ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಡುಕಾಟಿ ಇಂಡಿಯಾ (Ducati India) ತನ್ನ ಹೊಸ Panigale V4 SP ಸೂಪರ್‌ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಈ ಸೂಪರ್‌ಬೈಕ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 36,07,000 ಲಕ್ಷಗಳಾಗಿದೆ. ಕಂಪನಿಯು ಭಾರತದಲ್ಲಿರುವ ತನ್ನ ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಹೊಸ Panigale V4 SP ಬೈಕಿನ ಬುಕ್ಕಿಂಗ್ ಗಳನ್ನು ಆರಂಭಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಹೊಸ Ducati Panigale V4 SP ಬೈಕ್ ಅದರ ಸ್ಟಾಂಡರ್ಡ್ ಮಾದರಿಗಿಂತ ಹೆಚ್ಚು ರೇಸ್ ಟ್ಯೂನ್ ಹಾಗೂ ಕಾರ್ಯಕ್ಷಮತೆ ಆಧಾರಿತ ಸ್ಪೋರ್ಟ್ಸ್ ಬೈಕ್ ಆಗಿದೆ. ಕಂಪನಿಯು ಈ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚು ಫೀಚರ್ ಗಳನ್ನು ನೀಡಿದೆ. ಈ ಬೈಕ್ ಮೋಟೋಜಿಪಿ ಹಾಗೂ ಎಸ್‌ಬಿಕೆ ಚಾಂಪಿಯನ್‌ಶಿಪ್‌ಗಳ ಪೂರ್ವ ಋತು ಪರೀಕ್ಷೆಗಳಲ್ಲಿ ಬಳಸಲಾದ ಡುಕಾಟಿ ಕೋರ್ಸ್ ಬೈಕ್‌ನಿಂದ ಸ್ಫೂರ್ತಿ ಪಡೆಯುವ ಹೊಸ ವಿಂಟರ್ ಟೆಸ್ಟ್ ಲೈವರಿಯನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಈ ಬೈಕ್ ಸ್ಟಾಂಡರ್ಡ್ Panigale V4S ಬೈಕಿಗಿಂತ ಭಿನ್ನವಾಗಿದ್ದು, ಮ್ಯಾಟ್ ಬ್ಲಾಕ್ ಪೇಂಟೆಡ್ ಫೇರಿಂಗ್, ಮಾರ್ಚೆಸಿನಿ ಫೋರ್ಜ್ಡ್ ಮೆಗ್ನೀಸಿಯಮ್ ವ್ಹೀಲ್, ಬ್ರಷ್ಡ್ ಅಲ್ಯೂಮಿನಿಯಂ ಫ್ಯೂಯಲ್ ಟ್ಯಾಂಕ್‌ನಲ್ಲಿ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಈ ಬೈಕ್ ಕಾರ್ಬನ್ ಫ್ರಂಟ್ ಮಡ್‌ಗಾರ್ಡ್‌, ಬಿಲ್ಲೆಟ್ ಅಲ್ಯೂಮಿನಿಯಂ ಅಡ್ಜಸ್ಟಬಲ್ ರೈಡರ್ ಫುಟ್‌ಪೆಗ್‌ಗಳನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಇವುಗಳನ್ನು ಸವಾರನ ಆದ್ಯತೆಯ ಸ್ಥಾನಕ್ಕೆ ಅನುಗುಣವಾಗಿ ಅಡ್ಜಸ್ಟ್ ಮಾಡಬಹುದು. ಈ ಬೈಕಿನಲ್ಲಿ ಓಪನ್ ಕಾರ್ಬನ್ ಕ್ಲಚ್ ಕವರ್, ಲೈಸೆನ್ಸ್ ಪ್ಲೇಟ್ ಹೋಲ್ಡರ್, ಮಿರರ್ ರಿಮೂವಲ್ ಕ್ಯಾಪ್, ಡುಕಾಟಿ ಡೇಟಾ ಅನಾಲೈಸರ್ + (ಡಿಡಿಎ+) ಟೆಲಿಮೆಟ್ರಿ ಕಿಟ್ ಜೊತೆಗೆ ಜಿಪಿಎಸ್ ಮಾಡ್ಯೂಲ್ ಗಳಂತಹ ಹಲವಾರು ಟ್ರ್ಯಾಕ್ ಡೇಸ್ ಆಧಾರಿತ ಪರಿಕರಗಳನ್ನು ನೀಡಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಹೊಸ Ducati Panigale V4 SP ಬೈಕಿನಲ್ಲಿ 1,103 ಸಿಸಿಯ ಡೆಸ್ಮೊಸೆಡಿಸಿ ಸ್ಟ್ರಾಡೇಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 13,000 ಆರ್‌ಪಿ‌ಎಂನಲ್ಲಿ 214 ಬಿ‌ಹೆಚ್‌ಪಿ ಪವರ್ ಹಾಗೂ 9,500 ಆರ್‌ಪಿ‌ಎಂ ನಲ್ಲಿ 12.6 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಡುಕಾಟಿ ಇಂಡಿಯಾ ತನ್ನ ಡುಕಾಟಿ ಸ್ಟ್ರೀಟ್‌ ಫೈಟರ್ ವಿ2 ಬೈಕ್ ಅನ್ನು ಅನಾವರಣಗೊಳಿಸಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಈ ಬೈಕ್‌ನ ಎಲ್ಲಾ ಫೀಚರ್ ಗಳು Panigale V2 ಬೈಕಿನಿಂದ ಸ್ಫೂರ್ತಿ ಪಡೆದಿವೆ. ಈ ಬೈಕ್ ದೈನಂದಿನ ಬಳಕೆಗೆ ಹೆಚ್ಚು ಸೂಕ್ತವಾಗಿದೆ ಹಾಗೂ ಪ್ರಾಯೋಗಿಕವಾಗಿದೆ. ಸ್ಟ್ರೀಟ್‌ ಫೈಟರ್ ವಿ 2 ಬೈಕ್ ಮುಂದಿನ ತಿಂಗಳಿನಿಂದ ಅಂತರ್ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ. ಕಂಪನಿಯು ಈ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 2022 ರ ಆರಂಭದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಡುಕಾಟಿ ಸ್ಟ್ರೀಟ್‌ ಫೈಟರ್ ವಿ 2 ಬೈಕ್ ಸಹ 955 ಸಿಸಿ, ಸೂಪರ್‌ಕ್ವಾಡ್ರೊ ಎಂಜಿನ್‌ನಿಂದ ಚಾಲಿತವಾಗಿದೆ. ಈ ಬೈಕ್ ಅನ್ನು ಈಗ Panigale V2 ಬೈಕಿನಲ್ಲಿ ಅಳವಡಿಸಲಾಗಿದೆ. ಸ್ಟ್ರೀಟ್ ಫೈಟರ್ ವಿ 2 ಬೈಕಿನಲ್ಲಿರುವ ಇದೇ ಎಂಜಿನ್ Panigale V2 ಬೈಕಿನಲ್ಲಿರುವ ಎಂಜಿನ್ ಗಿಂತ ಕಡಿಮೆ ಪವರ್ ಹಾಗೂ ಟಾರ್ಕ್ ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಸ್ಟ್ರೀಟ್‌ ಫೈಟರ್ ವಿ 2 ಬೈಕಿನಲ್ಲಿರುವ ಎಂಜಿನ್ 10,750 ಆರ್‌ಪಿ‌ಎಂನಲ್ಲಿ 151 ಬಿ‌ಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿ‌ಎಂನಲ್ಲಿ 101.4 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಡುಕಾಟಿ ಇಂಡಿಯಾ ಈ ತಿಂಗಳು ಭಾರತದಲ್ಲಿ ಡುಕಾಟಿ ಹೈಪರ್‌ಮೊಟಾರ್ಡ್ 950 ಸರಣಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. Hypermotard 950 RVE ಹಾಗೂ Hypermotard 950 SP ಬೈಕುಗಳನ್ನು ಹೊಸ Hypermotard 950 ಬೈಕ್ ಸರಣಿಯಲ್ಲಿ ಬಿಡುಗಡೆಗೊಳಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

Hypermotard 950 RVE ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 12.99 ಲಕ್ಷಗಳಾದರೆ, Hypermotard 950 SP ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 16.24 ಲಕ್ಷಗಳಾಗಿದೆ. ಹೊಸ Hypermotard 950 ಬೈಕ್ ಅನ್ನು ಇತ್ತೀಚಿನ Euro 5 / BS6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ವಿನ್ಯಾಸಗೊಳಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಈ ಬೈಕ್ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಈ ಬೈಕ್ ಅನ್ನು ಹೈಪರ್‌ ಮೊಟಾರ್ಡ್ 950, ಹೈಪರ್‌ ಮೊಟಾರ್ಡ್ 950 ಆರ್‌ವಿಇ ಹಾಗೂ ಹೈಪರ್‌ ಮೊಟಾರ್ಡ್ 950 ಎಸ್‌ಪಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ - ಹೈಪರ್‌ ಮೊಟಾರ್ಡ್ 950 ಆರ್‌ವಿಇ ಹಾಗೂ ಹೈಪರ್‌ ಮೋಟಾರ್ಡ್ 950 ಎಸ್‌ಪಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಡುಕಾಟಿ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ತನ್ನ ಹೊಸ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್(Scrambler Desert Sled Fasthouse) ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.99 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಮಾದರಿಯನ್ನು ವಿಶ್ವಾದ್ಯಂತ ಕೇವಲ 800 ಯೂನಿಟ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇದು ಲಿಮಿಟೆಡ್ ಎಡಿಷನ್ ಬೈಕ್ ಆಗಿದೆ. ಸ್ಕ್ರ್ಯಾಂಬ್ಲರ್ ಡುಕಾಟಿ ಮತ್ತು ಫಾಸ್ಟ್‌ಹೌಸ್ ಬ್ರ್ಯಾಂಡ್ ಸಹಯೋಗದಲ್ಲಿ ಇದನ್ನು ಅಭಿವೃದ್ದಿ ಪಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ Panigale V4 SP ಸೂಪರ್‌ಬೈಕ್ ಬಿಡುಗಡೆಗೊಳಿಸಿದ Ducati

ಆದರೆ ಭಾರತಕ್ಕೆ ನಿಗದಿಪಡಿಸಿದ ಈ ಸೀಮಿತ ಬೈಕಿನ ಎಲ್ಲಾ ಯೂನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಡುಕಾಟಿ ಮತ್ತು ಫಾಸ್ಟ್‌ಹೌಸ್ ಒಟ್ಟಿಗೆ ಸಹಯೋಗದಲ್ಲಿ ಅಮೆರಿಕನ್ ರೈಡರ್ ಜೋರ್ಡಾನ್ ಗ್ರಹಾಂ ಮಿಂಟ್ 400 ಆಫ್-ರೋಡ್ ರೇಸ್ ನಲ್ಲಿ ಹೂಲಿಗನ್ ವಿಭಾಗವನ್ನು ಗೆದ್ದುಕೊಂಡಿತ್ತು.

Most Read Articles

Kannada
Read more on ಡುಕಾಟಿ ducati
English summary
Ducati india launches panigale v4 sp superbike in domestic market details
Story first published: Thursday, November 18, 2021, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X