ಇದೇ ತಿಂಗಳು 25ರಂದು ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ದೇಶಿಯ ಮಾರುಕಟ್ಟೆಗಾಗಿ ಇಬೈಕ್‌ಗೊ (eBikeGo) ಕಂಪನಿಯು ತನ್ನ ಹೊಸ ರಗಡ್(RUGGED) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ದುಬಾರಿ ಇಂಧನಗಳ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

eBikeGo ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ, ಉನ್ನತೀಕರಿಸಿ ಬ್ಯಾಟರಿ ಪ್ಯಾಕ್ ಹೊಂದಿರುವ RUGGED ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಇದೇ ತಿಂಗಳು 25ಕ್ಕೆ ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಮುನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದ eBikeGo ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ರಗಡ್ ಮೊಟೊ ಸ್ಕೂಟರ್ ಬಿಡುಗಡೆ ಯೋಜನೆಗೆ ಚಾಲನೆ ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

eBikeGo ಕಂಪನಿಯು ಹೊಸ ಇವಿ ಮೊಟೊ-ಸ್ಕೂಟರ್ ಮಾದರಿಯನ್ನು ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯಲ್ಲಿಯೇ ಅಭಿವೃದ್ದಿಗೊಳಿಸಿದ್ದು, ಮೇಕ್ ಇನ್ ಇಂಡಿಯಾ ಅಭಿಯಾನದಡಿ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

RUGGED ಎಲೆಕ್ಟ್ರಿಕ್ ಮೊಟೊ-ಸ್ಕೂಟರ್ ಮಾದರಿಯು ICAT ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆಗೆ ಅರ್ಹವಾಗಿರುವುದನ್ನು ಕಂಪನಿಯು ಖಚಿತಪಡಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಆಧುನಿಕ ಸಲಕರಣೆಗಳೊಂದಿಗೆ ಬಿಡುಯಾಗಲಿದ್ದು, RUGGED ಎಲೆಕ್ಟ್ರಿಕ್ ಮೊಟೊ-ಸ್ಕೂಟರ್ ಮಾದರಿಯ ಸಂಪೂರ್ಣ ತಾಂತ್ರಿಕ ಅಂಶಗಳು ಅಗಸ್ಟ್ 25ರಂದು ಬಹಿರಂಗಗೊಳ್ಳಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಮುಂಬೈ ಮೂಲದ eBikeGo ಕಂಪನಿಯು 2017ರಿಂದ ಉದ್ಯಮ ಕಾರ್ಯಾಚರಣೆ ಆರಂಭಿಸಿದ್ದು, ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ವಿತರಣಾ ಸೇವೆಯನ್ನು ಆರಂಭಿಸಿತು. ಕಂಪನಿಯು ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಯೊಂದಿಗೆ ಉದ್ಯಮ ಕಾರ್ಯಾಚರಣೆ ಆರಂಭಿಸಿತು.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಆದರೆ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ಸಾಮರ್ಥ್ಯದ ಕಾರಣ ವಿತರಣಾ ಸೇವೆಗಳಿಗೆ ಸೂಕ್ತವಲ್ಲ ಎಂಬುವುದನ್ನು ಕಂಡುಕೊಂಡಿರುವ ಕಂಪನಿಯು ಇದೀಗ ತನ್ನ ಬೇಡಿಕೆಗೆ ಅನುಗುಣವಾಗಿ ಇವಿ ವಾಹನ ಉತ್ಪಾದನೆ ಆರಂಭಿಸಿದ್ದು, ವಿವಿಧ ಇವಿ ಸ್ಕೂಟರ್‌ಗಳ ಮೂಲಕ ಡೆಲಿವರಿ ಫ್ಲೀಟ್‌ ಮತ್ತು ಸ್ವಂತ ಬಳಕೆಯ ಇವಿ ಸ್ಕೂಟರ್‌ಗಳನ್ನು ಆರಂಭಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆ ಎದ್ದುಕಾಣುತ್ತಿದ್ದು, ಸರ್ಕಾರಿ ವಲಯದಲ್ಲಿ ಮಾತ್ರವಲ್ಲದೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಸಹ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೇಲೆ ಭಾರೀ ಹೂಡಿಕೆಯೊಂದಿಗೆ ಅಗತ್ಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಗೊಳ್ಳುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವತ್ತ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರೆತೆಯಿಂದಾಗಿ ಹಲವಾರು ಗ್ರಾಹಕರು ಇವಿ ವಾಹನಗಳ ಖರೀದಿ ಮಾಡುವ ಯೋಜನೆಯಿದ್ದರೂ ಕೂಡಾ ಚಾರ್ಜಿಂಗ್ ನಿಲ್ದಾಣಗಳ ವಿಚಾರವಾಗಿ ಹಿಂದೇಟು ಹಾಕುತ್ತಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಈ ಹಿನ್ನಲೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಜಂಟಿ ಯೋಜನೆ ಅಡಿಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಗ್ರಾಹಕರ ಸೆಳೆಯಲು ಯೋಜನೆಯಲ್ಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಲಭ್ಯತೆಯಿದ್ದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಸುಧಾರಿಸಬಹುದು ಎನ್ನುವ ಯೋಜನೆಯಲ್ಲಿರುವ ಆಟೋ ಉತ್ಪಾದನಾ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಂಪನಿಯಾದ eBikeGo ಕೂಡಾ ಭಾರೀ ಪ್ರಮಾಣದಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದತೆ ನಡೆಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ಇಬೈಕ್‌ಗೊ ಕಂಪನಿಯು ಮುಂದಿನ 2 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು ಮೂರು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಯೋಜನೆಯಲ್ಲಿದ್ದು,ಆರಂಭಿಕ ಹಂತವಾಗಿ ದೆಹಲಿ, ಮುಂಬೈ-ಪುಣೆ, ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್‌ನಲ್ಲಿ 3 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ eBikeGo ನಿರ್ಮಾಣದ 'RUGGED' ಇವಿ ಸ್ಕೂಟರ್

ನಗರದ ಪ್ರಮುಖ ಕಡೆಗಳಲ್ಲಿ ತಲೆ ಎತ್ತಲಿರುವ ಇಬೈಕ್‌ಗೊ ನಿಲ್ದಾಣಗಳ ಮಾಹಿತಿಗಾಗಿ ಮೊಬೈಲ್ ಅಪ್ಲಿಕೇಷನ್ ಕೂಡಾ ಲಭ್ಯವಿದ್ದು, ಎಲೆಕ್ಟಿಕ್ ವಾಹನ ಸವಾರರು ಅಪ್ಲಿಕೇಷನ್ ಮೂಲಕ ಚಾರ್ಜಿಂಗ್ ನಿಲ್ದಾಣಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.

Most Read Articles

Kannada
English summary
Ebikego planning to new electric moto scooter rugged launching on 25th august
Story first published: Thursday, August 19, 2021, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X