ಆಕರ್ಷಕ ಬೆಲೆಯಲ್ಲಿ 150 ಕಿ.ಮೀ ಮೈಲೇಜ್ ಪ್ರೇರಿತ ಹೊಸ ಅರ್ಥ್ ಎನರ್ಜಿ ಇವಿ ಸ್ಕೂಟರ್‌ಗಳು ಬಿಡುಗಡೆ

ಅರ್ಥ್ ಎನರ್ಜಿ(Earth Energy) ಕಂಪನಿಯು ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ಗ್ಲೈಡ್ ಎಸ್‌ಎಕ್ಸ್ ಮತ್ತು ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಸ್ಕೂಟರ್ ಬಿಡುಗಡೆ ಮಾಡಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಹೊಸ ಗ್ಲೈಡ್ ಎಸ್‌ಎಕ್ಸ್ ಮತ್ತು ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ದರ ಮಾಹಿತಿ ಹಂಚಿಕೊಂಡಿರುವ ಅರ್ಥ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್‌ಗಳನ್ನು ಮುಂದಿನ ತಿಂಗಳು ಜನವರಿಯಿಂದ ವಿತರಣೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಹೊಸ ಸ್ಕೂಟರ್‌ಗಳ ಬೆಲೆ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಹೊಸ ಗ್ಲೈಡ್ ಎಸ್‌ಎಕ್ಸ್ ಮತ್ತು ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಇವಿ ಸ್ಕೂಟರ್ ಮಾದರಿಗಳು ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 78 ಸಾವಿರದಿಂದ ಟಾಪ್ ಎಂಡ್ ಮಾದರಿಯು ರೂ. 1 ಲಕ್ಷ ಬೆಲೆ ಹೊಂದಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳಲ್ಲಿ ರಾಜ್ಯ ಮಟ್ಟದ ಸಬ್ಸಡಿ ಆಯ್ಕೆ ಲಭ್ಯವಿದ್ದು, ರಾಜ್ಯ ಮಟ್ಟದ ಸಬ್ಸಡಿ ಹೊಂದಿರುವ ರಾಜ್ಯಗಳಲ್ಲಿ ಹೊಸ ಇವಿ ಸ್ಕೂಟರ್ ಬೆಲೆ ತುಸು ಕಡಿಮೆ ದರ ಹೊಂದಿರಲಿವೆ. ಕರ್ನಾಟಕ ಸೇರಿದಂತೆ ವಿವಿಧ ಏಳು ರಾಜ್ಯಗಳು ರಾಜ್ಯ ಮಟ್ಟದ ಸಬ್ಸಡಿ ಹೊಂದಿದ್ದು, ರಾಜ್ಯ ಮಟ್ಟದ ಸಬ್ಸಡಿ ಆಯ್ಕೆ ಹೊಂದಿರುವ ರಾಜ್ಯಗಳಲ್ಲಿ ಸಬ್ಸಡಿ ಹೊಂದಿದರ ರಾಜ್ಯಗಳಿಂತ ರೂ. 2 ಸಾವಿರದ ರೂ.5 ಸಾವರಿದಷ್ಟು ಹೆಚ್ಚುವರಿ ಧನಸಹಾಯ ದೊರೆಯಲಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ರಾಜ್ಯ ಮಟ್ಟದ ಸಬ್ಸಡಿ ಹೊಂದಿರುವ ಕರ್ನಾಟಕದಲ್ಲಿ ಗ್ಲೈಡ್ ಎಸ್‌ಎಕ್ಸ್ ಮತ್ತು ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಇವಿ ಸ್ಕೂಟರ್ ಮಾದರಿಗಳು ಕ್ರಮವಾಗಿ ರೂ. 79,999 ಮತ್ತು ರೂ. 98,175 ಬೆಲೆ ಹೊಂದಿದ್ದು, ಇದು ಹೆಚ್ಚುವರಿ ಸಬ್ಸಡಿ ಹೊಂದಿರುವ ಗುಜರಾತ್‌ನಲ್ಲಿ ಇನ್ನು ಅತಿ ಕಡಿಮೆ ದೊರೆಯಲಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಗ್ಲೈಡ್ ಎಸ್‌ಎಕ್ಸ್ ಮತ್ತು ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಇವಿ ಸ್ಕೂಟರ್ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ತಾಂತ್ರಿಕವಾಗಿ ಎರಡು ಸ್ಕೂಟರ್‌ಗಳು ಒಂದೇ ಆಗಿದ್ದರೂ ಸಹ ವಿಭಿನ್ನವಾದ ವಿನ್ಯಾಸವನ್ನು ಹೊಂದಿರಲಿವೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಹೊಸ ಸ್ಕೂಟರ್‌ಗಳಲ್ಲಿ ಅರ್ಥ್ ಎನರ್ಜಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 3.9 kW ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದ್ದು, ಎಸ್ಎಕ್ಸ್ ಮಾದರಿಯ ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್‌ನೊಂದಿಗೆ ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಹಾಗೆಯೇ ಎಸ್ಎಕ್ಸ್ ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 100 ಕಿ.ಮೀ ಮೈಲೇಜ್‍ನೊಂದಿಗೆ ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ತಲುಪಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 40 ನಿಮಿಷಗಳಲ್ಲಿ ಮತ್ತು ಸಾಮಾನ್ಯ ಎಸಿ ಚಾರ್ಜರ್ ಮೂಲಕ 2 ಗಂಟೆ 30 ನಿಮಿಷದಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಬಹುದು.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಗ್ಲೈಡ್ ಎಸ್‌ಎಕ್ಸ್ ಮಾದರಿಯು ಲೋ ಸ್ಪೀಡ್ ಮಾದರಿಯಾಗಿರುವುದರಿಂದ ಈ ಸ್ಕೂಟರ್ ನೋಂದಣಿ ಮತ್ತು ಚಾಲನೆಗೆ ಡಿಎಲ್ ಅವಶ್ಯವಿಲ್ಲ ಎಂದು ಕಂಪನಿಯು ಮಾಹಿತಿ ನೀಡಿದ್ದು, ಹೈ ಸ್ಪೀಡ್ ಮಾದರಿಯಾದ ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಮಾದರಿಗೆ ಸಾಮಾನ್ಯ ಸ್ಕೂಟರ್‌ಗಳಂತೆ ನೋಂದಣಿ, ಚಾಲನೆಗೆ ಡಿಎಲ್ ಅಗತ್ಯವಾಗಿರುತ್ತದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಹೀಗಾಗಿ ಲೋ ಸ್ಪೀಡ್ ಗ್ಲೈಡ್ ಎಸ್‌ಎಕ್ಸ್ ಮಾದರಿಯು ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶಗಳಲ್ಲಿ ಒಂದು ವ್ಯಾಪ್ತಿಯಲ್ಲಿ ಸಂಚರಿಸುವ ಗ್ರಾಹಕರ ಆಯ್ಕೆಗೆ ಉತ್ತಮವಾಗಿದ್ದು, ಗ್ಲೈಡ್ ಎಸ್‌ಎಕ್ಸ್ ಪ್ಲಸ್ ಮಾದರಿಯು ಲೋ ಸ್ಪೀಡ್ ಮಾದರಿಗಿಂತ ತುಸು ಕಡಿಮೆ ಮೈಲೇಜ್ ಹೊಂದಿದ್ದರೂ ಸಾಮಾನ್ಯ ಗ್ರಾಹಕರ ಬೇಡಿಕೆಯೆಂತೆ ಗರಿಷ್ಠ ಮಟ್ಟದ ಫೀಚರ್ಸ್ ಹೊಂದಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಗ್ಲೈಡ್ ಎಸ್ಎಕ್ಸ್ ಪ್ಲಸ್ ಆವೃತ್ತಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯತೆಗಳಿದ್ದು, ಎಲ್ಇಡಿ ಲೈಟಿಂಗ್ ಮತ್ತು ಬ್ಯಾಟರಿ ಚಾರ್ಜ್, ವೇಗ ಮತ್ತು ಶ್ರೇಣಿಯನ್ನು ತೋರಿಸುವ 5-ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಒಳಗೊಂಡಿದ್ದು, ಸುರಕ್ಷತೆಗಾಗಿ ಲೈವ್ ಲೋಕೋಷನ್, ವೆಹಿಕಲ್ ಟ್ರ್ಯಾಕಿಂಗ್, ಥೇಪ್ಟ್ ಅಲಾಂ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒಳಗೊಂಡಿವೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಜೊತೆಗೆ ಸಿಬಿಎಸ್ ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸಲಿದ್ದು, ಹೊಸ ಸ್ಕೂಟರ್ ಮೂಲಕ ಅರ್ಥ್ ಎನರ್ಜಿ ಕಂಪನಿಯು ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಇನ್ನು ಅರ್ಥ್ ಎನರ್ಜಿ ಕಂಪನಿಯು ವಿವಿಧ ಇವಿ ಸ್ಕೂಟರ್ ಮತ್ತು ಬೈಕ್ ಮಾದರಿಗಳ ಮಾರಾಟ ಆರಂಭಿಸಿದ ನಂತರ ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸಿದ್ದು, ಸದ್ಯಕ್ಕೆ ದೇಶದ ಪ್ರಮುಖ ಹತ್ತು ರಾಜ್ಯಗಳಲ್ಲಿ ಕೆಲವು ಕೆಲವು ಮಾರಾಟ ಮಳಿಗೆಗಳನ್ನು ಹೊಂದಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಸೀಮಿತವಾದ ಮಾರುಕಟ್ಟೆ ಸೌಲಭ್ಯದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಅರ್ಥ್ ಎನರ್ಜಿ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗುತ್ತಿದ್ದು, 2022ರ ವೇಳೆಗೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ರೂಪಿಸಿದೆ.

150 ಕಿ.ಮೀ ಮೈಲೇಜ್ ಪ್ರೇರಿತ ಅರ್ಥ್ ಎನರ್ಜಿ ಇವಿ ಸ್ಕೂಟರ್‌ ಬಿಡುಗಡೆ

ಮುಂಬೈನಲ್ಲಿಯೇ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿರುವ ಅರ್ಥ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಹೊಸ ವಾಹನಗಳ ಉತ್ಪಾದನೆಗಾಗಿ ಗರಿಷ್ಠ ಶೇ.96 ರಷ್ಟು ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಗೊಂಡ ಬಿಡಿಭಾಗಗಳನ್ನೇ ಬಳಕೆ ಮಾಡುತ್ತಿದೆ.

Most Read Articles

Kannada
English summary
Earth energy new glyde sx and glyde sx plus electric scooters price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X