ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಡಸ್ಟನಿ 125 ಮಾದರಿಯಲ್ಲಿ ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ರೂ.72,050 ಬೆಲೆ ಹೊಂದಿದೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಪ್ರೀಮಿಯಂ ಸ್ಕೂಟರ್ ಖರೀದಿದಾರರನ್ನು ಸೆಳೆಯುವ ಉದ್ದೇಶದೊಂದಿಗೆ ಸ್ಪೆಷಲ್ ಎಡಿಷನ್ ಆಗಿ ಪ್ಲ್ಯಾಟಿನಂ ಎಡಿಷನ್ ಬಿಡುಗಡೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವಾರು ಹೊಸ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಹೊಸ ಸ್ಕೂಟರ್‌ನಲ್ಲಿ ಮ್ಯಾಸ್ಟ್ರೊ ಎಡ್ಜ್ ಸ್ಟೇಲ್ತ್ ಮತ್ತು ಪ್ರೆಷರ್ ಪ್ಲಸ್ ಪ್ಲಾಟಿನಂ ಮಾದರಿಗಳಿಂದಲೂ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ರೆಟ್ರೋ ವಿನ್ಯಾಸವನ್ನು ನೆನಪಿಸುವ ಹೊಸ ಪ್ಲಾಟಿನಂ ಆವೃತ್ತಿಯಲ್ಲಿ ಕ್ರೋಮ್ ಒಳಗೊಂಡಿರುವ ಹ್ಯಾಂಡಲ್‌ಬಾರ್ ಮತ್ತು ಮಿರರ್‌ಗಳು ಸಾಕಷ್ಟು ಆಕರ್ಷಕವಾಗಿದ್ದು, ಕ್ರೋಮ್ ಎಕ್ಸಾಸ್ಟ್ ಹೀಟ್ ಶೀಲ್ಡ್, ಫೆಂಡರ್ ಸ್ಟ್ರೀಪ್ ಸೌಲಭ್ಯಗಳು ಆಕರ್ಷಕವಾಗಿವೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಮಾದರಿಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಮ್ಯಾಟೆ ಬ್ಲ್ಯಾಕ್ ಕಲರ್ ಹೊಸ ಸ್ಕೂಟರ್‌ಗೆ ಹೊಸ ಲುಕ್ ನೀಡಿದ್ದು, ಬ್ರೌನ್ ಪ್ಯಾನೆಲ್, ಡ್ಯುಯಲ್ ಟೋನ್ ಬ್ರೌನ್ ಮತ್ತು ಬ್ಲ್ಯಾಕ್ ಸೀಟ್, 3ಡಿ ಲೊಗೊ, ಪ್ಲಾಟಿನಂ ವೆರಿಯೆಂಟ್ ಬ್ಯಾಡ್ಜ್, ವೈಟ್ ರಿಮ್ ಟೇಪ್ ನೀಡಲಾಗಿದೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಜೊತೆಗೆ ಸ್ಪೆಷಲ್ ಎಡಿಷನ್ ಸ್ಕೂಟರ್ ಮಾದರಿಯಲ್ಲಿ ಸಿಗ್ನಿಚೆರ್ ಎಲ್ಇಡಿ ಗೈಡ್ ಲ್ಯಾಂಪ್, ಡಿಜಿಟಲ್ ಅನಲಾಗ್ ಸ್ಪೀಡೋ ಮೀಟರ್, ಸ್ಮಾರ್ಟ್ ಫೋನ್ ಚಾರ್ಜರ್, ಸೈಡ್ ಸ್ಟಾಂಡ್ ಇಂಡಿಕೇಟರ್, ಸರ್ವಿಸ್ ರಿಮೆಂಡರ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿ ಬಣ್ಣ ಆಯ್ಕೆ ಮತ್ತು ಕೆಲವು ಹೆಚ್ಚುವರಿ ಫೀಚರ್ಸ್ ಹೊರತುಪಡಿಸಿ ಇನ್ನುಳಿದಂತೆ ಎಲ್ಲಾ ತಾಂತ್ರಿಕ ಅಂಶಗಳು ಒಂದೇ ಆಗಿರಲಿವೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಎಂಜಿನ್ ಸಾಮರ್ಥ್ಯ

ಹೊಸ ಡೆಸ್ಟಿನಿ 125 ಸ್ಕೂಟರ್ ಮಾದರಿಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಎಕ್ಸ್‌ಸೆನ್ಸ್ ಟೆಕ್ನಾಲಜಿ ಪ್ರೇರಣೆಯ 124.6-ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್ ಇಂಜೆಕ್ಷಡ್ ಎಂಜಿನ್ ಜೋಡಣೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು 9-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಸ್ಕೂಟರ್ ಮಾದರಿಯಲ್ಲಿ ಅನಗತ್ಯ ಸಂದರ್ಭದಲ್ಲಿ ಇಂಧನ ವ್ಯರ್ಥವಾಗುವುದನ್ನು ತಡೆಯಲು ಐಡಲ್ ಸ್ಟಾಪ್- ಸ್ಟಾರ್ಟ್ ಸಿಸ್ಟಂ ಹೊಂದಿದ್ದು, ಟ್ರಾಫಿಕ್ ದಟ್ಟಣೆ ವೇಳೆ ಸಿಗ್ನಲ್‌ನಲ್ಲಿ ಹೆಚ್ಚು ಹೊತ್ತು ಸ್ಕೂಟರ್ ಆನ್‌ನಲ್ಲಿಯೇ ಇರುವಾಗ ಐಡಲ್ ಸ್ಟಾಪ್- ಸ್ಟಾರ್ಟ್ ಸಿಸ್ಟಂ ಸೌಲಭ್ಯವು ಎಂಜಿನ್ ಅನ್ನು ತಾನಾಗಿಯೇ ನಿರ್ಷ್ಕಿಯಗೊಳಿಸಿ ಇಂಧನ ವ್ಯರ್ಥ ತಡೆಯುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ಹೊಸ ಸ್ಕೂಟರ್‌ನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸ್ವಿಂಗ್ಆರ್ಮ್-ಮೌಂಟೆಡ್ ಶಾಕ್ ಸಸ್ಷೆಂಷನ್ ನೀಡಲಾಗಿದ್ದು, ಎರಡು ಬದಿಯ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಜೋಡಣೆ ಹೊಂದಿದೆ.

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಟ್ಯೂಬ್ ಲೆಸ್ ವೈಶಿಷ್ಟ್ಯತೆಯ 10-ಇಂಚಿನ ಅಲಾಯ್ ವೀಲ್ಹ್ ಜೊತೆಗೆ ಹಲವಾರು ಹೊಸ ಫೀಚರ್ಸ್ ಜೋಡಿಸಿದ್ದು, 125ಸಿಸಿ ಸ್ಕೂಟರ್‌ಗಳ ಮಾರಾಟದಲ್ಲಿ ಸ್ಪೆಷಲ್ ಗಮನಸೆಳೆಯಲಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಡೆಸ್ಟಿನಿ 125 ಪ್ಲಾಟಿನಂ ಎಡಿಷನ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಡೆಸ್ಟಿನಿ 125 ಆವೃತ್ತಿಯಲ್ಲಿ ಪ್ಲ್ಯಾಟಿನಂ ಎಡಿಷನ್ ಹೊರತುಪಡಿಸಿ ಇತ್ತೀಚೆಗೆ ಬಿಡುಗಡೆ ಮಾಡಲಾದ 100 ಮಿಲಿಯನ್ ಎಡಿಷನ್(ರೂ.72,250) ಮತ್ತು ಸ್ಟ್ಯಾಂಡರ್ಡ್ ಮಾದರಿಗಳಲ್ಲಿ ಎಲ್ಎಕ್ಸ್(ರೂ.66,960) ಮತ್ತು ವಿಎಕ್ಸ್ (ರೂ. 70,450) ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

Most Read Articles

Kannada
English summary
Hero Destini 125 Platinum Launched In India. Read in Kannada.
Story first published: Tuesday, March 23, 2021, 22:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X