ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಅಭಿವೃದ್ದಿ ಮತ್ತು ಮಾರಾಟ ಜವಾಬ್ದಾರಿ ಹೊತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಪಾಲುದಾರಿಕೆ ಯೋಜನೆಗೆ ಈಗಾಗಲೇ ಅಧಿಕೃತ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ಹಾರ್ಲೆ ಕಂಪನಿಯ ಆಯ್ದ ಬೈಕ್ ಮಾದರಿಗಳ ಮೇಲೆ ಹಲವಾರು ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಹೊಸ ಯೋಜನೆಯ ಭಾಗವಾಗಿ ಹೀರೋ ಮೊಟೋಕಾರ್ಪ್ ಕಂಪನಿಯು ಹಾರ್ಲೆ ಬೈಕ್ ಮಾರಾಟಕ್ಕಾಗಿ ಪ್ರತ್ಯೇಕ ಮಾರಾಟ ಸೌಲಭ್ಯ ತೆರೆದಿದ್ದು, ಐಷಾರಾಮಿ ಬೈಕ್ ಮಾರಾಟ ಆರಂಭಿಸಿದ ಸಂಭ್ರಮಕ್ಕಾಗಿ ಆಯ್ದ ಬೈಕ್ ಮಾದರಿಗಳ ಖರೀದಿ ಮೇಲೆ ಗರಿಷ್ಠ ರೂ. 3.76 ಲಕ್ಷದ ತನಕ ಆಫರ್ ನೀಡುತ್ತಿದೆ. ಹೊಸ ಆಫರ್‌ಗಳು ಸೀಮಿತ ಅವಧಿಯೊಳಗೆ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದ್ದು, ಶೀಘ್ರದಲ್ಲೇ ಹೀರೋ ಕಂಪನಿಯು ಮತ್ತಷ್ಟು ಹೊಸ ಹಾರ್ಲೆ ಬೈಕ್ ಮಾದರಿಗಳನ್ನು ಭಾರತದಲ್ಲಿ ಪರಿಚಯಿಸುವ ಸಿದ್ದತೆಯಲ್ಲಿದೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಹೀರೋ ಮೋಟೊಕಾರ್ಪ್ ಕಂಪನಿಯು ಆರಂಭಿಸಿರುವ ಫಸ್ಟ್ ಟು ರೈಡ್ ಅಭಿಯಾನದಡಿ ಹಾರ್ಲೆ ಲೋ ರೈಡರ್, ಲೋ ರೈಡರ್ ಎಸ್, ಫ್ಯಾಟ್ ಬಾಯ್ 107 ಮತ್ತು ಫ್ಯಾಟ್ ಬಾಯ್ 114 ಬೈಕ್ ಮೇಲೆ ಆಫರ್ ನೀಡುತ್ತಿದೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಹಾರ್ಲೆ-ಡೇವಿಡ್ಸನ್ ಕಂಪನಿಯೊಂದಿನ ಪಾಲುದಾರಿಕೆಯನ್ನು ಆಚರಿಸಲು ಹೊಸ ಕೊಡುಗೆಗಳನ್ನು ಘೋಷಿಸಲಾಗಿದ್ದು, ಕಂಪನಿಯು ಹೊಸ ಬೈಕ್ ಮಾದರಿಗಳ ಮೇಲೆ ಕನಿಷ್ಠ ರೂ.1.01 ಲಕ್ಷದಿಂದ ಗರಿಷ್ಠ ರೂ. 3.76 ಲಕ್ಷದ ತನಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಲೋ ರೈಡರ್ ಮಾದರಿಯ ಮೇಲೆ ರೂ. 2.94 ಲಕ್ಷ ರಿಯಾಯ್ತಿ ಲಭ್ಯವಿದ್ದಲಿ ಲೋ ರೈಡರ್ ಎಸ್ ಮಾದರಿಯ ಮೇಲೆ ರೂ. 2.95 ಲಕ್ಷ, ಫ್ಯಾಟ್ ಬಾಯ್ 114 ಬೈಕ್ ಮಾದರಿಯ ಮೇಲೆ ರೂ.1.01 ಲಕ್ಷ ಮತ್ತು ಫ್ಯಾಟ್ ಬಾಯ್ 107 ಬೈಕ್ ಮಾದರಿಯ ಮೇಲೆ ಗರಿಷ್ಠ ರೂ. 3.76 ಲಕ್ಷದ ತನಕ ಆಫರ್ ನೀಡುತ್ತಿದೆ. ಸೀಮಿತ ಅವಧಿಗೆ ಮಾತ್ರ ಈ ಆಫರ್ ಲಭ್ಯವಿದ್ದು, ಐಷಾರಾಮಿ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಹೊಸ ಆಫರ್ ಮೂಲಕ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಡಿಸ್ಕೌಂಟ್ ನಂತರ ಲೋ ರೈಡರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 11.25 ಲಕ್ಷ ಬೆಲೆ ಹೊಂದಿದ್ದರೆ, ಲೋ ರೈಡ್ ಎಸ್ ಮಾದರಿಯು ರೂ. 11.75 ಲಕ್ಷ, ಫ್ಯಾಟ್ ಬಾಯ್ 107 ಮಾದರಿಯು ರೂ. 14.49 ಲಕ್ಷ ಮತ್ತು ಫ್ಯಾಟ್ ಬಾಯ್ 114 ಮಾದರಿಯು ರೂ. 19.09 ಲಕ್ಷ ಬೆಲೆ ಹೊಂದಿವೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಫ್ಯಾಟ್ ಬಾಯ್ 114 ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಬೈಕ್ ಮಾದರಿಯು ಭಾರತದಲ್ಲಿ ಮಾರಾಟದಿಂದ ಸ್ಥಗಿತಗೊಂಡಿದ್ದರೂ ಸ್ಟಾಕ್ ಮಾದರಿಗಳ ಮೇಲೆ ಆಫರ್ ನೀಡಲಾಗುತ್ತಿದ್ದು, ಆಫರ್ ಹೊಂದಿರುವ ಮಾದರಿಗಳು 2020ರ ಮಾದರಿಗಳಾಗಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ತಗ್ಗಿಸುವುದಕ್ಕಾಗಿ ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿ ಪಾಲುದಾರಿಕೆ ಯೋಜನೆ ಆರಂಭಿಸಿದೆ.

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗಿತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದ್ದು, ಹೀರೋ ಕಂಪನಿಯು ಹೊಸ ಯೋಜನೆಗಾಗಿಯೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹಾರ್ಲೆ ಡೇವಿಡ್ಸನ್ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಐಷಾರಾಮಿ ಬೈಕ್ ಬ್ರಾಂಡ್‌ಗೆ ಪೂರಕವಾದ ಯೋಜನೆಗಳನ್ನು ಸಿದ್ದಪಡಿಸಿರುವ ಹೀರೋ ಮೊಟೋಕಾರ್ಪ್ ಕಂಪನಿಯು ಬೆಂಗಳೂರಿಪ್ರೀಮಿಯಂ ಮೋಟಾರ್‌‌ಸೈಕಲ್ ಮಾರುಕಟ್ಟೆಯ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಅನುಭವಿಯಾಗಿರುವ ರವಿ ಅವಲೂರ್ ಅವರು ಈ ಹಿಂದೆ ಡುಕಾಟಿ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಹೀರೋ ಮೋಟೊಕಾರ್ಪ್ ಜೊತೆಗೂಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯ ಸಹಭಾಗಿತ್ವ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಹೊಸ ಯೋಜನೆಯಲ್ಲಿ ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್ ಕೂಡಾ ಉಸ್ತುವಾರಿ ವಹಿಸಲಿದ್ದಾರೆ.

Most Read Articles

Kannada
English summary
Harley Davidson Bikes Offers & Discounts Announced. Read in Kannada.
Story first published: Tuesday, May 11, 2021, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X