ಭಾರತದಲ್ಲಿರುವ ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ತಪ್ಪದೆ ತಿಳಿಯಿರಿ..

ದೇಶಾದ್ಯಂತ ಬಹುತೇಕ ರಾಜ್ಯಗಳು ಬೈಕ್ ಸವಾರರ ಸವಾರರ ಜೊತೆಗೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಳಪೆ ಹೆಲ್ಮೆಟ್‌ಗಳ ಬಳಕೆಯು ಹೆಚ್ಚಳವಾಗಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಭಾರತದಲ್ಲಿ ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆಯನ್ನು ಜಾರಿಗೆ ತರುವಲ್ಲಿ ಆಯಾ ರಾಜ್ಯಗಳ ಸಾರಿಗೆ ಇಲಾಖೆಗಳು ಯಶಸ್ವಿಯಾಗುತ್ತಿದ್ದರೂ ಕಳಪೆ ಹೆಲ್ಮೆಟ್ ಬಳಕೆಯನ್ನು ತಡೆಯುವಲ್ಲಿ ವಿಫಲವಾಗುತ್ತಿವೆ. ವಾಹನ ಸವಾರರು ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಸುತ್ತಿರುವುದು ವಾಹನ ಸವಾರರ ಪ್ರಾಣ ಹಾನಿಗೆ ಪ್ರಮುಖ ಕಾರಣವಾಗುತ್ತಿವೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಇದೇ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, 2021ರ ಜೂನ್‌ 1 ರಿಂದಲೇ ಅನ್ವಯವಾಗುವಂತೆ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಆದೇಶ ನೀಡಿದೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಈ ಹಿಂದೆಯೇ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರೂ ಹಲವಾರು ಹೆಲ್ಮೆಟ್ ಕಂಪನಿಗಳು ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಿದ್ದವು. ಇದಕ್ಕಾಗಿ ಉತ್ಪಾದಕರಿಗೆ ಮತ್ತು ಬಳಕೆದಾರರಿಗೂ ಅನ್ವಯವಾಗುವ ಹೊಸ ನಿಯಮ ಜಾರಿಗೆ ತಂದಿರುವ ಸಾರಿಗೆ ಇಲಾಖೆಯು ಮೊದಲ ಕಳಪೆ ಹೆಲ್ಮೆಟ್ ತಯಾಕರ ವಿರುದ್ಧ ಸಮರ ಸಾರಿದೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಕಳಪೆ ಹೆಲ್ಮೆಟ್ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಕಠಿಣ ಶಿಕ್ಷೆ ಘೋಷಣೆ ಮಾಡಿರುವ ಕೇಂದ್ರ ಸಾರಿಗೆ ಇಲಾಖೆಯು ಕಳಪೆ ಹೆಲ್ಮೆಟ್ ಮಾರಾಟ ಕಂಡುಬಂದಲ್ಲಿ ತಯಾಕರಿಗೆ ಮತ್ತು ಮಾರಾಟಗಾರರಿಗೆ ಒಂದು ವರ್ಷ ಜೈಲು ಇಲ್ಲವೆ ರೂ.1 ಲಕ್ಷ ದಂಡ ವಿಧಿಸುವ ನಿಯಮವನ್ನು ಅಧಿಕೃತಗೊಳಿಸಿದೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಬಳಕೆದಾರರಿಗೂ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ತಂದಿದ್ದರೂ ದಂಡ ಕುರಿತು ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಸದ್ಯಕ್ಕೆ ಕಳಪೆ ಹೆಲ್ಮೆಟ್ ಮಾರಾಟಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಬಳಕೆದಾರಿಗೂ ದಂಡ ವಿಧಿಸಬಹುದಾಗಿದೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಈ ಹಿನ್ನೆಲೆಯಲ್ಲಿ ನಕಲಿ ಹೆಲ್ಮೆಟ್‌ಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಬ್ರಾಂಡ್ ಹೆಸರಿನಲ್ಲಿ ಮಾರಾಟಗೊಳ್ಳುವ ಹೆಲ್ಮೆಟ್‌ಗಳ ಆಯ್ಕೆಯ ಕುರಿತಾಗಿ ಸಾಕಷ್ಟು ಎಚ್ಚರವಹಿಸಬೇಕಿರುವ ವಾಹನ ಸವಾರರು ಉತ್ತಮ ಗುಣಗುಣಮಟ್ಟದ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಬೇಕು.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಸಾವಿರಾರು ರೂಪಾಯಿ ಬೆಲೆ ತೆತ್ತು ಬೈಕ್ ಮತ್ತು ಸ್ಕೂಟರ್‌ಗಳನ್ನು ಖರೀದಿಸುವ ಅನೇಕ ವಾಹನ ಸವಾರರು ಉತ್ತಮವಾದ ಒಂದು ಹೆಲ್ಮೆಟ್ ಆಯ್ಕೆ ಮಾಡುವ ಬದಲು ಕಡಿಮೆ ಬೆಲೆಯ ಕಳಪೆ ಹೆಲ್ಮೆಟ್ ಖರೀದಿಸುವುದೇ ಹೆಚ್ಚು. ಆದರೆ ಅದರಿಂದ ಅಪಾಯವೇ ಹೆಚ್ಚು ಅನ್ನುವುದನ್ನು ಅರಿಯಬೇಕಿರುವ ವಾಹನ ಸವಾರರು ಕೈಗೆಟುವ ಬೆಲೆಯಲ್ಲಿ ದೊರೆಯಬಹುದಾದ ಒಂದು ಉತ್ತಮ ಹೆಲ್ಮೆಟ್ ಖರೀದಿ ಮಾಡುವುದು ಉತ್ತಮ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಹೆಲ್ಮೆಟ್ ವಿಧಗಳು

ಹೆಲ್ಮೆಟ್ ಖರೀದಿ ವೇಳೆ ಗಮನವಹಿಸಬೇಕಾದ ಪ್ರಮುಖ ಅಂಶವೆಂದರೆ, ಇದು ನಿಮ್ಮ ಮುಖ ಹಾಗೂ ತಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಮಾರುಕಟ್ಟೆಯಲ್ಲಿ ಫುಲ್ ಫೇಸ್ ಹೆಲ್ಮೆಟ್, ಮಾಡ್ಯೂಲರ್ ಹೆಲ್ಮೆಟ್, ಆಫ್ ರೋಡ್ ಹೆಲ್ಮೆಟ್, ಡ್ಯುಯಲ್ ಸ್ಪೋರ್ಟ್ ಹೆಲ್ಮೆಟ್ ಮತ್ತು ಹಾಫ್ ಫೇಸ್ ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಇವುಗಳಲ್ಲಿ ಬೈಕ್ ಸವಾರರು ಹೆಚ್ಚಾಗಿ ಫುಲ್ ಫೇಸ್ ಹೆಲ್ಮೆಟ್‌ಗಿಂತಲೂ ಅಂದಚಂದ ಕಾಣುವ ಹಾಫ್ ಫೇಸ್ ಹೆಲ್ಮೆಟ್, ಓಪನ್ ಫೇಸ್ ಹೆಲ್ಮೆಟ್ ಖರೀದಿಸುವುದೇ ಹೆಚ್ಚು. ಆದರೆ ಅಪಘಾತ ವೇಳೆಯಲ್ಲಿ ಇದು ನಿಮ್ಮ ನೆರವಿಗೆ ಬರಲಾರದು ಎಂಬುದನ್ನು ಗಮನಿಸಲು ಮರೆಯದಿರಿ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಜೊತೆಗೆ ನೀವು ಕೊಂಡುಕೊಳ್ಳುತ್ತಿರುವ ಹೆಲ್ಮೆಟ್ ಇಂಡಿಯನ್ ಸ್ಟಾಂಡರ್ಡ್ ಇಸ್ಸ್ಟಿಟ್ಯೂಟ್‌ನಿಂದ (ಐಎಸ್‌ಐ) ಧೃಢೀಕರಣ ಪಡೆದುಕೊಂಡಿದ್ದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಹಾಗೆಯೇ ಗ್ಯಾರಂಟಿ ಇತ್ಯಾದಿ ವಿಚಾರಗಳ ಬಗ್ಗೆ ಆರಂಭದಲ್ಲೇ ಮಾಹಿತಿ ಪಡೆದುಕೊಳ್ಳಿರಿ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಕೆಲವರು ಅಗ್ಗದ ದರಕ್ಕೆ ಮನಸೋತು ರಸ್ತೆ ಬೀದಿಗಳಲ್ಲಿರುವ ಲಭಿಸುವ ಸಾಮಾನ್ಯ ಹೆಲ್ಮೆಟ್‌ಗೆ ಮೊರೆ ಹೋಗುತ್ತೇವೆ. ಗುಣಮಟ್ಟ ರಹಿತವಾದ ಹೆಲ್ಮೆಟ್‌ಗಳ ಖರೀದಿಯಿಂದಾಗಿ ನಮಗೆ ನಾವೇ ಅಪಾಯವನ್ನು ಆಹ್ವಾನಿಸಿದಂತೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಸ್ಟೈಲಿಷ್ ಹೆಲ್ಮೆಟ್

ಕೆಲವೊಂದು ಬಾರಿ ಶೈಲಿ ಹಾಗೂ ವಿನ್ಯಾಸಕ್ಕೆ ಮಾರು ಹೋಗಿ ಅಸುರಕ್ಷಿತ ಹೆಲ್ಮೆಟ್‌ಗಳನ್ನು ನಮ್ಮ ಯುವ ಸಮೂಹ ಖರೀದಿಸುವ ಹಲವಾರು ಪ್ರಸಂಗಗಳನ್ನು ಗಮನಿಸಿರುತ್ತೇವೆ. ಆದರೆ ಇವು ನೋಡಲು ಅಂದವಾಗಿರುತ್ತವೆ ಹೊರತು ನಿಮ್ಮ ಜೀವ ರಕ್ಷಣೆಗೆ ಬರಲಾರವು.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಹೆಲ್ಮೆಟ್ ಒಳಮೈ

ಹೆಲ್ಮೆಟ್ ಆಂತರಿಕ ಭಾಗಗಳ ವಿನ್ಯಾಸ ಹೇಗೆ ಗರಿಷ್ಠ ಮಟ್ಟದಲ್ಲಿರುತ್ತದೆಯೋ ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ಪರಿಕರಗಳ ಬಗ್ಗೆಯೂ ತಿಳಿದುಕೊಳ್ಳಿರಿ. ಯಾಕೆಂದರೆ ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಿದರೆ ಬೆವರಿನ ಸಮಸ್ಯೆ ಉಂಟಾಗಿ ಅದು ನಿಮ್ಮ ಕೂದಲುದುರುವಿಕೆಗೂ ಕಾರಣವಾಗಬಹುದು ಎಂಬುದರ ಬಗ್ಗೆ ಹುಷಾರಾಗಿರಿ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಹೆಲ್ಮೆಟ್ ಗಾತ್ರ

ಇನ್ನು ನಿಮಗೆ ಆರಾಮದಾಯಕವಾಗುವ ರೀತಿಯಲ್ಲಿ ಹೆಲ್ಮೆಟ್ ಗಾತ್ರ ಹೊಂದಿರಬೇಕು. ಯಾವತ್ತೂ ತುಂಬಾನೇ ಬಿಗಿಯಾದ ಅಥವಾ ಸಡಿಲವಾದ ಶಿರಸ್ತ್ರಾಣ ಬಳಸದಿರಿ. ಯಾಕೆಂದ್ರೆ ಕೆಲವು ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರೂ ಸಹ ಅಪಘಾತದಲ್ಲಿ ಪ್ರಾಣಕಳೆದುಕೊಂಡ ಉದಾಹರಣೆಗಳಿವೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಬಹುತೇಕ ಬೈಕ್ ಸವಾರರು ಸರಿಯಾದ ಗಾತ್ರ ಹೆಲ್ಮೆಟ್ ಆಯ್ಕೆ ಮಾಡದೆ ಯಾವುದೋ ಒಂದು ಹೆಲ್ಮೆಟ್ ಹಾಕಿದರೆ ಆಯಿತು ಎಂಬ ಮನಸ್ಥಿತಿ ಹೊಂದಿರುತ್ತಾರೆ. ಇದರಿಂದ ಸುರಕ್ಷತೆಗಿಂತ ಅಪಾಯವೇ ಹೆಚ್ಚು.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗುಣಮಟ್ಟದ ಹೆಲ್ಮೆಟ್ ನಿರ್ಮಾಣ ಮಾಡುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಸ್ಟೀಲ್ ಬರ್ಡ್, ವೆಗಾ, ಎಲ್ಎಸ್2, ಹೆಚ್‌ಜೆಸಿ, ಎಸ್ಎಂಕೆ, ಬೆಲ್, ಶೊಯೈ ಮತ್ತುಎವಿಜಿ ಸಂಸ್ಥೆಗಳು ಬೈಕ್ ಸವಾರ ಬೇಡಿಕೆಯೆಂತೆ ವಿವಿಧ ಮಾದರಿಯ ಗುಣಮಟ್ಟದ ಹೆಲ್ಮೆಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದು, ರೂ. 1 ಸಾವಿರದಿಂದ ರೂ. 1 ಲಕ್ಷ ಮುಖಬೆಲೆಯ ವಿವಿಧ ಮಾದರಿಗಳಲ್ಲಿ ಬೈಕ್ ಸವಾರರಿಗಾಗಿ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾರಾಟಮಾಡುತ್ತಿವೆ.

ಹೆಲ್ಮೆಟ್ ವಿಧಗಳು ಮತ್ತು ಅವುಗಳ ಪ್ರಾಮುಖ್ಯತೆ

ಹೀಗಾಗಿ ನೀವು ಕೂಡಾ ಯಾವುದೇ ಕಾರಣಕ್ಕೂ ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಬಳಕೆ ಮಾಡದೇ ಒಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಬಳಕೆ ಮಾಡಿ. ಯಾಕೆಂದ್ರೆ ಒಂದು ಕೆಜಿ ತರಕಾರಿ ಖರೀದಿಸುವಾಗಿನ ಜಾಣ್ಮೆಯನ್ನು ಒಂದು ಹೆಲ್ಮೆಟ್ ಖರೀದಿಸುವಾಗಲೂ ಬಳಕೆ ಮಾಡದ್ದಿಲ್ಲಿ ಮುಂದೆ ಆಗಬಹುದಾದ ದುರಂತಗಳನ್ನು ಈಗಲೇ ತಡೆಯಬಹುದು ಅಲ್ಲವೇ?

Most Read Articles

Kannada
English summary
Different types of two wheeler helmets and importance of wearing a helmet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X