ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ದಕ್ಷಿಣ ಧ್ರುವದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಎಂಬ ಸಂಗತಿ ಕೆಲವು ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ರಾಯಲ್ ಎನ್‌ಫೀಲ್ಡ್ ಕಂಪನಿಯು ಜಗತ್ತಿನ ಕ್ಲಿಷ್ಟಕರ ವಾತಾವರಣದಲ್ಲಿ ಸವಾರಿ ಮಾಡುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಮುಂದಾಗಿದೆ. ಅಂದ ಹಾಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಅಂಟಾರ್ಟಿಕಾದಲ್ಲಿ ಸವಾರಿ ಕೈಗೊಳ್ಳುತ್ತಿದೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಅನೇಕ ಜನರಿಗೆ ಅಂಟಾರ್ಟಿಕಾ ಜಗತ್ತಿನ ಇತರ ಖಂಡಗಳಲ್ಲಿ ಒಂದಾಗಿದೆ. ಅವರಿಗೆ ಅದರ ಬಗ್ಗೆ ಹೆಚ್ಚು ತಿಳಿದಿಲ್ಲ. ಅದರ ಬಗ್ಗೆ ತಿಳಿದಿರುವವರಿಗೆ, ಅಂಟಾರ್ಕ್ಟಿಕಾವು ಬಹುತೇಕ ಬಂಜರು ಖಂಡಕ್ಕಿಂತ ಹೆಚ್ಚು. ಅಂಟಾರ್ಟಿಕಾ ಅಸಂಖ್ಯಾತ ವೈಜ್ಞಾನಿಕ ಪ್ರಯೋಗಗಳ ಹಾಗೂ ಸಂಶೋಧನಾ ಯೋಜನೆಗಳ ತಾಣವಾಗಿದೆ. ಜೊತೆಗೆ ಬಾಹ್ಯಾಕಾಶ ಓಟದ ಪ್ರಮುಖ ಸ್ಥಳವಾಗಿದೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಸಾಹಸ ಪ್ರಿಯರಿಗೆ ಹಾಗೂ ಅನ್ವೇಷಕರಿಗೆ ಅಂಟಾರ್ಟಿಕಾವು ಭೂಮಿಯ ಮೇಲಿನ ಸ್ವರ್ಗದಂತಿದೆ. ಅಂಟಾರ್ಟಿಕಾ ಅತ್ಯಂತ ಶೀತ, ಶುಷ್ಕ ಹಾಗೂ ಗಾಳಿ ಬೀಸುವ ಖಂಡವಾಗಿದೆ. ಈ ಖಂಡವು ಸದಾ ಆಶ್ಚರ್ಯಕರ ಅಂಶವನ್ನು ಹೊಂದಿರುತ್ತದೆ. ಯಾವುದೇ ರಸ್ತೆಗಳಿಲ್ಲದ ಅಂಟಾರ್ಟಿಕಾದಲ್ಲಿ ಚಲಿಸುವುದು ನಿಜಕ್ಕೂ ಸಾಹಸವಾಗಿದೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಅಂಟಾರ್ಟಿಕಾ ಖಂಡದಲ್ಲಿನ ಕಠಿಣ ಪರಿಸರವನ್ನು ಗಮನಿಸಿದರೆ, ಇದು ಯಾವುದೇ ವಾಹನಕ್ಕೆ ಆದರೂ ಅತ್ಯುತ್ತಮವಾದ ಮೈದಾನವಾಗಿದೆ. ದಕ್ಷಿಣ ಧ್ರುವಕ್ಕೆ ಹೋಗುವುದು ಒಂದು ದೊಡ್ಡ ಸಾಧನೆಯಾಗಿದೆ. ಇತ್ತೀಚಿಗೆ ಎರಡು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕುಗಳು ದಕ್ಷಿಣ ಧ್ರುವದತ್ತ ಸಾಗುತ್ತಿವೆ. ಇಂಗ್ಲೆಂಡಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಉತ್ಪನ್ನ ಅಭಿವೃದ್ಧಿಯ ಹಿರಿಯ ಇಂಜಿನಿಯರ್ ಆಗಿರುವ ಡೀನ್ ಕಾಕ್ಸನ್ ಹಾಗೂ ರೈಡ್ಸ್ ಅಂಡ್ ಕಮ್ಯೂನಿಟಿ ಮುಖ್ಯಸ್ಥರಾದ ಸಂತೋಷ್ ವಿಜಯ್ ಕುಮಾರ್ ಈ ಬೈಕುಗಳಲ್ಲಿ ಅಂಟಾರ್ಟಿಕಾದತ್ತ ಸಾಗುತ್ತಿದ್ದಾರೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಈ ದಂಡಯಾತ್ರೆಯ ತಂಡವು ಅಂಟಾರ್ಟಿಕಾಕ್ಕೆ ಬಂದಿಳಿಯುವ ಕೆಲವೇ ದಿನಗಳ ಮೊದಲು ನಾವು ಸಂತೋಷ್ ವಿಜಯ್ ಕುಮಾರ್ ಅವರೊಂದಿಗೆ ವಿವರವಾದ ಸಂಭಾಷಣೆ ನಡೆಸಿದೆವು. ಈ ಮಾತುಕತೆಯ ಆಯ್ದ ಭಾಗಗಳು ಇಲ್ಲಿವೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಪ್ರಶ್ನೆ: ನಿಮ್ಮ ಬಗ್ಗೆ ಸ್ವಲ್ಪ ತಿಳಿಸಿ?

ಉತ್ತರ: ನಾನು ಬೆಂಗಳೂರಿನವನು, ನಾನು ಬಹಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದೆ. ನಂತರ 2009 ರಲ್ಲಿ ರಾಯಲ್ ಎನ್‌ಫೀಲ್ಡ್‌ ಕಂಪನಿಗೆ ಸೇರಿಕೊಂಡೆ. ನಾನು ರಾಯಲ್ ಎನ್‌ಫೀಲ್ಡ್‌ಗಾಗಿ ರೈಡ್‌ ಹಾಗೂ ಈವೆಂಟ್‌ಗಳನ್ನು ನಿರ್ವಹಿಸುತ್ತಿದ್ದೇನೆ. ನಾವು 2009 ರಿಂದ ಸ್ಥಳಗಳನ್ನು ಅನ್ವೇಷಿಸುತ್ತಿದ್ದೇವೆ. ನಾವು ಹಿಮಾಲಯದಿಂದ ಭೂತಾನ್, ಟಿಬೆಟ್, ಮುಸ್ತಾಂಗ್, ಮುಂತಾದ ಸ್ಥಳಗಳಿಗೆ ಸವಾರಿ ಮಾಡಿದ್ದೇವೆ. ನಾವು ಇದೆಲ್ಲವನ್ನೂ ಮಾಡುತ್ತಿರುವಾಗ ದೊಡ್ಡದನ್ನು ಮಾಡಲು ಬಯಸುತ್ತಿದ್ದೆವು. ಈ ಕಾರಣಕ್ಕೆ ನಾವು ಇಲ್ಲಿದ್ದೇವೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಪ್ರಶ್ನೆ: ಈ ಸಂಪೂರ್ಣ ದಕ್ಷಿಣ ಧ್ರುವ ದಂಡಯಾತ್ರೆಯ ಯೋಜನೆ ಹೇಗೆ ಹುಟ್ಟಿಕೊಂಡಿತು?

ಉತ್ತರ: ಸುಮಾರು 2014ರ ಚಳಿಗಾಲದಲ್ಲಿ ನಾವು ಹಿಮಾಲಯದಲ್ಲಿ ಬೈಕ್ ಸವಾರಿ ಮಾಡುತ್ತಿದ್ದೆವು. ಆಗ ಅಲ್ಲಿ ಹಿಮಪಾತವಾಗುತ್ತಿತ್ತು. ಆ ಸಮಯದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿ ಹೊಂದಿದ್ದ ಬೈಕುಗಳಲ್ಲಿಯೇ ಹಿಮದಲ್ಲಿ ಸವಾರಿ ಮಾಡಿದೆವು. ಬೇರೆ ಮಾರ್ಗದಲ್ಲಿ ದಕ್ಷಿಣ ಧ್ರುವವನ್ನು ತಲುಪಿದ ಜಪಾನಿನ ವ್ಯಕ್ತಿಯೊಬ್ಬರ ಬಗ್ಗೆ ಸವಾರರೊಬ್ಬರು ನನಗೆ ಹೇಳಿದರು.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ನಂತರ ನಾನು ಆ ಬಗ್ಗೆ ಶೋಧನೆ ನಡೆಸಲು ಆರಂಭಿಸಿದೆ. ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನಾನು ಅದರ ಬಗ್ಗೆ ಸ್ವಲ್ಪ ಹೆಚ್ಚು ಸಂಶೋಧನೆ ಮಾಡಿದ ನಂತರ ಅಲ್ಲಿ ಅಮೆರಿಕಾದ ಸೌತ್ ಪೋಲ್ ಸ್ಟೇಷನ್ ಇರುವುದನ್ನು ಕಂಡುಕೊಂಡೆ. ಇದು ಮೂಲತಃ ಕಾಂಪ್ಯಾಕ್ಟ್ ಐಸ್ ಟ್ರ್ಯಾಕ್ ಆಗಿದೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ನಂತರ ನಾನು ಈ ಖಂಡದ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ವಿಶ್ವದ ಏಕೈಕ ಸಂಸ್ಥೆಯಾದ ಆರ್ಕ್ಟಿಕ್ ಟ್ರಕ್ಸ್ ಬಗ್ಗೆ ತಿಳಿದೆ. ಆರ್ಕ್ಟಿಕ್ ಟ್ರಕ್ಸ್ ಈ ಖಂಡವನ್ನು 140 ಬಾರಿ ದಾಟಿದ್ದು, ಈ ಭೂಪ್ರದೇಶದ ಬಗ್ಗೆ ಚೆನ್ನಾಗಿ ಅರಿತಿದೆ. ನಾವು ಅವರೊಂದಿಗೆ ಮಾತನಾಡಿದ ನಂತರ ಅಲ್ಲಿ ಬೈಕ್ ಸವಾರಿ ಮಾಡುವುದು ಹೇಗೆ ಎಂಬ ಲೆಕ್ಕಾಚಾರವನ್ನು ಆರಂಭಿಸಿದೆವು. ಕಳೆದ ಒಂದೂವರೆ ವರ್ಷದಿಂದ ನಾವು ಬೈಕುಗಳನ್ನು ಪರೀಕ್ಷಿಸಿದೆವು. ಈಗ ದಕ್ಷಿಣ ಧ್ರುವಕ್ಕೆ ಹೋಗಲು ಮುಂದಾಗಿದ್ದೇವೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಪ್ರಶ್ನೆ: ಈ ಯೋಜನೆಗೆ ಎಷ್ಟು ತಿಂಗಳುಗಳಾಗಿವೆ?

ಉತ್ತರ: ನಾವು ಈ ಯೋಜನೆಯನ್ನು 2020ರ ಏಪ್ರಿಲ್ ನಲ್ಲಿ ಆರಂಭಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರಪಂಚದಾದ್ಯಂತದ ಸಂಚಾರದ ಮೇಲೆ ನಿರ್ಬಂಧ ವಿಧಿಸಿದ ಕಾರಣಕ್ಕೆ ನಮಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಈಗ ಪ್ರಯಾಣದ ನಿರ್ಬಂಧಗಳನ್ನು ತೆಗೆದು ಹಾಕಿರುವುದರಿಂದ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಪ್ರಶ್ನೆ: ಮೋಟಾರ್‌ಸೈಕಲ್‌ಗಳ ಬಗ್ಗೆ ಮಾಹಿತಿ ನೀಡಿ?

ಉತ್ತರ: ನಾವು ರಾಯಲ್ ಹಿಮಾಲಯನ್ ಬೈಕ್ ಸವಾರಿ ಮಾಡುತ್ತಿದ್ದೇವೆ. ಈ ಬೈಕಿನಲ್ಲಿ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಿದ್ದೇವೆ. ಹೆಚ್ಚು ಟಾರ್ಕ್ ಬೇಕಾಗಿರುವುದರಿಂದ ನಾವು ಮುಂಭಾಗದ ಸ್ಪ್ರಾಕೆಟ್‌ನಲ್ಲಿ ಕೆಲವು ಮಾರ್ಪಾಡು ಮಾಡಿದ್ದೇವೆ. ಸರಿಯಾದ ಸೆಟಪ್ ಅನ್ನು ಕಂಡುಹಿಡಿಯಲು ನಾವು ಸುಮಾರು ಎಂಟು ವಿಭಿನ್ನ ಟಯರ್‌ ಹಾಗೂ ಸ್ಟಡ್‌ಗಳ ಸಂಯೋಜನೆಯನ್ನು ಪರೀಕ್ಷಿಸಬೇಕಾಗಿತ್ತು. ಸರಿಯಾದ ಸೆಟಪ್ ಮೂರು ವಿಭಿನ್ನ ರೀತಿಯ ಟಯರ್‌ ಹಾಗೂ ಸ್ಟಡ್‌ಗಳನ್ನು ಹೊಂದಿದೆ. ಇಡೀ ಖಂಡವು ಬಿಳಿಯಾಗಿ ಕಾಣುವುದರಿಂದ ಅದರ ವಿನ್ಯಾಸವು ಬದಲಾಗಬಹುದು, ಗಡಸುತನವು ಬದಲಾಗಬಹುದು. ಇದರಿಂದ ನಮಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಪ್ರಶ್ನೆ: ಸವಾರಿಯ ಉದ್ದಕ್ಕೂ ಎಷ್ಟು ದೂರ ಚಲಿಸುತ್ತಿರಿ?

ಪ್ರಶ್ನೆ: ನೀವು ಯಾವ ರೀತಿಯ ಬ್ಯಾಕಪ್ ತಂಡವನ್ನು ಹೊಂದಿದ್ದೀರಿ?

ಪ್ರಶ್ನೆ: ರೈಡ್ ಯಾವಾಗ ಪ್ರಾರಂಭವಾಗುತ್ತದೆ ಹಾಗೂ ಯಾವಾಗ ಪೂರ್ಣಗೊಳ್ಳುತ್ತದೆ?

ಪ್ರಶ್ನೆ: ಈ ಸವಾರಿಯ ಯಾವ ಭಾಗವು ನಿಮ್ಮನ್ನು ಹೆಚ್ಚು ಪ್ರಚೋದಿಸುತ್ತದೆ?

ಈ ಪ್ರಶ್ನೆಗಳಿಗೆ ಸಂತೋಷ್ ವಿಜಯ್ ಕುಮಾರ್ ರವರು ನೀಡಿರುವ ಉತ್ತರಗಳನ್ನು ತಿಳಿಯಲು ಹಾಗೂ ಅವರೊಂದಿಗಿನ ಪೂರ್ಣ ಸಂದರ್ಶನವನ್ನು ಈ ವೀಡಿಯೊದಲ್ಲಿ ನೋಡಬಹುದು.

ಅಂಟಾರ್ಟಿಕಾ ಖಂಡದಲ್ಲಿ ಸಾಹಸ ಯಾತ್ರೆ ಕೈಗೊಂಡ Royal Enfield ಸವಾರರೊಂದಿಗೆ ಸಂದರ್ಶನ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ರೀತಿಯ ದಂಡಯಾತ್ರೆಯನ್ನು ಆರಂಭಿಸಲು ಸಾಕಷ್ಟು ಸಮಯ, ಶ್ರಮ ಹಾಗೂ ಹೆಚ್ಚಿನ ಸಂಶೋಧನೆ ಬೇಕಾಗುತ್ತದೆ. ಎರಡು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕುಗಳು ಈಗಾಗಲೇ ಅಂಟಾರ್ಟಿಕಾದಲ್ಲಿದ್ದು, ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತದಲ್ಲಿವೆ. ಈ ಸಾಹಸ ಯಾತ್ರೆಯನ್ನು ಕೈಗೊಂಡಿರುವ ರಾಯಲ್ ಎನ್‌ಫೀಲ್ಡ್‌ಗೆ ಶುಭ ಹಾರೈಸೋಣ.

Most Read Articles

Kannada
English summary
Conversation with royal enfield rider who is going for south pole expedition details
Story first published: Saturday, December 4, 2021, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X