ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಕರೋನಾ ವೈರಸ್ ಅಬ್ಬರದ ನಡುವೆಯೂ ವಿಶ್ವದ ಜನಪ್ರಿಯ ಮೋಟಾರ್‌ಸ್ಪೋರ್ಟ್ ಡಕಾರ್ ರ‍್ಯಾಲಿಯ 43ನೇ ಆವೃತ್ತಿಯನ್ನು ಆಯೋಜಿಸಿದ್ದ ಡಕಾರ್ ಸ್ಪೋರ್ಟ್ ಆಯೋಜಕರು ಇದೀಗ 2022ರಲ್ಲಿ ನಡೆಯಲಿರುವ 44ನೇ ಆವೃತ್ತಿಯ ನಡೆಸುವ ಸಿದ್ದತೆಯಲ್ಲಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಸೌದಿ ಅರೇಬಿಯಾದಲ್ಲಿ ಆರಂಭವಾಗಲಿರುವ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯು 2022ರ ಜನವರಿ 2ರಿಂದ 14ರ ತನಕ ನಡೆಯಲಿದ್ದು, ರಿಯಾದ್ ಸನೀಹದಲ್ಲಿರುವ ಹೈಲ್ ನಗರದಿಂದ ಆರಂಭವಾಗಿ ಪ್ರಮುಖ 12 ಹಂತಗಳೊಂದಿಗೆ ಜೆದ್ದಾದಲ್ಲಿ ಪೂರ್ಣಗೊಳ್ಳಲಿದೆ. ‌43ನೇ ಆವೃತ್ತಿಯ ರ‍್ಯಾಲಿಯು ಕೆಲವು ಪ್ರಮುಖ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

43ನೇ ಆವೃತ್ತಿಯಲ್ಲಿ ಹಲವಾರು ಮುನ್ನೆಚ್ಚರಿಕೆಗಳ ನಡುವೆಯೂ ಕಠಿಣ ಮಾರ್ಗಗಳಲ್ಲಿ ಓರ್ವ ಬೈಕ್ ಸ್ಪರ್ಧಿ ಸಾವನ್ನಪ್ಪಿದ್ದ. ಜೊತೆಗೆ ಹೀರೋ ಮೋಟೊಸ್ಪೋರ್ಟ್ ಪ್ರತಿನಿಧಿಸಿದ್ದ ಸಿ.ಎಸ್ ಸಂತೋಷ್ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಈ ಹಿನ್ನಲೆ 14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗುತ್ತಿದೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿತ್ತು. ಆದರೆ 2022ರ ಆವೃತ್ತಿಯು ಒಟ್ಟು ಅಂತರವನ್ನು 4 ಸಾವಿರ ಕಿ.ಮೀ ಗೆ ಇಳಿಕೆ ಮಾಡಲಾಗುತ್ತಿದೆ. ಹೊಸ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಜಗತ್ತಿನ ಅತಿ ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯು ತನ್ನದೇ ವೈಶಿಷ್ಟ್ಯತೆಗಳೊಂದಿಗೆ ಹಲವಾರು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಈ ಸ್ಪರ್ಧೆಯಲ್ಲಿ ಕೆಲವೇ ಕೆಲವು ಭಾರತೀಯ ರೈಡರ್‌ಗಳು ಮಾತ್ರ ಉತ್ತಮ ಪ್ರದರ್ಶನ ತೋರಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಟಿವಿಎಸ್ ಪ್ರಾಯೋಜಿಕ ಶೆರ್ಕೊ ಫಾಕ್ಟರಿ ತಂಡದ ಹರೀತ್ ನೋವಾ ಸೇರಿದಂತೆ ಹೀರೋ ಮೋಟಾರ್‌ಸ್ಪೋರ್ಟ್ ತಂಡದ ಸಿಎಸ್ ಸಂತೋಷ್ ಸೇರಿ ಕೆಲವೇ ಸ್ಪರ್ಧಿಗಳು ಟಾಪ್ 20ರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಸಾವಿರಾರು ಕಿ.ಮೀ ಅಂತರದಲ್ಲಿ ವಿವಿಧ ಹಂತಗಳ ಸ್ಪರ್ಧೆ ಒಳಗೊಂಡ ರ‍್ಯಾಲಿಯ ಗೆಲುವಿನ ನಾಗಾಲೋಟದಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ಪರ್ಧಿಗಳು ಪ್ರಾಣಕಳೆದುಕೊಂಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಆದರೂ ಮೋಟಾರ್‌ಸ್ಪೋರ್ಟ್‌ನಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಡಕಾರ್ ರ‍್ಯಾಲಿ ಆಯೋಜನೆಯನ್ನು ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಲಾಗುತ್ತಿದ್ದು, 2020ರ ಆವೃತ್ತಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿ.ಎಸ್ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿ ಬಂದಿರುವುದೇ ಒಂದು ರೋಚಕ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಸಿಎಸ್ ಸಂತೋಷ್ ಅವರು ಡಕಾರ್ ರ‍್ಯಾಲಿಯಲ್ಲಿ ಭಾರತದ ಪರವಾಗಿ ಏಳನೇ ಬಾರಿ ಪ್ರತಿನಿಧಿಸಿದ್ದು, ವಿಶ್ವದ ಕಠಿಣ ಮತ್ತು ಅಪಾಯಕಾರಿ ಡಕಾರ್ ರ‍್ಯಾಲಿಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಜನವರಿ 3ರಿಂದ 15ರ ತನಕ ಆಯೋಜಿಸಲಾಗಿದ್ದ 2021ರ ಡಕಾರ್ ರ‍್ಯಾಲಿಯು ಒಟ್ಟು 12 ಹಂತಗಳೊಂದಿಗೆ 7,646 ಕಿ.ಮೀ ರೈಡಿಂಗ್ ಅಂತರವನ್ನು ಒಳಗೊಂಡಿತ್ತು. ‌ರ‍್ಯಾಲಿಯ ಮೊದಲ ಮೂರು ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಸಿಎಸ್ ಸಂತೋಷ್ ಅವರು ನಾಲ್ಕನೇ ಹಂತವು ಆರಂಭವಾದ ಕೆಲವೇ ಗಂಟೆಗಳಲ್ಲಿ ಅಪಘಾತಕ್ಕೀಡಾಗಿದ್ದರು.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ಅಪಘಾತವಾದ ನಂತರ ಸುಮಾರು 15 ದಿನಗಳ ಕಾಲ ಯಾರನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಸಿಎಸ್ ಸಂತೋಷ್ ಅವರು ಹಲವಾರು ವೈದ್ಯಕೀಯ ಪ್ರಯತ್ನಗಳ ನಂತರ ಇದೀಗ ಚೇತರಿಸಿಕೊಂಡಿದ್ದು, 2022ರ ಆವೃತ್ತಿಯಲ್ಲಿ ಅವರು ಭಾಗಿಯಾಗುವುದು ಅನುಮಾನ ಎನ್ನಲಾಗಿದೆ.

ಸೌದಿ ಅರೇಬಿಯಾದಲ್ಲಿ ನಡೆಯಲಿರುವ 44ನೇ ಡಕಾರ್ ರ‍್ಯಾಲಿ ಮಾಹಿತಿ ಬಹಿರಂಗ

ವಿವಿಧ ಮೋಟಾರ್ ತಂಡಗಳ ತಯಾರಿಗಾಗಿ ಸ್ಪರ್ಧೆಯ ದಿನಾಂಕವನ್ನು ಪ್ರಕಟಿಸಲಾಗಿದ್ದು, ಕಠಿಣ ಮೋಟಾರ್‌ಸ್ಪೋರ್ಟ್ ಸ್ಪರ್ಧೆಯಲ್ಲಿ ಮಾನ್ಸ್ಟರ್ ಎನರ್ಜಿ ಹೋಂಡಾ, ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಗಳು ಈ ಬಾರಿಯು ಪ್ರಶಸ್ತಿ ಗೆಲ್ಲುವ ಸಿದ್ದತೆಯಲ್ಲಿವೆ.

Most Read Articles

Kannada
English summary
Dakar Rally 2022 Route & Schedule Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X