Just In
- 6 hrs ago ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- 7 hrs ago Nissan Magnite: ನಿಸ್ಸಾನ್ ಮ್ಯಾಗ್ನೆಟ್ನ ಈ ಮಾದರಿಗಳನ್ನು ಹಿಂಪಡೆಯಲು ನಿರ್ಧಾರ.. ಕಾರಣವೇನು?
- 9 hrs ago Maruti Suzuki: ಮಾರುತಿ ಸುಜುಕಿಯ ಸುರಕ್ಷಿತ ಕಾರುಗಳಿವು.. 8 ಲಕ್ಷ ಆರಂಭಿಕ ಬೆಲೆ
- 9 hrs ago 11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಅಜ್ಜಿ: ಇವರ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿಧಾ
Don't Miss!
- Movies Seetha Rama ; ಸತ್ಯ ಹೇಳಲು ಹೊರಟ ಚಾಂದಿನಿಯನ್ನು ತಡೆದ ಭಾರ್ಗವಿ ಮನದಲ್ಲಿ ಸರ್ಪ್ರೈಸ್ ಪ್ಲಾನ್..!
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕ್ ಟೀಸರ್ ಬಿಡುಗಡೆ
ಇಟಲಿ ಮೂಲದ ಸೂಪರ್ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೊಸ ನೇಕಡ್ ಬೈಕ್ 2021ರ ಸ್ಟ್ರೀಟ್ಫೈಟರ್ ವಿ4 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ ಡುಕಾಟಿ ಕಂಪನಿಯು ಈ ಹೊಸ ಸ್ಟ್ರೀಟ್ಫೈಟರ್ ವಿ4 ಬೈಕಿನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.
ಡುಕಾಟಿ ಸ್ಟ್ರೀಟ್ಫೈಟರ್ ವಿ4 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್ಗಳಲ್ಲಿ ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. 2021ರ ಸ್ಟ್ರೀಟ್ಫೈಟರ್ ವಿ4 ಬೈಕಿನ ಪ್ರಮುಖ ಬದಲಾವಣೆಯೆಂದರೆ ಹೊಸ 'ಡಾರ್ಕ್ ಸ್ಟೆಲ್ತ್' ಬಣ್ಣವನ್ನು ಪಡೆದುಕೊಂಡಿದೆ. ಬ್ರ್ಯಾಂಡ್ ಇದರ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
2021ರ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕಿನ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಸ್ವೀಕರಿಸುವುದನ್ನು ಇತ್ತೀಚೆಗೆ ಪ್ರಾರಂಭಿಸಿತು. 2021ರ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಅದೇ 1,103 ಸಿಸಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ ವಿ4 ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ 12,750 ಆರ್ಪಿಎಂನಲ್ಲಿ 205 ಬಿಹೆಚ್ಪಿ ಪವರ್ ಮತ್ತು 9.500 ಆರ್ಪಿಎಂನಲ್ಲಿ 123 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್ಬಾಕ್ಸ್ಗೆ ಬ್ರ್ಯಾಂಡ್ನ ಬೈ-ಡೈರಕ್ಷನಲ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಇವಿಒ 2 ಜೊತೆಗೆ ಸ್ಲಿಪ್-ಅಸಿಸ್ಟೆಡ್ ಕ್ಲಚ್ನೊಂದಿಗೆ ಜೋಡಿಸಲಾಗಿದೆ. ಈ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್ಗಾಗಿ 5 ಇಂಚಿನ ಟಿಎಫ್ಟಿ ಕಲರ್ ಡಿಸ್ ಪ್ಲೇಯನ್ನು ಸಹ ಹೊಂದಿರಲಿದೆ.
ಸ್ಟ್ಯಾಂಡರ್ಡ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಬಿಪಿಎಫ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಸ್ಯಾಚ್ಸ್ ಮೊನೊ-ಶಾಕ್ ಸಸ್ಪೆಂಕ್ಷನ್ ಯುನಿಟ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್ 330 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಜ್ ಗಳ ಜೊತೆಯಲ್ಲಿ ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಸ್ಟೈಲ್ಮಾ ಎಂ4.30 4-ಪಿಸ್ಟನ್ ಕ್ಯಾಲಿಪರ್ಗಳು ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ ಗಳನ್ನು ಕೂಡ ಒಳಗೊಂಡಿದೆ.
2021ರ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕ್ ಐದು-ಸ್ಪೀಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಹೊಸ ಡುಕಾಟಿ ಬೈಕಿನಲ್ಲಿ ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ ಪರ್ಫಾರ್ಮೆನ್ಸ್ ಟಯರುಗಳನ್ನು ನೀಡಲಾಗಿದೆ.
MOST READ: ಹೊಸ ಹೀರೋ ಎಕ್ಸ್ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕಿನಲ್ಲಿ ರೈಡಿಂಗ್ ಮೋಡ್ಗಳು, ಪವರ್ ಮೋಡ್ಗಳು, ಕಾರ್ನರಿಂಗ್ ಎಬಿಎಸ್ ಇವಿಒ, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್(ಡಿಟಿಸಿ) ಇವಿಒ 2, ಡುಕಾಟಿ ವ್ಹೀಲಿ ಕಂಟ್ರೋಲ್ (ಡಿಡಬ್ಲ್ಯೂಸಿ) ಇವಿಒ, ಡುಕಾಟಿ ಸ್ಲೈಡ್ ಕಂಟ್ರೋಲ್ ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ಕೂಡ ಒಳಗೊಂಡಿವೆ.
2021ರ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕ್ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಟಿಎಂ 1290 ಸೂಪರ್ ಡ್ಯೂಕ್ ಆರ್, ಕವಾಸಕಿ ಝಡ್ ಹೆಚ್2, ಯಮಹಾ ಎಂಟಿ -10, ಎಪ್ರಿಲಿಯಾ ಟುವೊನೊ ವಿ4 ಮತ್ತು ಬಿಎಂಡಬ್ಲ್ಯು ಎಸ್1000ಆರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಬೈಕ್ ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿದೆ.