ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಪಾನಿಗಲೆ ವಿ2 ಬೈಕಿನ ಲಿಮಿಟೆಡ್ ಎಡಿಷನ್ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಡುಕಾಟಿ ಕಂಪನಿಯು ಪಾನಿಗಲೆ ವಿ2 ಬೇಲಿಸ್ 1ನೇ ಚಾಂಪಿಯನ್‌ಶಿಪ್ ಗೆದ್ದ 20ನೇ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ ಈ ಲಿಮಿಟೆಡ್ ಎಡಿಷನ್ ಅನ್ನು ಪರಿಚಯಿಸಲಾಗಿದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಪಾನಿಗಲೆ ವಿ2 ಬೇಲಿಸ್ ಮಾದರಿಯು ಟ್ರಾಯ್ ಬೇಲಿಸ್ ಅವರ ವೃತ್ತಿಜೀವನಕ್ಕೆ ಗೌರವ ಸಲ್ಲಿಸುತ್ತದೆ ಮತ್ತು ಆಸ್ಟ್ರೇಲಿಯಾದ ರೈಡರ್ ಬೇಲಿಸ್ ಗೆದ್ದ ಮೂರು ವಿಶ್ವ ಎಸ್‌ಬಿಕೆ ಪ್ರಶಸ್ತಿಗಳಲ್ಲಿ ಮೊದಲನೆದರ ಸಂಭ್ರಮದ ಭಾಗವಾಗಿದೆ. ಈ ಎಡಿಷನ್ 996 ಆರ್ ನಿಂದ ಸ್ಫೂರ್ತಿ ಪಡೆದ ಗ್ರಾಫಿಕ್ಸ್ ನೊಂದಿಗೆ ವಿಶೇಷ ಲೆವೆರಿಯನ್ನು ಪಡೆದುಕೊಂಡಿದೆ. ಬೇಲಿಸ್ ಡುಕಾಟಿ ರೆಡ್ ಆಗಿದ್ದರೆ ಗ್ರೀನ್ ಮತ್ತು ವೈಟ್ ಬಣ್ಣಗಳು ಕಂಪನಿಯ ಸಂಪ್ರದಾಯಿಕ ಬಣ್ಣಗಳಾಗಿವೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಇನ್ನು ಈ ಮಾದರಿಯಲ್ಲಿರುವ 21 ನೇ ಸಂಖ್ಯೆ (ಟ್ರಾಯ್ ಬೇಲಿಸ್ನ ರೇಸ್ ಸಂಖ್ಯೆ), ಶೆಲ್ ಲೋಗೊ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಟ್ರಾಯ್‌ನ ಆಟೋಗ್ರಾಫ್ ಅನ್ನು ಸಹ ಒಳಗೊಂಡಿದೆ. ಲೆಟ್ ಅಲ್ಯೂಮಿನಿಯಂ ಟ್ರಿಪಲ್ ಕ್ಲ್ಯಾಂಪ್ ಈ ಮಾದರಿಯ ಪ್ರಗತಿಪರ ಸಂಖ್ಯೆಯನ್ನು ತೋರಿಸುತ್ತದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಡುಕಾಟಿ ಪಾನಿಗಲೆ ವಿ2 ಬೇಲಿಸ್ 1 ನೇ ಚಾಂಪಿಯನ್‌ಶಿಪ್ 20ನೇ ವಾರ್ಷಿಕೋತ್ಸವದ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ಮೂರು ಕಿಲೋಗ್ರಾಂಗಳಷ್ಟು ಹಗುರವಾಗಿದೆ. ಕಡಿಮೆ ತೂಕವನ್ನು ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಸಿಂಗಲ್ ಸೀಟ್ ಸಂರಚನೆಯಿಂದ ಇದು ಸಾಧ್ಯವಾಗಿದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಈ ಸ್ಪೆಷಲ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹಾರ್ಡ್‌ವೇರ್ ಓಹ್ಲಿನ್ಸ್ ಎನ್ಎಕ್ಸ್ 30 ಫೋರ್ಕ್ಸ್ ಮತ್ತು ಟಿಟಿಎಕ್ಸ್ 36 ಶಾಕ್ ಅಬ್ಸಾರ್ಬರ್ ಮತ್ತು ಸ್ಟೀಯರಿಂಗ್ ಡ್ಯಾಂಪರ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಡುಕಾಟಿ ಪಾನಿಗಲೆ ವಿ2 ಬೇಲಿಸ್ ಎಡಿಷನ್ 955 ಸಿಸಿ, ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,750 ಆರ್‌ಪಿಎಂನಲ್ಲಿ 152.8 ಬಿಹೆಚ್‌ಪಿ ಮತ್ತು 9,000 ಆರ್‌ಪಿಎಂನಲ್ಲಿ 104 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಇನ್ನು ಈ ಲಿಮಿಟೆಡ್ ಎಡಿಷನ್ ಎಲೆಕ್ಟ್ರಾನಿಕ್ ಪ್ಯಾಕೇಜ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಬಿಎಸ್, ಬೈ-ಡೈರಕ್ಷನ್ ಕ್ವಿಕ್‌ಶಿಫ್ಟರ್, ಟ್ರ್ಯಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್ ಮತ್ತು ರೇಸ್, ಸ್ಪೋರ್ಟ್ ಮತ್ತು ಸ್ಟ್ರೀಟ್ ಎಂಬ ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಡುಕಾಟಿ ತನ್ನ ಬಹುನಿರೀಕ್ಷಿತ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ಬೆಲೆಯು ರೂ.18.99 ಲಕ್ಷಗಳಾಗಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ವಿ4 ಮತ್ತು ವಿ4 ಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಅನಾವರಣವಾಯ್ತು ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್

ಡುಕಾಟಿ ಪಾನಿಗಲೆ ವಿ2 ಬೇಲಿಸ್ ಲಿಮಿಟೆಡ್ ಎಡಿಷನ್ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಲಿಮಿಟೆಡ್ ಎಡಿಷನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
Read more on ಡುಕಾಟಿ ducati
English summary
Limited-edition Ducati Panigale V2 Bayliss Revealed. Read In Kannada.
Story first published: Friday, July 23, 2021, 21:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X