250 ಟ್ವಿನ್ ಬೈಕುಗಳು ಅನಲಾಗ್ ಟ್ಯಾಕೋಮೀಟರ್‌ ಹೊಂದಿವೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಬಜಾಜ್ ಡೊಮಿನಾರ್ 250 ಆಲ್ ಡಿಜಿಟಲ್ ಯುನಿಟ್ ಹೊಂದಿದೆ. ಇವುಗಳಲ್ಲಿ ಹೊಸ ಬಜಾಜ್ ಪಲ್ಸರ್ 250 ಟ್ವಿನ್ ಬೈಕುಗಳಲ್ಲಿರುವ ಪಾರ್ಟ್ ಅನಾಲಾಗ್ ಹಾಗೂ ಪಾರ್ಟ್ ಡಿಜಿಟಲ್ ವಿನ್ಯಾಸಗಳು ಆಕರ್ಷಕವಾಗಿವೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

3. ಎಂಜಿನ್

ಬಜಾಜ್ ಡೊಮಿನಾರ್ 250 ಬೈಕಿನಲ್ಲಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ 250 ಸಿಸಿ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 26.6 ಬಿ‌ಹೆಚ್‌ಪಿ ಪವರ್ ಹಾಗೂ 23.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಹೊಸ ಬಜಾಜ್ ಪಲ್ಸರ್ 250 ಟ್ವಿನ್‌ ಬೈಕುಗಳಲ್ಲಿರುವ ಆಯಿಲ್ ಕೂಲ್ಡ್, ಸಿಂಗಲ್ 250 ಸಿಸಿ ಎಂಜಿನ್ ಗಿಂತ 2.6 ಹೆಚ್ಚು ಬಿ‌ಹೆಚ್‌ಪಿ ಪವರ್ ಹಾಗೂ 2 ಎನ್ಎಂ ಹೆಚ್ಚು ಟಾರ್ಕ್ ಉತ್ಪಾದಿಸುತ್ತದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಇದರಿಂದ ಬಜಾಜ್ ಡೊಮಿನಾರ್ ಬೈಕ್ ಬಜಾಜ್ ಪಲ್ಸರ್ 250 ಬೈಕುಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ ಎಂದು ತೋರುತ್ತದೆ. 180 ಕೆ.ಜಿ ತೂಕ ಹೊಂದಿರುವ ಬಜಾಜ್ ಡೊಮಿನಾರ್ 250 ಬೈಕ್ ಬಜಾಜ್ ಪಲ್ಸರ್ ಎನ್ 250 ಬೈಕಿಗಿಂತ ಸುಮಾರು 18 ಕೆ.ಜಿ ಹೆಚ್ಚು ಹಾಗೂ ಬಜಾಜ್ ಪಲ್ಸರ್ ಎಫ್ 250 ಬೈಕಿಗಿಂತ 16 ಕೆ.ಜಿ ಹೆಚ್ಚು ತೂಕವನ್ನು ಹೊಂದಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಬಜಾಜ್ ಡೊಮಿನಾರ್ 250 ಬೈಕ್ ಟೂರಿಂಗ್ ಫ್ರೆಂಡ್ಲಿಯಾದ ಸ್ಲಿಪ್ಪರ್ ಕ್ಲಚ್‌ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಮತ್ತೊಂದೆಡೆ ಬಜಾಜ್ ಪಲ್ಸರ್ 250 ಟ್ವಿನ್ ಬೈಕುಗಳು 5 ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸ್ಲಿಪ್ಪರ್ ಕ್ಲಚ್‌ಗಳನ್ನು ಹೊಂದಿವೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಈ ವಿಶೇಷತೆಗಳ ಪ್ರಕಾರ ಬೈಕ್ ಅನ್ನು ಹೆಚ್ಚು ಸಿಟಿ ಫ್ರೆಂಡ್ಲಿಯಾಗಿ ಮಾಡಲು ಬಜಾಜ್ ಕಂಪನಿಯು ಉದ್ದೇಶಪೂರ್ವಕವಾಗಿ 5 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಈ ಬೈಕಿನಲ್ಲಿ ಬಳಸಿದಂತೆ ತೋರುತ್ತದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

4. ಸಸ್ಪೆಂಷನ್ ಹಾಗೂ ಬ್ರೇಕಿಂಗ್

ಬಜಾಜ್ ಡೊಮಿನಾರ್ 250 ಬೈಕ್ 37 ಎಂಎಂ ಯುಎಸ್‌ಡಿ ಫೋರ್ಕ್‌, 300 ಎಂಎಂ ಫ್ರಂಟ್ ಹಾಗೂ 230 ಎಂಎಂ ರೇರ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್‌ ಹೊಂದಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಪಲ್ಸರ್ 250 ಟ್ವಿನ್ ಬೈಕುಗಳು ಹೆಚ್ಚು ಸಾಂಪ್ರದಾಯಿಕವಾದ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಇದೇ ರೀತಿಯ ಡಿಸ್ಕ್ ಬ್ರೇಕ್ ಸೆಟಪ್‌ ಹೊಂದಿವೆ. ಆದರೆ ಡೊಮಿನಾರ್ 250 ಬೈಕಿನಲ್ಲಿರುವ ಹೆಚ್ಚು ಅತ್ಯಾಧುನಿಕ ಡ್ಯುಯಲ್ ಚಾನೆಲ್ ಎಬಿಎಸ್‌ ಗಿಂತ ಭಿನ್ನವಾಗಿ, ಬಜಾಜ್ ಪಲ್ಸರ್ 250 ಟ್ವಿನ್ ಬೈಕುಗಳಲ್ಲಿರುವ ಎಬಿಎಸ್‌ ಘಟಕವು ಸಿಂಗಲ್ ಚಾನೆಲ್ ಆಗಿದೆ.

Pulsar 250 ಹಾಗೂ Dominor 250 ಬೈಕುಗಳ ನಡುವಿನ ವ್ಯತ್ಯಾಸಗಳಿವು

5. ಬೆಲೆ

ಬಜಾಜ್ ಡೊಮಿನಾರ್ 250 ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 1.59 ಲಕ್ಷಗಳಾಗಿದೆ. ಬಜಾಜ್ ಪಲ್ಸರ್ ಎನ್ 250 ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 1.38 ಲಕ್ಷಗಳಾದರೆ ಬಜಾಜ್ ಪಲ್ಸರ್ ಎಫ್ 250 ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 1.40 ಲಕ್ಷಗಳಾಗಿದೆ.

Most Read Articles

Kannada
English summary
Comparison between bajaj dominar 250 and bajaj pulsar 250 bikes details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X