ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿದ್ದ 43ನೇ ಡಕಾರ್ ರ್‍ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹೀರೋ ಮೋಟೊಸ್ಪೋರ್ಟ್ ತಂಡದ ಪ್ರತಿನಿಧಿ ಸಿಎಸ್ ಸಂತೋಷ್ ಅವರನ್ನು ರಿಯಾದ್‌ನಿಂದ ಬೆಂಗಳೂರಿಗೆ ಏರ್ ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿದೆ.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

12 ಹಂತಗಳನ್ನು ಒಳಗೊಂಡಿದ್ದ ಡಕಾರ್ ರ‍್ಯಾಲಿಯ 4ನೇ ಸುತ್ತಿನಲ್ಲಿ ಮುನ್ನಡೆಯಲ್ಲಿದ್ದ ಸಿಎಸ್ ಸಂತೋಷ್ ಪ್ರತಿಕೂಲಕರ ಪರಿಸ್ಥಿತಿಯಿಂದಾಗಿ ಅಪಘಾತಕ್ಕೀಡಾಗಿದ್ದರು. ಅಪಘಾತದಲ್ಲಿ ಬಲಭುಜ ಮತ್ತು ತಲೆಗೆ ಬಲವಾದ ಹೊಡೆತ ಬಿದ್ದಿದ್ದ ಪರಿಣಾಮ ಸಿಎಸ್ ಸಂತೋಷ್ ಕೋಮಾ ಸ್ಥಿತಿಗೆ ಜಾರಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಆಯೋಜಕರು ಹೆಚ್ಚಿನ ಚಿಕಿತ್ಸೆಗಾಗಿ ರಿಯಾದ್‌ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ನೆರವಾಗಿದ್ದರು.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ತಲೆಗೆ ಮತ್ತು ಬಲಭುಜಕ್ಕೆ ತೀವ್ರ ಪೆಟ್ಟುಬಿದ್ದಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಿಎಸ್ ಸಂತೋಷ್ ಅವರಿಗೆ ಸಿಸಿಯು(ಕ್ರಿಟಿಕಲ್ ಕೇರ್ ಯುನಿಟ್)ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಆರೋಗ್ಯದಲ್ಲಿ ತುಸು ಸುಧಾರಣೆಗೊಂಡಿರುವ ಹಿನ್ನಲೆಯಲ್ಲಿ ರಿಯಾದ್‌ನಿಂದ ಬೆಂಗಳೂರಿಗೆ ಕರೆತರಲಾಗಿದೆ.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಸಿಎಸ್ ಸಂತೋಷ್ ಆರೋಗ್ಯ ಕುರಿತು ಮಾಹಿತಿ ಹಂಚಿಕೊಂಡಿರುವ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಇಂಡಿಯಾ ಸಂಸ್ಥೆಯು ಬೆಂಗಳೂರಿನಲ್ಲಿಯೇ ಸಿಎಸ್ ಸಂತೋಷ್ ಅವರಿಗೆ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದಿದೆ.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಆದರೆ ಬೆಂಗಳೂರಿನ ಯಾವ ಆಸ್ಪತ್ರೆಗೆ ಸಿಎಸ್ ಸಂತೋಷ್ ಅವರನ್ನು ದಾಖಲಾಗಿದೆ ಎನ್ನುವ ಮಾಹಿತಿ ಹಂಚಿಕೊಂಡಿಲ್ಲವಾದರೂ ಇನ್ನು ಕೆಲ ದಿನಗಳ ಕಾಲ ಸಿಸಿಯು(ಕ್ರಿಟಿಕಲ್ ಕೇರ್ ಯುನಿಟ್)ನಲ್ಲಿಯೇ ಚಿಕಿತ್ಸೆ ಮುಂದುವರಿದೆ ಎನ್ನಲಾಗಿದ್ದು, ಅಪಾಯಕಾರಿ ಮೋಟಾರ್‌ಸ್ಪೋಟ್ಸ್‌ನಲ್ಲಿ ಸಿಎಸ್ ಸಂತೋಷ್ ಅವರು ಪ್ರಾಣಾಪಾಯದಿಂದ ಪಾರಾಗಿ ಬಂದಿರುವುದು ಒಂದು ಪವಾಡ ಎನ್ನಬಹುದು.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಆದರೂ ಈ ಬಾರಿಯ ಡಕಾರ್ ರ‍್ಯಾಲಿಯಲ್ಲಿ ಸಿಎಸ್ ಸಂತೋಷ್ ಅವರು ಉತ್ತಮ ಪ್ರದರ್ಶನ ನೀಡಬಹುದೆಂಬ ನೀರಿಕ್ಷೆಯಲ್ಲಿದ್ದ ಅಭಿಮಾನಿಗಳಲ್ಲಿ ಅನಿರೀಕ್ಷಿತ ಘಟನೆಯು ಅಸಮಾಧಾನ ಉಂಟು ಮಾಡಿದ್ದು, ನೆಚ್ಚಿನ ರೈಡರ್ ಕೌಶಲ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಆರೋಗ್ಯ ಚೇತರಿಕೆಗೆ ಶುಭ ಹಾರೈಸುತ್ತಿದ್ದಾರೆ.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

2021ರ ಡಕಾರ್ ರ‍್ಯಾಲಿಯ 43ನೇ ಆವೃತ್ತಿಯು 12ನೇ ಹಂತದ ರ‍್ಯಾಲಿಯೊಂದಿಗೆ ನಿನ್ನೆಗೆ ಪೂರ್ಣಗೊಂಡಿದ್ದು, ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್‌ ಕೆವಿನ್ ಬೆನೆವಿಡೆಸ್ ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

12 ಹಂತಗಳನ್ನು ಒಳಗೊಂಡಿದ್ದ 2021ರ ಡಕಾರ್ ರ‍್ಯಾಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್‌ಗಳು ಈ ಬಾರಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ತಮ್ಮದಾಸಿಕೊಂಡಿದ್ದು, ಮೊದಲ ಸ್ಥಾನದಲ್ಲಿ ಕೆವಿನ್ ಬೆನೆವಿಡೆಸ್ ಮತ್ತು ಎರಡನೇ ಸ್ಥಾನವನ್ನು 2020ರ ಚಾಂಪಿಯನ್ ರಿಕಿ ಬ್ರಾಬೆಕ್ ಪ್ರಶಸ್ತಿ ಪಡೆದುಕೊಂಡರು. ಎರಡನೇ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಿದ್ದ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಸ್ಯಾಮ್ ಸುಂದರ್‌ಲ್ಯಾಂಡ್ ಮೂರನೇ ಸ್ಥಾನ ಪಡೆದುಕೊಂಡರು.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭಗೊಂಡಿದ್ದ 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿತ್ತು. ಜನವರಿ 3ರಂದು ಜಿದ್ದಾದಿಂದ ಆರಂಭವಾಗಿದ್ದ ಮೊದಲ ಹಂತವು ಕೊನೆಗೆ ಜಿದ್ದಾದದಲ್ಲಿ 12ನೇ ಹಂತದೊಂದಿಗೆ ಕೊನೆಗೊಂಡಿದೆ.

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಕರೋನಾ ವೈರಸ್ ಹಿನ್ನಲೆಯಲ್ಲಿ ಕೆಲವು ಮಾರ್ಗಗಳನ್ನು ತಪ್ಪಿಸುವ ಉದ್ದೇಶದಿಂದ 2020ರ ಡಕಾರ್ ರ‍್ಯಾಲಿ ಆವೃತ್ತಿಗಿಂತಲೂ 2021ರ ಡಕಾರ್ ರ‍್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300ಕಿ.ಮೀ ಕಡಿತ ಮಾಡಿದ್ದ ಆಯೋಜಕರು ಈ ಬಾರಿ ಹೊಸದಾಗಿ ಡಕಾರ್ ಕ್ಲಾಸಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸಿದ್ದರು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಎಸ್ ಸಂತೋಷ್ ಬೆಂಗಳೂರಿಗೆ ಶಿಫ್ಟ್

ಒಟ್ಟಾರೆ 2021ರ ಡಕಾರ್ ರ‍್ಯಾಲಿಯು ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ವಿಶ್ವದ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ಎಂದೇ ಖ್ಯಾತಿಯಾಗಿರುವ ಡಕಾರ್ ರ‍್ಯಾಲಿಯಲ್ಲಿ ಈ ಬಾರಿ ಖಾಸಗಿ ತಂಡದ ರೈಡರ್ ಪಿಯರೆ ಚೆರ್ಪಿನ್ ಸಾವಪ್ಪಿದರೆ ಭಾರತೀಯ ಮೋಟಾರ್‌ಸ್ಪೋರ್ಟ್ ರೂವಾರಿ ಸಿಎಸ್ ಸಂತೋಷ್ ಅಪಘಾತದಲ್ಲಿ ಗಾಯಗೊಂಡ ಘಟನೆ ನಡೆಯಿತು. ಇದರ ನಡುವೆ ಭಾರತದ ಮತ್ತೊಬ್ಬ ರೈಡರ್ ಹರಿತ್ ನೋವಾ ಮೊದಲ ಬಾರಿಗೆ ಡಕಾರ್ ರ‍್ಯಾಲಿಯ ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವ ಮೂಲಕ ಭರವಸೆಯ ರೈಡರ್ ಆಗಿ ಹೊರಹೊಮ್ಮಿದರು.

Most Read Articles

Kannada
English summary
CS Santosh Back In India & Out Of Induced Coma. Read in Kannada.
Story first published: Saturday, January 16, 2021, 20:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X