ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್ಟ್-ಇ ಎಲೆಕ್ಟ್ರಿಕ್ ಬೈಕ್

ಫ್ರೆಂಚ್ ಬೈಕ್ ತಯಾರಕ ಕಂಪನಿಯಾದ ಡಬ್ ಮೋಟಾರ್ಸ್ ತನ್ನ ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಡಬ್ ಕಾನ್ಸೆಪ್ಟ್-ಇ ಎಲೆಕ್ಟ್ರಿಕ್ ಬೈಕ್ ಆಕರ್ಷಕ ಮತ್ತು ಸರಳವಾದ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್ ಮೂಲಮಾದರಿಯನ್ನು ಡಿಸೈನ್ ಔಟ್‌ಕ್ರಾಫ್ಟ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಡಬ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕಿನಲ್ಲಿ 10 ಕಿ.ವ್ಯಾಟ್ ಮೋಟಾರ್ ಮತ್ತು 51.8ವಿ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್ 105 ರೇಂಜ್ ಅನ್ನು ಹೊಂದಿರಲಿದೆ. ಇದು ಸರಿಸುಮಾರು 125 ಸಿಸಿ ಪೆಟ್ರೋಲ್-ಚಾಲಿತ ಬೈಕಿಗೆ ಸಮನಾಗಿರುತ್ತದೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಹೊಸ ಡಬ್ ಕಾನ್ಸೆಪ್ಟ್-ಇ ಎಲೆಕ್ಟ್ರಿಕ್ ಬೈಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫ್ಲಾಟ್ ಸೀಟ್, ಮತ್ತು ಪನಿ ಟೈಲ್ ಲೈಟ್ ಜೊತೆಗೆ ನಯವಾದ ಎಲ್‌ಇಡಿ ಡಿಆರ್‌ಎಲ್‌ನಂತಹ ಅಂಶಗಳು ಇದಕ್ಕೆ ಒಂದು ವಿಶಿಷ್ಟ ಮೋಡಿಯನ್ನು ನೀಡುತ್ತವೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಡಬ್ ಕಾನ್ಸೆಪ್ಟ್-ಇ ಎಲೆಕ್ಟ್ರಿಕ್ ಬೈಕ್ ಮುಂಭಾಗ ಮತ್ತು ಹಿಂಭಾಗದ ವ್ಹೀಲ್ ಗಳಲ್ಲಿ ಸಿಎನ್‌ಸಿ ಯಂತ್ರದ ಬೆರಿಂಜರ್ ಕ್ಯಾಲಿಪರ್‌ಗಳು ಒದಗಿಸುವ ಬೈಕ್‌ಗೆ ಓಹ್ಲಿನ್ಸ್‌ನಿಂದ ಬೆಸ್‌ಪೋಕ್ ಸಿಗುತ್ತದೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ನ್ಸೆಪ್-ಇ ಎಲೆಕ್ಟ್ರಿಕ್ ಬೈಕಿನಲ್ಲಿ ಎಲ್ಇಡಿ ಸ್ಪೀಡೋಮೀಟರ್ ಕನ್ಸೋಲ್ ಅನ್ನು ಮುಂಭಾಗದಲ್ಲಿ ಜೋಡಿಸಲಾಗಿದೆ, ಹೆಡ್ ಲೈಟ್ ಫ್ಲಾಟ್-ಟ್ರ್ಯಾಕ್ ಪ್ರೇರಿತ ಬೋರ್ಡ್ನ ಕೆಳಗೆ ಇರಿಸಲಾಗಿದೆ. ಅಲ್ಲಿ ಹೆಡ್ ಲೈಟ್ ಅನ್ನು ಸಾಂಪ್ರದಾಯಿಕ ವಿನ್ಯಾಸಗಳಲ್ಲಿ ಇರಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಕರ್ಬನ್ ಫೈಬರ್ ಚಾಸಿಸ್ ಯುನಿಟ್ ಗಳನ್ನು ಹೊಂದಿದೆ ಮತ್ತು ಇದು ಆಧುನಿಕ ರೋಡ್ಸ್ಟರ್ ಮತ್ತು ಸೂಪರ್ ಮೊಟೊ ನಡುವಿನ ಸಮ್ಮಿಳನವಾಗಿದೆ. ಇದರಿಂದ ಈ ಎಲೆಕ್ಟ್ರಿಕ್ ಬೈಕ್ ವಿಭಿನ್ನ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಗೇಟ್ಸ್ ಬೆಲ್ಟ್ ಡ್ರೈವ್ ಅನ್ನು ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಬಳಸಲಾಗಿದ್ದು, ಅಲ್ಯೂಮಿನಿಯಂ ಯಂತ್ರದಿಂದ ಥ್ರೊಟಲ್ ರೆಸ್ಪಾನ್ಸ್ ಹೆಚ್ಚಿಸಲು ಮತ್ತು ಶಬ್ದವನ್ನು ಕಡಿಮೆ ಮಾಡುತ್ತದೆ. ಇಲ್ಲಿಯವರೆಗೆ ಇದು ಇನ್ನೂ ಒಂದು ಕಾನ್ಸೆಪ್ಟ್ ಆಗಿದೆ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಈ ಕಾನ್ಸೆಪ್ಟ್ ಆಧಾರದ ಮೇಲೆ ಉತ್ಪಾದನಾ ಮಾದರಿಯನ್ನು ಸಂಸ್ಥೆಯು ಪರಿಗಣಿಸಿದರೆ ಕಾನ್ಸೆಪ್ಟ್-ಇ ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಇದೇ ಕಾನ್ಸೆಪ್ಟ್ ಮಾದರಿಯೇ ಉತ್ಪಾದನೆಗೆ ಹೋಗುತ್ತದೆ ಎಂಬುವುದು ಇನ್ನು ಖಚಿತವಾಗಿಲ್ಲ.

ಅನಾವರಣವಾಯ್ತು ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್

ಭಾರತ ಸೇರಿದಂತೆ ಫ್ರಾನ್ಸ್‌ನ ಹೊರಗೆ ಬೇರೆಲ್ಲಿಯೂ ತನ್ನ ಬೈಕ್‌ಗಳನ್ನು ಪರಿಚಯಿಸುವ ಯಾವುದೇ ಯೋಜನೆಯನ್ನು ಸಂಸ್ಥೆಯು ಹೊಂದಿಲ್ಲ. ಮುಂದಿನ ದಿನಗಳಲ್ಲಿ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗುತ್ತದೆ. ಇದೀಗ ಎಲೆಕ್ಟ್ರಿಕ್ ಬೈಕ್ ಗಳಿಗೆ ಭಾರೀ ಬೇಡಿಕೆಯನ್ನು ಹೊಂದಿರುವುದರಿಂದ ಶೀಘ್ರದಲ್ಲೇ ಈ ಹೊಸ ಡಬ್ ಕಾನ್ಸೆಪ್-ಇ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
DAB Concept-E Electric Bike Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X