Just In
- 12 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 49 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
2021ರ ಡಕಾರ್ ರ್ಯಾಲಿಯ 43ನೇ ಆವೃತ್ತಿಯು 12ನೇ ಹಂತದ ರ್ಯಾಲಿಯೊಂದಿಗೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್ ಕೆವಿನ್ ಬೆನೆವಿಡೆಸ್ ಪ್ರಸಕ್ತ ವರ್ಷದ ಡಕಾರ್ ರ್ಯಾಲಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

12 ಹಂತಗಳನ್ನು ಒಳಗೊಂಡಿದ್ದ 2021ರ ಡಕಾರ್ ರ್ಯಾಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್ಗಳು ಈ ಬಾರಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ತಮ್ಮದಾಸಿಕೊಂಡಿದ್ದು, ಮೊದಲ ಸ್ಥಾನದಲ್ಲಿ ಕೆವಿನ್ ಬೆನೆವಿಡೆಸ್ ಮತ್ತು ಎರಡನೇ ಸ್ಥಾನವನ್ನು 2020ರ ಚಾಂಪಿಯನ್ ರಿಕಿ ಬ್ರಾಬೆಕ್ ಪ್ರಶಸ್ತಿ ಪಡೆದುಕೊಂಡರು. ಎರಡನೇ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಿದ್ದ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಸ್ಯಾಮ್ ಸುಂದರ್ಲ್ಯಾಂಡ್ ಮೂರನೇ ಸ್ಥಾನ ಪಡೆದುಕೊಂಡರು.

ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭಗೊಂಡಿದ್ದ 2021ರ ಡಕಾರ್ ರ್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿತ್ತು. ಜನವರಿ 3ರಂದು ಜಿದ್ದಾದಿಂದ ಆರಂಭವಾಗಿದ್ದ ಮೊದಲ ಹಂತವು ಕೊನೆಗೆ ಜಿದ್ದಾದದಲ್ಲಿ 12ನೇ ಹಂತದೊಂದಿಗೆ ಕೊನೆಗೊಂಡಿದೆ.

ಕರೋನಾ ವೈರಸ್ ಹಿನ್ನಲೆಯಲ್ಲಿ ಕೆಲವು ಮಾರ್ಗಗಳನ್ನು ತಪ್ಪಿಸುವ ಉದ್ದೇಶದಿಂದ 2020ರ ಡಕಾರ್ ರ್ಯಾಲಿ ಆವೃತ್ತಿಗಿಂತಲೂ 2021ರ ಡಕಾರ್ ರ್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300ಕಿ.ಮೀ ಕಡಿತ ಮಾಡಿದ್ದ ಆಯೋಜಕರು ಈ ಬಾರಿ ಹೊಸದಾಗಿ ಡಕಾರ್ ಕ್ಲಾಸಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸಿದ್ದರು.

ಯಾನಾಬೂ ನಗರದಿಂದ ಇಂದು ಮುಂಜಾನೆ ಆರಂಭವಾಗಿದ್ದ 12ನೇ ಹಂತದ ರ್ಯಾಲಿಯ ಆರಂಭದ ಕೇಂದ್ರವಾದ ಜೆದ್ದಾ ನಗರವನ್ನು ತಲುಪಬೇಕಿತ್ತು. ಒಟ್ಟು 425 ಕಿ.ಮೀ ಒಳಗೊಂಡಿದ್ದ 12ನೇ ಹಂತದಲ್ಲಿ 225 ಕಿ.ಮೀ ಬೈಕ್ ಸವಾರಿಯನ್ನು ವಿಶೇಷ ಮಾರ್ಗವೆಂದು ಘೋಷಣೆ ಮಾಡಲಾಗಿತ್ತು. 12ನೇ ಹಂತದ ರ್ಯಾಲಿಯು ಕೆಂಪು ಸಮುದ್ರದ ದಡದಲ್ಲಿ ಆರಂಭವಾಗುವುದರೊಂದಿಗೆ ಶೇ. 80ರಷ್ಟು ಮಾರ್ಗವು ಮರಳುಗಾಡಿನಿಂದ ಮತ್ತು ಶೇ. 20 ರಷ್ಟು ರೈಡಿಂಗ್ ಮಾರ್ಗವು ಮಣ್ಣುಮಿಶ್ರಿತ ರಸ್ತೆ ಮತ್ತು ಒರಾಟದ ಕಲ್ಲು ಮಿಶ್ರಿತ ರಸ್ತೆಗಳನ್ನು ಒಳಗೊಂಡಿತ್ತು.

43ನೇ ಆವೃತ್ತಿಯ ಡಕಾರ್ ರ್ಯಾಲಿಯಲ್ಲಿ ಪ್ರತಿ ಹಂತವು ಕೂಡಾ ರೈಡರ್ಗಳೊಂಗಿಗೆ ಒಂದೊಂದು ಕ್ಲಿಷ್ಟಕರವಾದ ಸವಾಲುಗಳನ್ನು ಎದುರಾಗುವಂತೆ ಮಾಡಿತು. ವಿಪರೀತವಾದ ಮರಳು ಮಿಶ್ರಿತ ಧೂಳಿನ ಅಬ್ಬರ ಮತ್ತು ಒರಟಾದ ರಸ್ತೆಗಳು ರ್ಯಾಲಿ ಉದ್ದಕ್ಕೂ ಹಲವಾರು ಸವಾಲುಗಳಿಗೆ ಸಾಕ್ಷಿಯಾಯಿತು.

ಪ್ರಸಕ್ತ ವರ್ಷದ ಡಕಾರ್ ರ್ಯಾಲಿಯ ಪ್ರತಿ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡವು ಪ್ರತಿಸ್ಪರ್ಧಿ ತಂಡವಾದ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಕ್ಕೆ ಭಾರೀ ಪೈಪೋಟಿ ನೀಡಿತು. 12ನೇ ಹಂತದಲ್ಲೂ ಮೊದಲ ಎರಡು ಸ್ಥಾನಗಳಲ್ಲೂ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್ಗಳು ಮುನ್ನಡೆ ಸಾಧಿಸಿದರು.

12ನೇ ಹಂತದ ರ್ಯಾಲಿಯಲ್ಲಿ ಅಬ್ಬರಿಸಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರಿಕಿ ಬ್ರಾಬೆಕ್ ಮೊದಲ ಸ್ಥಾನವನ್ನು ಪಡೆದರೆ ಎರಡನೇ ಸ್ಥಾನವನ್ನು ರೈಡರ್ ಕೆವಿನ್ ಬೆನೆವಿಡೆಸ್ ಮತ್ತು ಮೂರನೇ ಸ್ಥಾನವನ್ನು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಮೆಥಿಯಾಸ್ ವಾಕ್ನರ್ ಪಡೆದುಕೊಂಡರು.

ಟಾಪ್ 20ರ ಸ್ಥಾನದಲ್ಲಿ ಹರಿತ್ ನೋವಾ
2021ರ ಡಕಾರ್ ರ್ಯಾಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹೀರೋ ಮೋಟೋಸ್ಪೋರ್ಟ್, ಶೆರ್ಕೊ ಪ್ಯಾಕ್ಟರಿ ಮತ್ತು ಟಿವಿಎಸ್ ರೇಸಿಂಗ್ ತಂಡದಿಂದ ಪ್ರಾಯೋಜಕತ್ವ ಪಡೆದಿರುವ ರೈಡರ್ಗಳು 43ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಉತ್ತಮ ಸ್ಥಾನ ಪಡೆದುಕೊಂಡರು.

ಶೆರ್ಕೊ ಪ್ಯಾಕ್ಟರಿ ಫ್ಯಾಕ್ಟರಿ ತಂಡದ ಹರಿತ್ ನೋವಾ ಮೊದಲ ಬಾರಿಗೆ ಡಕಾರ್ ರ್ಯಾಲಿಯಲ್ಲಿ ಟಾಪ್ 20ರ ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 2021 ಡಕಾರ್ ರ್ಯಾಲಿನ ಒಟ್ಟಾರೆ ಪ್ರದರ್ಶನಕ್ಕಾಗಿ 19ನೇ ಸ್ಥಾನ ಪಡೆದುಕೊಂಡರು. ಈ ಮೂಲಕ ಡಕಾರ್ ರ್ಯಾಲಿಯಲ್ಲಿ ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಮೊದಲ ಭಾರತೀಯ ರೈಡರ್ ಎಂಬ ಹೆಗ್ಗಳಿಕೆ ಪಾತ್ರದಾರರು.

ಆದರೆ 5ನೇ ಹಂತದ ರ್ಯಾಲಿಯಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿ ಸಿಎಸ್ ಸಂತೋಷ್ ಈ ಬಾರಿ ರ್ಯಾಲಿ ಆರಂಭದಲ್ಲೇ ಅನಾಹುತಕ್ಕೀಡಾಗಿದ್ದು ಭಾರತೀಯ ಮೋಟಾರ್ಸ್ಪೋರ್ಟ್ ಪ್ರೇಮಿಗಳಿಗೆ ನಿರಾಶೆ ಉಂಟುಮಾಡಿತು.

ಸಿಎಸ್ ಸಂತೋಷ್ ಅಲಭ್ಯತೆಯ ನಡುವೆಯೂ ಹೀರೋ ಮೋಟೋಸ್ಪೋರ್ಟ್ ತಂಡದ ಇತರೆ ರೈಡರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಜೊಕ್ವಿಮ್ ರೋಡ್ರಿಗೊಸ್ ಇಂದಿನ ರ್ಯಾಲಿಯಲ್ಲಿ 8ನೇ ಸ್ಥಾನಕ್ಕೆ ಮತ್ತು ಸ್ಟೆಬಾಸ್ಟಿನ್ ಬ್ರುಲೆರ್ 10ನೇ ಸ್ಥಾನವನ್ನು ಪಡೆದುಕೊಂಡರು.

ಶೆರ್ಕೊ ಫಾಕ್ಟರಿ ತಂಡವನ್ನು ಪ್ರತಿನಿಧಿಸಿದ್ದ ಲೊರೆಂಜೊ ಸ್ಯಾಂಟೊಲಿನೊ 6ನೇ ಸ್ಥಾನ ಪಡೆದುಕೊಂಡಿದರೆ ಇನ್ನಿಬ್ಬರು ರೈಡರ್ಗಳಾದ ರುಯಿ ಗೊನ್ಕಾಲ್ವ್ಸ್ 16ನೇ ಸ್ಥಾನಕ್ಕೆ ಮತ್ತು ಹರಿತ್ ನೋವಾ 19ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಇನ್ನುಳಿದಂತೆ ಡಕಾರ್ ರ್ಯಾಲಿಯಲ್ಲಿನ ಕ್ವಾರ್ಡ್ರಿಸೈಕಲ್ ವಿಭಾಗದಲ್ಲಿ 7240 ತಂಡದ ಮ್ಯಾನುಯೆಲ್ ಆಂಡೂಜರ್, ಕಾರು ವಿಭಾಗದಲ್ಲಿ ಎಕ್ಸ್-ರೈಡ್ ಮಿನಿ ಜೆಸಿಡಬ್ಲ್ಯೂ ತಂಡದ ಸ್ಟೀಫನ್ ಪೀಟರ್ಹ್ಯಾನ್ಸೆಲ್ ಮತ್ತು ಎಡ್ವರ್ಡ್ ಬೌಲಂಜರ್, ಹಗುರ ವಾಹನ ವಿಭಾಗದಲ್ಲಿ ಸೌತ್ ರೇಸಿಂಗ್ ತಂಡದ ಫ್ರಾನ್ಸಿಸ್ಕೊ ಲೋಪೆಜ್ ಕಾಂಟಾರ್ಡೊ ಮತ್ತು ಜುವಾನ್ ಪ್ಯಾಬ್ಲೊ ಲಾಟ್ರಾಚ್ ವಿನಾಗ್ರೆ ವಿಜೇತರಾಗಿದ್ದಾರೆ.

ಟ್ರಕ್ ವಿಭಾಗದಲ್ಲಿ ಕಾಮಜ್ - ಮಾಸ್ಟರ್ ತಂಡದ ಡಿಮಿಟ್ರಿ ಸೊಟ್ನಿಕೋವ್, ರುಸ್ಲಾನ್ ಅಖ್ಮದೇವ್ ಮತ್ತು ಇಲ್ಗಿಜ್ ಅಖ್ಮೆಟ್ಜಿಯಾನೋವ್ ಹಾಗೂ ಕ್ಲಾಸಿಕ್ ವಿಭಾಗದಲ್ಲಿ ಟೀಂ ಸನ್ಹಿಲ್ ತಂಡದ ಡೌಟನ್ ಮತ್ತು ಎಮಿಲಿಯನ್ ಎಟಿಯೆನ್ನೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಒಟ್ಟಾರೆ 2021ರ ಡಕಾರ್ ರ್ಯಾಲಿಯು ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ವಿಶ್ವದ ಅಪಾಯಕಾರಿ ಮೋಟಾರ್ಸ್ಪೋರ್ಟ್ ಎಂದೇ ಖ್ಯಾತಿಯಾಗಿರುವ ಡಕಾರ್ ರ್ಯಾಲಿಯಲ್ಲಿ ಈ ಬಾರಿ ಖಾಸಗಿ ತಂಡದ ರೈಡರ್ ಪಿಯರೆ ಚೆರ್ಪಿನ್ ಸಾವಪ್ಪಿದರೆ ಭಾರತೀಯ ಮೋಟಾರ್ಸ್ಪೋರ್ಟ್ ರೂವಾರಿ ಸಿಎಸ್ ಸಂತೋಷ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಭಾರತದ ಹರಿತ್ ನೋವಾ ಮೊದಲ ಬಾರಿಗೆ ಟಾಪ್ 20 ಸ್ಥಾನ ಪಡೆದುಕೊಳ್ಳುವ ಮೂಲಕ ಭರವಸೆಯ ರೈಡರ್ ಆಗಿ ಹೊರಹೊಮ್ಮಿದ್ದಾರೆ.