Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

eBikeGo ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೊಬಿಲಿಟಿ ಪ್ಲಾಟ್‌ಫಾರಂಗಳಲ್ಲಿ ಒಂದಾಗಿದೆ. ಕಂಪನಿಯು ಭಾರತದಲ್ಲಿ ಸ್ಪ್ಯಾನಿಷ್ ಆಟೋಮೋಟಿವ್ ಕಂಪನಿಯಾದ ಟೊರೊಟ್‌ನಿಂದ Muvi ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಉತ್ಪನ್ನ ಪರವಾನಗಿ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಮೂಲಕ Muvi ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುವುದು.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಈ ಎಲೆಕ್ಟ್ರಿಕ್ ಸ್ಕೂಟರ್ ಭಾರತ ಹಾಗೂ ಪ್ರಪಂಚದಾದ್ಯಂತ ಮಾರಾಟವಾಗಲಿದೆ. ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ 5% ನಷ್ಟು ಮಾರುಕಟ್ಟೆ ಪಾಲನ್ನು ಹೊಂದಲು ಉದ್ದೇಶಿಸಿರುವುದಾಗಿ eBikeGo ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. Muvi ಕಂಪನಿಯ ಸಹಭಾಗಿತ್ವದೊಂದಿಗೆ eBikeGo ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಬಲವಾದ ನೆಲೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

Muvi ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ

Muvi ಎಲೆಕ್ಟ್ರಿಕ್ ಸ್ಕೂಟರಿನಲ್ಲಿ IoT ಹಾಗೂ AI ಸಕ್ರಿಯಗೊಳಿಸಲಾಗಿದ್ದು, ಈ ಸ್ಕೂಟರ್ ಕನೆಕ್ಟೆಡ್ ಫೀಚರ್ ಗಳನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಸ್ಮಾರ್ಟ್‌ಫೋನ್ ಮೂಲಕ ಸುಲಭವಾಗಿ ಕಂಟ್ರೋಲ್ ಮಾಡಬಹುದು ಹಾಗೂ ಮೇಲ್ವಿಚಾರಣೆ ಮಾಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿಯನ್ನು ಹೊಂದಿದೆ. ಇದರಿಂದ ಚಾರ್ಜ್ ಖಾಲಿಯಾದ ಬ್ಯಾಟರಿಯನ್ನು ಹೊರತೆಗೆದು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯನ್ನು ಅಳವಡಿಸಬಹುದು.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಕಂಪನಿಯು Muvi ಎಲೆಕ್ಟ್ರಿಕ್ ಸ್ಕೂಟರಿಗಾಗಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತಯಾರಿಸಲು ಸಿದ್ದತೆ ನಡೆಸುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುರೋಪ್‌ನಲ್ಲಿ ವಿನ್ಯಾಸಗೊಳಿಸಲಾಗಿದ್ದು, 14 ಇ-ಕಾಮರ್ಸ್ ಹಾಗೂ ಇತರ ಮೊಬಿಲಿಟಿ ಕಂಪನಿಗಳು ಬಳಸುತ್ತಿವೆ. Muvi ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಹಗುರವಾಗಿದೆ. ಬ್ಯಾಟರಿಯೊಂದಿಗೆ ಈ ಸ್ಕೂಟರ್‌ ಕೇವಲ 83 ಕೆ.ಜಿ ತೂಕವನ್ನು ಹೊಂದಿದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಈ ಎಲೆಕ್ಟ್ರಿಕ್ ಸ್ಕೂಟರ್ 3 ಕಿ.ವ್ಯಾ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಮರ್ಥ್ಯವು 125 ಸಿಸಿ ಬೈಕುಗಳಿಗೆ ಸಮನಾಗಿದೆ. ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ 100 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಪ್ರತಿ ಗಂಟೆಗೆ 60 ಕಿ.ಮೀಗಳಾಗಿದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಇನ್ನು eBikeGo ಕಂಪನಿಯು ಸ್ಪ್ಯಾನಿಷ್ ಮೂಲದ ವೆಲೊಸಿಪಿಡೊ (Velocipedo) ಎಲೆಕ್ಟ್ರಿಕ್ ತ್ರಿಚಕ್ರ ಸ್ಕೂಟರ್ ಅನ್ನು ತಯಾರಿಸುವ ಹಕ್ಕುಗಳನ್ನು ಕಳೆದ ತಿಂಗಳಷ್ಟೇ ಖರೀದಿಸಿದೆ. ವೆಲೊಸಿಪಿಡೊ ಎಲೆಕ್ಟ್ರಿಕ್ ಟ್ರೈಕ್ ದ್ವಿಚಕ್ರ ಸ್ಕೂಟರ್‌ಗೆ ಪರ್ಯಾಯವಾಗಿದ್ದು, ಯಾವುದೇ ದ್ವಿಚಕ್ರ ವಾಹನಗಳಿಗಿಂತ ಸುರಕ್ಷಿತವಾಗಿದೆ. ವೆಲೊಸಿಪಿಡೊ ಟ್ರೈಕ್‌ಗೆ ಅದರ ವಿನ್ಯಾಸ ಹಾಗೂ ಪ್ರಾಯೋಗಿಕತೆಗಾಗಿ ಅಂತರಾಷ್ಟ್ರೀಯವಾಗಿ ಪ್ರಸಿದ್ಧವಾದ ರೆಡ್ಡಾಟ್ ಡಿಸೈನ್ ಅವಾರ್ಡ್ ಅನ್ನು ಸಹ ನೀಡಲಾಗಿದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ವೆಲೊಸಿಪೆಡೊ ಸ್ಪ್ಯಾನಿಷ್ ಆಟೋಮೊಬೈಲ್ ಕಂಪನಿ ಟೊರೊಟ್ ತಯಾರಿಸಿದ ಮೂರು ಚಕ್ರಗಳ ಸ್ಮಾರ್ಟ್ ಟ್ರೈಸಿಕಲ್ ಆಗಿದೆ. ಇದು ಮುಂಭಾಗದಲ್ಲಿ ಎರಡು ಚಕ್ರ ಹಾಗೂ ಹಿಂಭಾಗದಲ್ಲಿ ಒಂದು ಚಕ್ರವನ್ನು ಹೊಂದಿದೆ. ವಿಶೇಷವೆಂದರೆ ಈ ಎಲೆಕ್ಟ್ರಿಕ್ ಟ್ರೈಕ್‌ನ ಸಂಪೂರ್ಣ ರಚನೆಯು ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ. ಇದು ಪ್ರಯಾಣಿಕರನ್ನು ಬಿಸಿಲಿನಿಂದ ರಕ್ಷಿಸುತ್ತದೆ. ಇದು ಎರಡು ಆಸನಗಳ ತ್ರಿಚಕ್ರ ವಾಹನವಾಗಿದ್ದು, ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಕಂಪನಿಯು ಇದನ್ನು ನಗರ ಪ್ರದೇಶಗಳ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಇದನ್ನು ಪ್ರತಿ ದಿನ ಬಳಸಬಹುದು. ಈ ಟ್ರೈಕ್ ಯಾವುದೇ ಬೈಕು ಅಥವಾ ಸ್ಕೂಟರ್‌ಗಿಂತ ಕಾರ್ಯನಿರ್ವಹಿಸಲು ಸುಲಭವಾಗಿದ್ದು, ಸುರಕ್ಷಿತವಾಗಿದೆ. ಈ ಟ್ರೈಕ್ ಅನ್ನು ನಗರದ ಟ್ರಾಫಿಕ್‌ನಲ್ಲಿಯೂ ಸುಲಭವಾಗಿ ಚಾಲನೆ ಮಾಡಬಹುದು. ಜೊತೆಗೆ ಪಾರ್ಕಿಂಗ್ ಸ್ಥಳದಲ್ಲಿ ಬಹಳ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ವೆಲೊಸಿಪಿಡೊ ಎಲೆಕ್ಟ್ರಿಕ್ ಟ್ರೈಕ್ ಸುಧಾರಿತ ತಂತ್ರಜ್ಞಾನದ ಉದಾಹರಣೆಯಾಗಿದ್ದು, ಇದನ್ನು ಕಾರಿನಂತೆ ಸೌಕರ್ಯ ಹಾಗೂ ಸುರಕ್ಷತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಟ್ರೈಕ್ ಬೈಕ್‌ನಂತಹ ಕಾರ್ಯಕ್ಷಮತೆಯನ್ನು ಸಹ ನೀಡುತ್ತದೆ. ಮುಂಭಾಗದಲ್ಲಿರುವ ಎರಡು ಚಕ್ರಗಳಿಂದಾಗಿ ಈ ಟ್ರೈಕ್ ರಸ್ತೆಯಲ್ಲಿ ಸಾಮಾನ್ಯ ಸ್ಕೂಟರ್‌ಗಿಂತ ಹೆಚ್ಚು ಬ್ಯಾಲೆನ್ಸ್ ಆಗಿರುತ್ತದೆ. ಈ ಮೂರು ಚಕ್ರಗಳ ಸ್ಕೂಟರ್ ಯಾವುದೇ ರಸ್ತೆಯಲ್ಲೂ ಸುಲಭವಾಗಿ ಚಲಿಸುತ್ತದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಮಾಹಿತಿಯ ಪ್ರಕಾರ, ವೆಲೊಸಿಪಿಡೊ ಎಲೆಕ್ಟ್ರಿಕ್ ಟ್ರೈಕ್ ಅನ್ನು ವೈಯಕ್ತಿಕ ವಾಹನ, ಕ್ಯಾಬ್ ಹಾಗೂ ಕಾರ್ಗೋ ಎಂಬ ಮೂರು ಮಾದರಿಗಳಲ್ಲಿ ನೀಡಲಾಗುವುದು. eBikeGo ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಈ ವಾಹನದ ಉತ್ಪಾದನೆಯನ್ನು ಪುಣೆಯಲ್ಲಿ ಆರಂಭಿಸುವ ಸಾಧ್ಯತೆಗಳಿವೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

ಈ ಮೂರು ಚಕ್ರಗಳ ಎಲೆಕ್ಟ್ರಿಕ್ ಸ್ಕೂಟರ್‌ನ ಮೂಲ ಮಾದರಿಯಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಈ ವಾಹನವು ಎರಡು ಸೀಟ್ ಬೆಲ್ಟ್‌ ಹಾಗೂ ಪೂರ್ಣ ಕ್ಯಾಬ್‌ ಅನ್ನು ಹೊಂದಿದೆ. ಈ ವಾಹನವನ್ನು ಚಾಲನೆ ಮಾಡಲು ಹೆಲ್ಮೆಟ್ ಅಗತ್ಯವಿಲ್ಲ. ಈ ವಾಹನವು ಪೂರ್ತಿಯಾಗಿ ಚಾರ್ಜ್‌ ಆದ ನಂತರ 200 ಕಿ.ಮೀಗಳವರೆಗೆ ಚಲಿಸುತ್ತದೆ. ವೆಲೊಸಿಪಿಡೊ ಎಲೆಕ್ಟ್ರಿಕ್ ಟ್ರೈಕ್'ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 95 ಕಿ.ಮೀಗಳಾಗಿದೆ.

Muvi ಎಲೆಕ್ಟ್ರಿಕ್ ವಾಹನ ತಯಾರಿಕೆಯ ಹಕ್ಕು ಪಡೆದ eBikeGo

180 ಕೆ.ಜಿ ತೂಕವನ್ನು ಹೊಂದಿರುವ ವೆಲೊಸಿಪಿಡೊ ಎಲೆಕ್ಟ್ರಿಕ್ ಟ್ರೈಕ್'ನ ಒಂದೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಕಂಪನಿಯು ಈ ವಾಹನದಲ್ಲಿ ರಿಜನರೇಟಿವ್ ಬ್ರೇಕ್ ಟೆಕ್ನಾಲಜಿ ಬಳಸಿದೆ. ಇದರಿಂದ ಈ ಸ್ಕೂಟರ್ ಚಲಿಸುವಾಗಲೂ ಚಾರ್ಜ್ ಆಗುತ್ತಲೇ ಇರುತ್ತದೆ. ವಾಣಿಜ್ಯ ಬಳಕೆಯ ಕಾರ್ಗೋ ಮಾದರಿಯು 150 ಕೆ.ಜಿ ತೂಕವನ್ನು ಹೊಂದಿದ್ದು, 70 ಕೆ.ಜಿ ತೂಕದ ಸರಕನ್ನು ಸಾಗಿಸುತ್ತದೆ.

Most Read Articles

Kannada
English summary
Ebikego gets rights to manufacture muvi electric scooters details
Story first published: Wednesday, December 8, 2021, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X