ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಸ್ಕ್ರ್ಯಾಂಬ್ಲರ್ ಸರಣಿಯ ಮೂರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ ಎಂದು ವರದಿಯಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಡುಕಾಟಿ ಇಂಡಿಯಾ ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಐಕಾನ್ ಮತ್ತು ಐಕಾನ್ ಡಾರ್ಕ್ ಎಂಬ ಎರಡೂ ಸ್ಕ್ರ್ಯಾಂಬ್ಲರ್ ಬೈಕುಗಳನ್ನು ಬಿಡುಗಡೆಗೊಳಿಸಲಿವೆ. ಆದರೆ ಇನ್ನೊಂದು ಯಾವ ಬೈಕ್ ಎಂಬುವುದನ್ನು ಡುಕಾಟಿ ಕಂಪನಿಯು ಬಹಿರಂಗಪಡಿಸಲಿಲ್ಲ. ಇನ್ನು ಡುಕಾಟಿ ಕಂಪನಿಯು ಇತ್ತೀಚೆಗೆ ಐಕಾನ್ ಮತ್ತು ಐಕಾನ್ ಡಾರ್ಕ್ ಎಂಬ ಸ್ಕ್ರ್ಯಾಂಬ್ಲರ್ ಬೈಕುಗಳ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು.

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಇನ್ನು ಡುಕಾಟಿ ಇಂಡಿಯಾ ಬಿಡುಗಡೆಗೊಳಿಸುವ ಮೂರನೇ ಬೈಕ್ ಸ್ಕ್ರ್ಯಾಂಬ್ಲರ್ ನೈಟ್ ಶಿಫ್ಟ್ ಅಥವಾ ಸ್ಕ್ರ್ಯಾಂಬ್ಲರ್ 1100 ಪ್ರೊ ಡಾರ್ಕ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ, ಆದರೆ ಡುಕಾಟಿ ಇಂಡಿಯಾ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಕಂಪನಿಯು ಬಿಡುಗಡೆಗೊಳಿಸುವ ಮೂರನೇ ಬೈಕ್ ಸ್ಕ್ರ್ಯಾಂಬ್ಲರ್ 1100 ಆಗಿರಬಹುದು. ವಿದೇಶಿ ಮಾರುಕಟ್ಟೆಯಲ್ಲಿ ಈ ಬೈಕ್ ಉತ್ತಮವಾಗಿ ಮಾರಾಟವಾಗಿಲ್ಲ. ಆದರೆ ಭಾರತದಲ್ಲಿ ಗ್ರಾಹಕರನ್ನು ಸೆಳೆಯಬಹುದು ಎಂದು ಕಂಪನಿ ಚಿಂತಿಸಿದೆ.

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಈ ಸ್ಕ್ರ್ಯಾಂಬ್ಲರ್ 1100 ಮಾದರಿಯನ್ನು ವಿದೇಶದಲ್ಲಿ ಯುರೋ 5 ನಿಯಮದ ಅನುಗುಣವಾಗಿ ಮಾರಾಟವಾಗುತ್ತಿದೆ. ಭಾರತದಲ್ಲಿ ಈ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಬಿಡುಗಡೆಗೊಳಿಸಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಡುಕಾಟಿ ತನ್ನ ಸ್ಕ್ರ್ಯಾಂಬ್ಲರ್ ಸರಣಿಯ ಹೊಸ ವೆರಿಯೆಂಟ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದನ್ನು ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಎಂದು ಕರೆಯಲಾಗುತ್ತದೆ. ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣಗಳನ್ನು ಒಳಗೊಂಡಿದೆ.

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಕೆಫೆ ರೇಸರ್ ಮತ್ತು ಫುಲ್ ಥ್ರೊಟಲ್ ವೆರಿಯೆಂಟ್ ಗಳನ್ನು ಬದಲಾಯಿಸಿ ನೈಟ್‌ಶಿಫ್ಟ್ ಮಾದರಿಯನ್ನು ಪರಿಚಯಿಸಿದೆ. ಈ ಎರಡು ರೂಪಾಂತರಗಳ ಮಿಶ್ರಣ ನೈಟ್‌ಶಿಫ್ಟ್ ವೆರಿಯೆಂಟ್ ಎಂದು ಹೇಳಬಹುದು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಇನ್ನು ಡುಕಾಟಿ ಸ್ಕ್ರ್ಯಾಂಬ್ಲರ್ 1100 ಡಾರ್ಕ್ ಪ್ರೊ ಬೈಕುಗಳಲ್ಲಿ 1079 ಸಿಸಿ ಏರ್-ಕೂಲ್ಡ್ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 85 ಬಿಹೆಚ್‌ಪಿ ಪವರ್ ಮತ್ತು 4,750 ಆರ್‌ಪಿಎಂನಲ್ಲಿ 88 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು

ಪ್ರಸ್ತುತ ಮಾರುಕಟ್ಟೆಯಲ್ಲಿ ಡುಕಾತಿ ಪಾನಿಗಲೆ ವಿ2 ಮತ್ತು ಮಲ್ಟಿಸ್ಟ್ರಾಡಾ 950 ಎಸ್ ಬೈಕುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಡುಕಾಟಿ ಭಾರತದಲ್ಲಿ ಇತರ ಎಂಟು ಹೊದ ಬೈಕುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರಲ್ಲಿ ಮೂರು ಸ್ಕ್ರ್ಯಾಂಬ್ಲರ್ ಬೈಕುಗಳು ನಾಳೆ ಬಿಡುಗಡೆಯಾಗಲಿವೆ.

Most Read Articles

Kannada
Read more on ಡುಕಾಟಿ ducati
English summary
Ducati To Launch Three New Scramblers In India Tomorrow. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X