ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಜನಪ್ರಿಯ ಬೈಕ್‌ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಡುಕಾಟಿ ಕಂಪನಿಯು ಮುಂದಿನ ವಾರ ಭಾರತದಲ್ಲಿ ಬಿಎಸ್6 ಡುಕಾಟಿ ಪಾನಿಗಲೆ ವಿ4 ಮತ್ತು ಡಯಾವೆಲ್ 1260 ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಇದರಲ್ಲಿ ಮೊದಲಿಗೆ ಡುಕಾಟಿ ಡಯಾವೆಲ್ 1260 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್, ಟೆಸ್ಟಾಸ್ಟ್ರೆಟಾ ಎಲ್-ಟ್ವಿನ್, 1,262 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 160 ಬಿಹೆಚ್‍ಪಿ ಪವರ್ ಮತ್ತು 129 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್ ಅಸಿಸ್ಟ್ ನೊಂದಿಗೆ ಬರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಭಾರತದಲ್ಲಿ ಡುಕಾಟಿ ಡಯಾವೆಲ್ 1260 ಬೈಕ್ ಭಾರತಲ್ಲಿ ಎರಡು ರೂಪಾಂತರದಲ್ಲಿ ಬಿಡುಗಡೆಯಾಗಲಿದೆ. ಈ ಬೈಕ್ ರೇಡಿಯೇಟರ್ ಕವರ್ ಮತ್ತು ಏರ್ ಇಂಟೆಕ್ಸ್, ಸೈಲೆನ್ಸರ್ ಕವರ್, ಸ್ಪಾಯ್ಲರ್, ಸೆಂಟ್ರಲ್ ಟ್ಯಾಂಕ್ ಕವರ್, ಸೀಟ್ ಕವರ್, ಫ್ರಂಟ್ ಮತ್ತು ರಿಯರ್ ಮಡ್‌ಗಾರ್ಡ್ಸ್, ಡ್ಯಾಶ್‌ಬೋರ್ಡ್ ಕವರ್ ಮತ್ತು ಹೆಡ್‌ಲೈಟ್ ಫ್ರೇಮ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಇನ್ನು ಈ ಹೊಸ ಬೈಕಿನಲ್ಲಿ ಬಾಷ್ 6-ಆಕ್ಸಿಸ್ ಇಂಟರ್ನಲ್(6 ಡಿ ಐಎಂಯು), ಬಾಷ್ ಕಾರ್ನರಿಂಗ್ ಎಬಿಎಸ್ ಇವಿಒ, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್(ಡಿಟಿಸಿ) ಇವಿಒ, ಡುಕಾಟಿ ವೀಲೀ ಕಂಟ್ರೋಲ್ (ಡಿಡಬ್ಲ್ಯೂಸಿ) ಇವಿಒ, ಡುಕಾಟಿ ಪವರ್ ಲಾಂಚ್ (ಡಿಪಿಎಲ್) ಇವಿಒ, ಕ್ರೂಸ್ ಕಂಟ್ರೋಲ್ , ಡುಕಾಟಿ ಕ್ವಿಕ್ ಶಿಫ್ಟ್ ಅಪ್&ಡೌನ್ ಮತ್ತು ಡುಕಾಟಿ ಮಲ್ಟಿಮೀಡಿಯಾ ಸಿಸ್ಟಮ್ (ಡಿಎಂಎಸ್). ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಈ ಡುಕಾಟಿ ಡಯಾವೆಲ್ 1260 ಬೈಕ್ 247 ಕೆಜಿ ತೂಕವನ್ನು ಹೊಂದಿದೆ. ಇನ್ನು ಭಾರತದಲ್ಲಿ ಡುಕಾಟಿ ಕಂಪನಿಯು ಈ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.17 ಲಕ್ಷ - 21 ಲಕ್ಷಗಳ ನಡುವಿನ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಇನ್ನು ಡುಕಾಟಿ ಪಾನಿಗಲೆ ವಿ4 ಬೈಕಿನ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕಿನಲ್ಲಿ ಅದೇ 1,103ಸಿಸಿ, ಡೆನಿಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 113 ಬಿಹೆಚ್‌ಪಿ ಮತ್ತು 9,500 ಆರ್‌ಪಿಎಂನಲ್ಲಿ 124 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಹೊಸ ಡುಕಾಟಿ ಪಾನಿಗಲೆ ವಿ4 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಓಹ್ಲಿನ್ಸ್ ಎನ್ಐಎಕ್ಸ್ 30 ಫೋರ್ಕ್ ಮತ್ತು ಹಿಂಭಾಗದಲ್ಲಿ ಟಿಟಿಎಕ್ಸ್ 36 ಶಾಕ್ ಮತ್ತು ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್ ಅನ್ನು ಸಹ ಪಡೆಯುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಈ ಸೂಪರ ಬೈಕ್ ಫೈಬರ್ ರಿಮ್ಸ್ ಮತ್ತು ಇತರ ಕಾರ್ಬನ್ ಫೈಬರ್ ಬಿಟ್‌ಗಳನ್ನು ಸಹ ಪಡೆಯುತ್ತದೆ, ಇನ್ನು ಈ ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಗಳೊಂದಿಗೆ ಬ್ರೆಂಬೊ ಸ್ಟೈಲ್‌ಮಾ ಆರ್ ಕ್ಯಾಲಿಪರ್‌ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಡುಕಾಟಿ ಪಾನಿಗಲೆ ವಿ4, ಡಯಾವೆಲ್ 1260 ಬೈಕ್‌ಗಳು

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ರೇಸ್ ಎ ಮತ್ತು ರೇಸ್ ಬಿ ರೈಡಿಂಗ್ ಮೋಡ್‌ಗಳು ಮತ್ತು ಡುಕಾಟಿ ಕಾರ್ಸ್‌ನಿಂದ ಪಡೆದ ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಂತೆ ಕೆಲವು ಎಲೆಕ್ಟ್ರಾನಿಕ್ ನವೀಕರಣಗಳನ್ನು ಸಹ ಒಳಗೊಂಡಿದೆ.

Most Read Articles

Kannada
Read more on ಡುಕಾಟಿ ducati
English summary
BS6 Ducati Panigale V4, Diavel 1260 India Launch Next Week. Read In Kannada.
Story first published: Sunday, May 30, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X