ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ವಿನೂತನ ಉತ್ಪನ್ನಗಳೊಂದಿಗೆ ಮುಂಚೂಣಿ ಸಾಧಿಸುತ್ತಿರುವ ಇಬೈಕ್‌ಗೊ(eBikeGo) ಕಂಪನಿಯು ಕೂಡಾ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಇವಿ ಉತ್ಪನ್ನಗಳನ್ನು ಉನ್ನತೀಕರಿಸುತ್ತಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ಇಬೈಕ್‌ಗೊ ಕಂಪನಿಯು ವಿವಿಧ ಇವಿ ವಾಹನಗಳೊಂದಿಗೆ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಹೊಸ ಇವಿ ಸ್ಕೂಟರ್‌ಗಳಲ್ಲಿ ತಂತ್ರಜ್ಞಾನ ಮತ್ತು ಸಂಪರ್ಕಿತ ಸಾಧನಗಳ ಸುಧಾರಣೆಗಾಗಿ ಕಂಪನಿಯು ಇತ್ತೀಚೆಗೆ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಕಸ್ಟರ್ಡ್ ಟೆಕ್ನಾಲಜೀಸ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದ್ದು, ಇವಿ ಉದ್ಯಮವನ್ನು ಮತ್ತಷ್ಟು ಅತ್ಯಾಧುನಿಕವಾಗಿ ಅಭಿವೃದ್ದಿಗೊಳಿಸಲು ಕಸ್ಟರ್ಡ್ ಟೆಕ್ನಾಲಜೀಸ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಇಬೈಕ್‌ಗೊ ಕಂಪನಿಯು ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ಪ್ರಸ್ತುತ ಇವಿ ವಾಹನಗಳನ್ನು ಸ್ಮಾರ್ಟ್ ಸಂಪರ್ಕಿತ ವಾಹನಗಳನ್ನಾಗಿ ಪರಿವರ್ತಿಸಲು ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗುವುದಾಗಿ ಹೇಳಿಕೊಂಡಿರುವ ಇಬೈಕ್‌ಗೊ ಕಂಪನಿಯು ತನ್ನ ಪಾಲುದಾರ ಬಿಟುಬಿ ಸಂಸ್ಥೆಗಳೊಂದಿನ ವ್ಯವಹಾರವನ್ನು ಸರಳಗೊಳಿಸಲು ಸುಧಾರಿತ ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಅಭಿವೃದ್ದಿಪಡಿಸಲು ಮುಂದಾಗಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ವಾಹನ ಸಂಪರ್ಕಿತ ಸೌಲಭ್ಯಗಳನ್ನು ಅಭಿವೃದ್ದಿಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ಕಸ್ಟರ್ಡ್ ಟೆಕ್ನಾಲಜೀಸ್ ಸಂಸ್ಥೆಯು ಇದೀಗ ಇಬೈಕ್‌ಗೊ ಪಾಲಾಗಿದ್ದು, ಹೊಸ ಕಂಪನಿಯ ಸ್ವಾಧೀನಕ್ಕಾಗಿ ಇಬೈಕ್‌ಗೊ ಕಂಪನಿಯು ಸುಮಾರು ರೂ. 1.50 ಕೋಟಿ ಪಾವತಿಸಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ಭವಿಷ್ಯದಲ್ಲಿ ಇವಿ ವಾಹನಗಳ ಸ್ಮಾರ್ಟ್ ಟೆಕ್ನಾಲಜಿಯನ್ನು ಸುಧಾರಿಸಲು ಉಭಯ ಕಂಪನಿಗಳು ಶ್ರಮಿಸಲಿದ್ದು, ಇಬೈಕ್‌ಗೊ ಕಂಪನಿಯು ವ್ಯಯಕ್ತಿಕ ಬಳಕೆಯ ಇವಿ ವಾಹನಗಳೊಂದಿಗೆ ಫ್ಲೀಟ್ ವಿಭಾಗಕ್ಕೂ ಪ್ರತ್ಯೇಕ ಇವಿ ವಾಹನಗಳನ್ನು ಪರಿಚಯಿಸಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ಹೀಗಾಗಿ ಉದ್ಯಮ ವ್ಯವಹಾರಗಳ ದಕ್ಷತೆ ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿರುವ ಇಬೈಕ್‌ಗೊ ಮತ್ತು ಕಸ್ಟರ್ಡ್ ಟೆಕ್ನಾಲಜೀಸ್ ಸಂಸ್ಥೆಗಳು ಒಂದಾಗಿದ್ದು,ಬಳಕೆದಾರರ ದಕ್ಷತೆಯನ್ನು ಟ್ರ್ಯಾಕ್ ಮಾಡಲು ಮತ್ತು ಆಪ್ಟಿಮೈಸ್ ಮಾಡಲು ಎಐ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ಸವಾರ ಮತ್ತು ವಾಹನದ ನಡವಳಿಕೆಯನ್ನು ವಿಶ್ಲೇಷಿಸುವ ಸೌಲಭ್ಯಗಳನ್ನು ಸಿದ್ದಪಡಿಸಲಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇಬೈಕ್‌ಗೊ

ಇನ್ನು ಇಬೈಕ್‌ಗೊ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಲಾದ ರಗಡ್ ಇವಿ ಸ್ಕೂಟರ್ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಕೇವಲ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಯುನಿಟ್‌ಗಳಿಗೆ ಬೇಡಿಕೆ ಪಡೆದುಕೊಂಡಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇ ಬೈಕ್‌ ಗೊ

ವಿನೂತನ ವಿನ್ಯಾಸದೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ರಗಡ್ ಇವಿ ಸ್ಕೂಟರ್ ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಮುನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದ ಇಬೈಕ್‌ಗೊ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ರಗಡ್ ಮೊಟೊ ಸ್ಕೂಟರ್ ಪರಿಚಯಿಸಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇ ಬೈಕ್‌ ಗೊ

ಹೊಸ ಇಬೈಕ್‌ಗೊ ಕಂಪನಿಯು ಹೊಸ ಇವಿ ಮೊಟೊ-ಸ್ಕೂಟರ್ ಮಾದರಿಯನ್ನು ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯಲ್ಲಿಯೇ ಅಭಿವೃದ್ದಿಗೊಳಿಸಿದ್ದು, ಮೇಕ್ ಇನ್ ಇಂಡಿಯಾ ಅಭಿಯಾನದಡಿ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇ ಬೈಕ್‌ ಗೊ

ರಗಡ್ ಎಲೆಕ್ಟ್ರಿಕ್ ಮೊಟೊ-ಸ್ಕೂಟರ್ ಮಾದರಿಯು ಐಸಿಎಟಿ(ICAT) ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆಗೆ ಅರ್ಹವಾಗಿರುವುದು ಕೂಡಾ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇ ಬೈಕ್‌ ಗೊ

ಹೊಸ ಎಲೆಕ್ಟ್ರಿಕ್ ಮೊಟೊ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಆಧುನಿಕ ಸಲಕರಣೆಗಳೊಂದಿಗೆ ಬಿಡುಗಡೆಯಾಗಿದ್ದು, ಹೊಸ ಎಲೆಕ್ಟ್ರಿಕ್ ಮೊಟೊ-ಸ್ಕೂಟರ್ ಮಾದರಿಯು ಹಲವಾರು ಹೊಸ ವಿಶೇಷತೆಗಳನ್ನು ಒಳಗೊಂಡಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇ ಬೈಕ್‌ ಗೊ

ರಗಡ್ ಎಲೆಕ್ಟ್ರಿಕ್ ಮೊಟೊ-ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.79,999 ಬೆಲೆ ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ರಗಡ್ ಜಿ1 ಮತ್ತು ರಗಡ್ ಜಿ1 ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 99,999 ಗಳಾಗಿದೆ.

ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಉನ್ನತೀಕರಿಸಲು ಹೊಸ ಯೋಜನೆ ಆರಂಭಿಸಿದ ಇ ಬೈಕ್‌ ಗೊ

ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3kW ಹಬ್-ಮೌಂಟೆಡ್ ಬ್ರಷ್ ರಹಿತ ಡಿಸಿ ಮೋಟಾರ್ ನೊಂದಿಗೆ ಡ್ಯುಯಲ್ 1.9kWh ಲೀ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಜೋಡಿಸಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 160 ಕಿ.ಮೀ ಮೈಲೇಜ್ ರೇಂಜ್ ನೀಡುತ್ತದೆ. ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಎರಡು ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಇಕೋ ಮೋಡ್‌ನಲ್ಲಿ ರಗಡ್ ಸ್ಕೂಟರ್ ಮಾದರಿಯು ಗರಿಷ್ಠ 160 ಕಿ,ಮೀ ರೇಂಜ್ ನೀಡಿದ್ದಲ್ಲಿ ಪವರ್ ಮೋಡ್ ನಲ್ಲಿ ಗರಿಷ್ಠ 135 ಕಿ.ಮೀ ರೇಂಜ್ ಅನ್ನು ಹೊಂದಿದೆ.

Most Read Articles

Kannada
English summary
Ebikego ev two wheeler mobility platform has acquired tech firm kustard technologies
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X