ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿರುವ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳ ಬಿಡುಗಡೆಯನ್ನು ಮುಂದೂಡಿವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಈಗ ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಎಲೆಕ್ಟ್ರಿಕ್ ಸಹ ತನ್ನ ಹೀರೋ ಎಇ -47 ಎಲೆಕ್ಟ್ರಿಕ್ ಬೈಕ್ ಬಿಡುಗಡೆಯನ್ನು ಮುಂದೂಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್‌ ಅನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿತ್ತು. ಅದಾದ ನಂತರ ಈ ಬೈಕಿನ ಬಿಡುಗಡೆಗೆ ಹಲವು ದಿನಗಳಿಂದ ಸಿದ್ದತೆ ನಡೆಸಲಾಗಿತ್ತು.

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಕಾರ್ ಅಂಡ್ ಬೈಕ್‌ ವರದಿಗಳ ಪ್ರಕಾರ, ಹೀರೋ ಎಲೆಕ್ಟ್ರಿಕ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಮುಂಜಾಲ್'ರವರು ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮುಂದೂಡಿಕೆಯ ಬಗ್ಗೆ ಮಾತನಾಡಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಬೈಕ್ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿಲ್ಲ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಈ ವರ್ಷ ಈ ಬೈಕ್ ಬಿಡುಗಡೆಗೊಳಿಸುವುದು ಕಷ್ಟವೆಂದು ಅವರು ಹೇಳಿದ್ದಾರೆ. ಈ ಬೈಕ್ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ನಾವು ಈ ಬೈಕ್ ಅನ್ನು ಪ್ರೀಮಿಯಂ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸುತ್ತೇವೆ. ಎಇ 47 ಹಾಗೂ ಇತರ ಪ್ರೀಮಿಯಂ ಉತ್ಪನ್ನಗಳು ಸಿದ್ಧವಾಗಿವೆ. ಆದರೆ ಅವುಗಳ ಬಿಡುಗಡೆ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಪವನ್ ಮುಂಜಾಲ್ ಹೇಳಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ನಾವು ಕಡಿಮೆ ಬೆಲೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಗಮನ ಹರಿಸಿದ್ದೇವೆ. ಕರೋನಾ ವೈರಸ್ ಎರಡನೇ ಅಲೆಯ ಜೊತೆಗೆ ಮಾರುಕಟ್ಟೆ ಸನ್ನಿವೇಶವನ್ನು ಗಮನಿಸಿ ಪ್ರೀಮಿಯಂ ವಾಹನಗಳ ಬಿಡುಗಡೆಗಾಗಿ ನಾವು ಕಾಯಬೇಕಾಗುತ್ತದೆ ಎಂದು ಅವರು ಹೇಳಿದರು.

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಇನ್ನು ಹೀರೋ ಎಇ 47 ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 3.5 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಪವರ್ ಮೋಡ್‌ನಲ್ಲಿ 85 ಕಿ.ಮೀ ಹಾಗೂ ಇಕೋ ಮೋಡ್‌ನಲ್ಲಿ 160 ಕಿ.ಮೀಗಳವರೆಗೆ ಚಲಿಸುತ್ತದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 100 ಕಿ.ಮೀಗಳಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್ ಕೇವಲ 9 ಸೆಕೆಂಡುಗಳಲ್ಲಿ 0 - 60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಈ ಬೈಕ್ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಬೈಕಿನ ಎರಡೂ ವ್ಹೀಲ್'ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಈ ಬೈಕಿನಲ್ಲಿ ಹಲವಾರು ಫೀಚರ್'ಗಳನ್ನು ಹೊಂದಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ವೈರಸ್ ಎಫೆಕ್ಟ್: ಹೊಸ ಬೈಕಿನ ಬಿಡುಗಡೆ ಮುಂದೂಡಿದ ಹೀರೋ ಎಲೆಕ್ಟ್ರಿಕ್

ಈ ಫೀಚರ್'ಗಳಲ್ಲಿ ಕ್ರೂಸ್ ಕಂಟ್ರೋಲ್ ಸಿಸ್ಟಂ, ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ರಿವರ್ಸ್ ಗೇರ್ ಇತ್ಯಾದಿಗಳು ಸೇರಿವೆ. ಈ ಬೈಕಿನ ಬೆಲೆಯನ್ನು ಕಂಪನಿಯು ರೂ.1.25 ಲಕ್ಷಗಳಿಗೆ ನಿಗದಿಪಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Hero Electric postpones new electric bike launch. Read in Kannada.
Story first published: Friday, April 30, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X