ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೊಸ ಸ್ಟ್ರೀಟ್‌ಫೈಟರ್ ವಿ2 ಬೈಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2(Ducati Streetfighter V2) ಬೈಕ್ ನೇಕೆಡ್ ಸ್ಟ್ರೀಟ್ ಆವೃತ್ತಿಯಾಗಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ ಫೇರಿಂಗ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಹೆಚ್ಚು ನೇರವಾದ 'ಸ್ಟ್ರೀಟ್' ರೈಡಿಂಗ್ ಪೋಷಿಸನ್ ಫ್ಲಾಟ್ ಮತ್ತು ಅಗಲವಾದ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆಇದು ಮೂಲಭೂತವಾಗಿ ಪಾನಿಗಲೆ ವಿ2 ಬೈಕಿನಿಂದ ಎಲ್ಲಾ ತಂತ್ರಜ್ಞಾನ ಎರವಲು ಪಡೆದುಕೊಂಡಿದೆ ಮತ್ತು ದೈನಂದಿನ ಬಳಕೆಗಾಗಿ ಹೆಚ್ಚು ಪ್ರಾಯೋಗಿಕ ಪ್ಯಾಕೇಜ್‌ನಲ್ಲಿ ಪ್ಯಾಕ್ ಮಾಡಲಾಗಿದೆ. ಸ್ಟ್ರೀಟ್‌ಫೈಟರ್ ವಿ2 ಬೈಕ್ ಈ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ ಅದೇ 955 ಸಿಸಿ, ಸೂಪರ್‌ಕ್ವಾಡ್ರೊ ಎಂಜಿನ್‌ ಅನ್ನು ಹೊಂದಿದೆ. ಇದೇ ಎಂಜಿನ್ ಅದು ಪ್ರಸ್ತುತ ಪಾನೆಗಲೆ ವಿ2 ನಲ್ಲಿಯು ಕೂಡ ಇದೆ. ಆದರೆ ಪೂರ್ಣ-ಫೇರ್ಡ್ ಸಿಬ್ಲಿಂಗ್‌ಗಿಂತ ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್‌ನೊಂದಿಗೆ. ಸ್ಟ್ರೀಟ್‌ಫೈಟರ್ ವಿ2 ನಲ್ಲಿ ಎಂಜಿನ್ 10,750 ಆರ್‌ಪಿಎಂನಲ್ಲಿ 151 ಬಿಹೆಚ್‍ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 101.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಬೈ-ಡೈರೆಕ್ಷನಲ್ ಅಪ್/ಡೌನ್ ಕ್ವಿಕ್‌ಶಿಫ್ಟರ್‌ನೊಂದಿಗೆ ಪಡೆಯುತ್ತದೆ, ಆದರೆ ಪ್ಯಾನಿಗಾಲೆ ವಿ2 ಗೆ ಹೋಲಿಸಿದರೆ, ಸ್ಟ್ರೀಟ್‌ಫೈಟರ್ ವಿ2 ಕಡಿಮೆ ಅಂತಿಮ ಅನುಪಾತವನ್ನು ಹೊಂದಿದೆ. ಇದು ರಸ್ತೆಯ ವೇಗದಲ್ಲಿ ಉತ್ತಮ ಟಾರ್ಕ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ರಸ್ತೆ ಬಳಕೆಗೆ ಉತ್ತಮ ಎಂಜಿನ್ ಪ್ರತಿಕ್ರಿಯೆ ಮತ್ತು ಥ್ರೊಟಲ್ ಪ್ರತಿಕ್ರಿಯೆಯನ್ನು ಒದಗಿಸುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ ಎಲೆಕ್ಟ್ರಾನಿಕ್ಸ್ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಿಕ್ಸ್-ಆಕ್ಸಿಸ್ ಇಂಟಿರಿಯಲ್ ಮೆಷರ್ ಮೆಂಟ್ ಯುನಿಟ್ ಅನ್ನು ಒಳಗೊಂಡಿದೆ, ಇದು ಕಾರ್ನರಿಂಗ್ ಎಬಿಎಸ್ ಅನ್ನು ಒಳಗೊಂಡಂತೆ ಎಲ್ಲಾ ಎಲೆಕ್ಟ್ರಾನಿಕ್ ನಿಯಂತ್ರಣಗಳನ್ನು "ಸ್ಲೈಡ್ ಬೈ ಬ್ರೇಕ್" ಕಾರ್ಯನಿರ್ವಹಣೆಯೊಂದಿಗೆ ನಿರ್ವಹಿಸುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಇವಿಒ, ಡುಕಾಟಿ ವೀಲಿ ಕಂಟ್ರೋಲ್ ಮತ್ತು ಇಂಜಿನ್ ಬ್ರೇಕ್ ಕಂಟ್ರೋಲ್. ಸ್ಟ್ರೀಟ್‌ಫೈಟರ್ ವಿ2 ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ, ಮೀಸಲಾದ ನಿಯಂತ್ರಣ ಸೆಟ್ಟಿಂಗ್‌ಗಳೊಂದಿಗೆ ಸ್ಪೋರ್ಟ್, ರೋಡ್ ಮತ್ತು ವೆಟ್. ಬೈಕ್ ಡಿಆರ್ಎಲ್ ನೊಂದಿಗೆ ಪೂರ್ಣ-ಎಲ್ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು 4.3-ಇಂಚಿನ ಟಿಎಫ್ಟಿ ಡಿಸ್ ಪ್ಲೇಯೊಂದಿಗೆ ಬರುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಎಂಜಿನ್ ಅಲ್ಯೂಮಿನಿಯಂ ಮೊನೊಕೊಕ್ ಫ್ರೇಮ್ನ ಒತ್ತಡದ ಯುನಿಟ್ ಆಗಿ ಕಾರ್ಯನಿರ್ವಹಿಸುತ್ತದೆ. ಸಿಂಗಲ್-ಸೈಡ್ ಸ್ವಿಂಗರ್ಮ್ ಪಾನಿಗಾಲೆ 16 ಮಿಮೀ ಉದ್ದವಾಗಿದೆ ಮತ್ತು ಆನ್ ರೋಡ್ ಬಳಕೆಯಲ್ಲಿ ಉತ್ತಮ ಸ್ಥಿರತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಇನ್ನು ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಶೋವಾ ಬಿಪಿಎಫ್ ಫೋರ್ಕ್ ಮತ್ತು ಸ್ಯಾಚ್ಸ್ ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ, ರಸ್ತೆಯಲ್ಲಿ ಹೆಚ್ಚಿನ ಸೌಕರ್ಯಕ್ಕಾಗಿ ಕ್ಯಾಲಿಬೆರೆಟ್ ನಿರ್ಣಯಿಸಲಾಗಿದೆ, ಜೊತೆಗೆ ರೇಸ್‌ಟ್ರಾಕ್ ಬಳಕೆಗೆ ಸುಲಭ ಹೊಂದಾಣಿಕೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ 5-ಸ್ಪೋಕ್ 17-ಇಂಚಿನ ವ್ಹೀಲ್ ಗಳೊಂದಿಗೆ ಪಿರೆಲ್ಲಿ ಡಯಾಬ್ಲೊ ರೊಸ್ಸೊ IV ಟೈರ್‌ಗಳನ್ನು ಹೊಂದಿದೆ. ಈ ಬೈಕ್ ಆನ್ ರೋಡ್ ಬಳಕೆಗೆ ಹೆಚ್ಚು ಸೂಕ್ತವಾಗಿದೆ, ಬ್ರೇಕಿಂಗ್ ಸಿಸ್ಟಮ್ ಅನ್ನು ಪಾನಿಗಾಲೆ ವಿ2 ನಿಂದ ತೆಗೆದುಕೊಳ್ಳಲಾಗಿದೆ, ಬ್ರೆಂಬೊ M4.32 ಮೊನೊಬ್ಲಾಕ್ ರೇಡಿಯಲ್ ಕ್ಯಾಲಿಪರ್‌ಗಳೊಂದಿಗೆ 320 ಎಂಎಂ ಡಿಸ್ಕ್‌ ಬ್ರೇಕ್ ಅನ್ನು ಹೊಂದಿವೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಸ್ಟ್ರೀಟ್‌ಫೈಟರ್ ವಿ2 ವಿನ್ಯಾಸವು ಡುಕಾಟಿ ಸ್ಟ್ರೀಟ್‌ಫೈಟರ್ ವಿನ್ಯಾಸವು ದೊಡ್ಡದಾದ ಸ್ಟ್ರೀಟ್‌ಫೈಟರ್ ವಿ4 ಮಾದರಿಯಿಂದ ಪ್ರೇರಿತವಾಗಿದೆ. ರೇಡಿಯೇಟರ್‌ನ ಪಕ್ಕದಲ್ಲಿರುವ ವ್ಹೀಂಗ್ ಗಳು ಮಾತ್ರ ಕಾಣೆಯಾಗಿರುವ ಅಂಶಗಳಾಗಿವೆ, ಆದರೆ ಇವುಗಳನ್ನು ವಿ2 ಗೆ ಅಕ್ಸೆಸರೀಸ್ ಆಗಿ ನೀಡಲಾಗುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಡುಕಾಟಿ ತನ್ನ ಹೈಪರ್‌ಮೋಟಾರ್ಡ್ 950 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950(Ducati Hypermotard 950) ಬೈಕ್ ಆರಂಭಿಕ ಬೆಲೆಯು ಎಕ್ಸ್ ಶೂರೂಂ ಪ್ರಕಾರ ರೂ.12.99 ಲಕ್ಷವಾಗಿದೆ. ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೈಪರ್‌ಮೋಟಾರ್ಡ್ 950 ಎಸ್‌ಪಿ ಮತ್ತು ಹೈಪರ್‌ಮೋಟಾರ್ಡ್ 950 ಆರ್‌ವಿಇ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಹೈಪರ್‌ಮೋಟಾರ್ಡ್ 950, ಹೈಪರ್‌ಮೋಟಾರ್ಡ್ 950 ಆರ್‌ವಿಇ, ಮತ್ತು ಹೈಪರ್‌ಮೋಟಾರ್ಡ್ 950 ಎಸ್‌ಪಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಈ ಬೈಕ್ ವಿನ್ಯಾಸವು 'ಮೋಟಾರ್ಡ್‌ಗಳಿಂದ ಪ್ರೇರಿತವಾಗಿದೆ' ಎಂದು ಡುಕಾಟಿ ಕಂಪನಿ ಹೇಳಿಕೊಂಡಿದೆ. ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಬೈಕಿನಲ್ಲಿ 937 ಸಿಸಿ ಡುಕಾಟಿ ಟೆಸ್ಟಾಸ್ಟ್ರೆಟ್ಟಾ 11-ಡಿಗ್ರಿ V-ಟ್ವಿನ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ Ducati Streetfighter V2 ಬೈಕ್

ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ ಈ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಈ ನೇಕೆಡ್ ಸ್ಟ್ರೀಟ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಡುಕಾಟಿ ducati
English summary
Ducati unveiled new streetfighter v2 globally details
Story first published: Monday, November 15, 2021, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X