ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ ಕಂಪನಿಗಳು ಯಶಸ್ವಿಯಾಗುತ್ತಿವೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಪುಣೆ ಮೂಲದ ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಲೋ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ಆಕ್ಸಿಸ್ ಮತ್ತು ರೈಡ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಕೆಲವು ತಿಂಗಳ ಹಿಂದೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸುವ ಯೋಜನೆಯನ್ನು ಘೋಷಿಸಿದ್ದ ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಅಂತಿಮವಾಗಿ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಇವಿ ಸ್ಕೂಟರ್ ಜೊತೆ ಎಲೆಕ್ಟ್ರಿಕ್ ಸೈಕಲ್, ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಸಹ ಮಾರಾಟ ಮಾಡುವ ಯೋಜನೆಯಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಇದೀಗ ಆರಂಭಿಕ ಹಂತವಾಗಿ ಆಕ್ಸಿಸ್ ಮತ್ತು ರೈಡ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದ್ದು, ಎರಡು ಸ್ಕೂಟರ್‌ಗಳು ಲೋ ಸ್ಪೀಡ್ ವೈಶಿಷ್ಟ್ಯತೆಯನ್ನು ಹೊಂದಿವೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಆಕ್ಸಿಸ್ ಮತ್ತು ರೈಡ್ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಡಿಟ್ಯಾಚೇಬಲ್ ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಚಾರ್ಜರ್ ಹೊಂದಿರುವ ಹೊಸ ಸ್ಕೂಟರ್‌ಗಳ ಚಾರ್ಜಿಂಗ್ ಸಮಯ ಕೇವಲ 3.5 ಗಂಟೆಗಳು ಎಂದು ಕಂಪನಿ ಇವಿಟ್ರಿಕ್ ಮೋಟಾರ್ಸ್ ಹೇಳಿಕೊಂಡಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಪ್ರತಿ ಚಾರ್ಜ್‌ಗೆ ಹೊಸ ಸ್ಕೂಟರ್‌ಗಳು ಗರಿಷ್ಠ 75 ಕಿಮೀ ವರೆಗೆ ಚಲಿಸಲಿದ್ದು, 250W ಮೋಟಾರ್‌ನೊಂದಾಗಿಗೆ ಗರಿಷ್ಠ 25 ಕಿ.ಮೀ ವೇಗವನ್ನು ತಲುಪಬಲ್ಲವು. ಹೀಗಾಗಿ ಹೊಸ ಸ್ಕೂಟರ್‌ಗಳ ಚಾಲನೆಗೆ ನೋಂದಣಿ ಮಾಡುವ ಅವಶ್ಯವಿರುವುದಿಲ್ಲ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಜೊತೆಗೆ ಲೋ ಸ್ಪೀಡ್ ಮಾದರಿಯಾಗಿರುವುದರಿಂದ ಸ್ಕೂಟರ್ ಚಾಲನೆಗೂ ಯಾವುದೇ ಚಾಲನಾ ಪರವಾನಿಗೆ ಅವಶ್ಯವಿರುವುದಿಲ್ಲ. ಹೀಗಾಗಿ ಹೊಸ ಸ್ಕೂಟರ್‌ಗಳು ಗ್ರಾಹಕರ ದೈನಂದಿನ ಪ್ರಯಾಣಕ್ಕೆ ಸಮಂಜಸವಾದ ಖರೀದಿಯಾಗಿದ್ದು, ನಗರಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತವಾಗಿವೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಹೊಸ ಸ್ಕೂಟರ್‌ಗಳ ಬೆಲೆಯನ್ನು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 64,994(ಆಕ್ಸಿಸ್) ಮತ್ತು ರೂ 67,996(ರೈಡ್) ನಿಗದಿಪಡಿಸಲಾಗಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಆಕ್ಸಿಸ್ ಸ್ಕೂಟರ್ ಮಾದರಿಯು ವೈಟ್, ಪರ್ಷಿಯನ್ ರೆಡ್, ಸಿಟ್ರಿಕ್ ಯೆಲ್ಲೊ ಮತ್ತು ಡಾರ್ಕ್ ಬಣ್ಣಗಳನ್ನು ಹೊಂದಿದ್ದರೆ ರೈಡ್ ಮಾದರಿಯು ಬ್ಲೂ, ಪರ್ಷಿಯನ್ ರೆಡ್, ಸಿಲ್ವರ್, ನೋಬಲ್ ಗ್ರೇ ಮತ್ತು ಮೆಕ್ಯೂರಿ ವೈಟ್ ಬಣ್ಣಗಳನ್ನು ಹೊಂದಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಹೊಸ ಸ್ಕೂಟರ್‌ಗಳಲ್ಲಿ ಕಂಪನಿಯು ಎಲ್ಇಡಿ ಹೆಡ್‌ಲೈಟ್, 12 ಇಂಚಿನ ಟ್ಯೂಬ್ ಲೆಸ್ ಟೈರ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, 150 ಕೆ.ಜಿ ಲೋಡಿಂಗ್ ಸಾಮರ್ಥ್ಯ, ರಿವರ್ಸ್ ಪಾರ್ಕ್ ಅಸಿಸ್ಟ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ.

 ಆಕರ್ಷಕ ಬೆಲೆಯಲ್ಲಿ ಎರಡು ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಇವಿಟ್ರಿಕ್

ಖರೀದಿಗೆ ಲಭ್ಯವಿರುವ ನಗರಗಳು

ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಇದೀಗ ಆರಂಭಿಕವಾಗಿ ದೆಹಲಿ, ಗುರುಗ್ರಾಮ್, ಬೆಂಗಳೂರು, ಪುಣೆ, ಔರಂಗಾಬಾದ್, ಹೈದರಾಬಾದ್‌ ಮತ್ತು ತಿರುಪತಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪೂರೈಸುವ ಸೌಲಭ್ಯ ಹೊಂದಿದ್ದು, ಮುಂದಿನ ಆರು ತಿಂಗಳಲ್ಲಿ 28 ರಾಜ್ಯಗಳಲ್ಲೂ ವಿತರಕರನ್ನು ತೆರೆಯಲು ಯೋಜಿಸಲಾಗಿದೆ ಎಂದು ಕಂಪನಿ ಹೇಳಿದೆ.

Most Read Articles

Kannada
English summary
Evtric motors launched two new electric scooters in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X