ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಹೀರೋ ಮೋಟೊಕಾರ್ಪ್ ತನ್ನ 'ಹೀರೋ ಕನೆಕ್ಟ್ ಫೀಚರ್ ಅನ್ನು ಡೆಸ್ಟಿನಿ ಸ್ಕೂಟರ್‌ನಲ್ಲಿ ಪರಿಚಯಿಸಿದೆ. ಇದರಿಂದ ಹೀರೋ ಡೆಸ್ಟಿನಿ ಸ್ಕೂಟರ್ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಬಹುದು.

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಹೀರೋ ಕನೆಕ್ಟ್ ಅಪ್ಲಿಕೇಶನ್ ಹೊಂದಿರುವ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ಅದರ ಆನ್-ರೋಡ್ ಬೆಲೆಗೆ ಹೆಚ್ಚುವರಿಯಾಗಿ ರೂ.4,999 ಪಾವತಿಸಬೇಕಾಗುತ್ತದೆ. ಹೀರೋ ಕನೆಕ್ಟ್ ಅಪ್ಲಿಕೇಶನ್ ಟಾಪಲ್ ಅಲರ್ಟ್, ಟ್ರಿಪ್ ಅನಾಲಿಸಿಸ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟೌ ಅಲರ್ಟ್, ಜಿಯೋ-ಫೆನ್ಸ್ ಅಲರ್ಟ್, ಹೀರೋ ಲೊಕೇಟ್, ಸ್ಪೀಡ್ ಅಲರ್ಟ್ ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ.

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಹೀರೋ ಕನೆಕ್ಟ್ ಫೀಚರ್ ಎಕ್ಟ್ರೀಮ್ 160ಆರ್, ಎಕ್ಸ್‌ಪಲ್ಸ್ 200, ಪ್ಲೆಷರ್ ಪ್ಲಸ್ ಮತ್ತು ಪ್ಲೆಷರ್ ಪ್ಲಸ್ ಪ್ಲಾಟಿನಂ ಮಾದರಿಗಳಲ್ಲಿಯು ಲಭ್ಯವಿದೆ. ಈ ಹೀರೋ ಕನೆಕ್ಟ್ ಫೀಚರ್ ಹೆಚ್ಚು ಉಪಯುಕ್ತ ಫೀಚರ್ ಆಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಹೀರೋ ಮೋಟೊಕಾರ್ಪ್ ಕಂಪನಿಯು ಡೆಸ್ಟಿನಿ 125 ಸ್ಕೂಟರ್ ಅನ್ನು 2018ರ ಕೊನೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಸ್ವದೇಶೀ ವಾಹನ ತಯಾರಕರಾದ ಹೀರೋ ತನ್ನ ಡೆಸ್ಟಿನಿ 125 ಸ್ಕೂಟರ್ ಅನ್ನು ಐ3 ಎಸ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಒಳಗೊಂಡಿರುವ ಮೊದಲ ಸ್ಕೂಟರ್ ಆಗಿ ಪರಿಚಯಿಸಿತು.

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಈ ಡೆಸ್ಟಿನಿ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಹೀರೋ ಡೆಸ್ಟಿನಿ 125 ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಶೇ.11 ಮೈಲೇಜ್ ಅಂಕಿ ಅಂಶಗಳು ಹೆಚ್ಚಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೀರೋ ಡೆಸ್ಟಿನಿ 125 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಈ ಡೆಸ್ಟಿನಿ 125 ಸ್ಕೂಟರ್ ನಲ್ಲಿ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಟೆಕ್ಸ್ಚರ್ ಸೀಟುಗಳು, ಅಲಾಯ್ ವ್ಹೀಲ್ಸ್, ಸುತ್ತಲೂ ಕ್ರೋಮ್ ಎಕ್ಸಟ್ ಗಳು, ಮೊಬೈಲ್ ಚಾರ್ಜಿಂಗ್ ಮತ್ತು ಬೂಟ್ ಲ್ಯಾಂಪ್ ಅನ್ನು ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಈ ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ನಲ್ಲಿ ಸುರಕ್ಷತೆಗಾಗಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂನಿಂದ ಬೆಂಬಲಿತವಾಗಿ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಡಸ್ಟನಿ 125 ಮಾದರಿಯಲ್ಲಿ ಪ್ಲಾಟಿನಂ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು, ಈ ಹೊಸ ಡಸ್ಟನಿ 125 ಪ್ಲಾಟಿನಂ ಎಡಿಷನ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.72,050 ಆಗಿದೆ

ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್

ಹೀರೋ ಡೆಸ್ಟಿನಿ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಸ್ಕೂಟರ್ ಗೆ ಪೈಪೋಟಿ ನೀಡುತ್ತದೆ. ಇನ್ನು ಹೀರೋ ಕನೆಕ್ಟ್ ಅಪ್ಲಿಕೇಶನ್ ಫೀಚರ್ ಅನ್ನು ಡೆಸ್ಟಿನಿ 125 ಸ್ಕೂಟರ್ ಪಡೆದುಕೊಂಡಿರುವುದರಿಂದ ಹೆಚ್ಚಿನ ಜನರನ್ನು ಆಕರ್ಷಿಸಬಹುದು.

Most Read Articles

Kannada
English summary
Hero MotoCorp Now Offers Hero Connect On Destini 125 Scooter. Read In Kannada.
Story first published: Tuesday, April 13, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X