ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ದೇಶದ ಅತಿ ದೊಡ್ಡ ದ್ವಿಚಕ್ರ ತಯಾರಕ ಕಂಪನಿಯಾದ ಹೀರೋ ಮೊಟೊಕಾರ್ಪ್ ಹೊಸ ಹೆಚ್‌ಎಫ್ 100 ಬೈಕನ್ನು ಸದ್ದಿಲ್ಲದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಹೆಚ್‌ಎಫ್ 100 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.49,400 ಆಗಿದೆ.

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಈ ಹೊಸ ಬೈಕ್ ಹೀರೋ ಪೋರ್ಟ್ಫೋಲಿಯೊದಲ್ಲಿ ಅಗ್ಗದ ಕೊಡುಗೆಯಾಗಿದೆ. ವಿಶೇಷವೆಂದರೆ ಹೀರೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್‌ಎಫ್ 100 ಬೈಕಿನ ಹೆಸರನ್ನು ಯಾವುದೇ ಅಧಿಕೃತ ಪ್ರಕಟಣೆ ಮಾಡದೆ ಸೇರಿಸಿದೆ. ಹೊಸ ಹೀರೋ ಹೆಚ್‌ಎಫ್ 100 ಹೆಚ್ಚು ಜನಪ್ರಿಯವಾದ ಹೀರೋ ಹೆಚ್‌ಎಫ್ ಡಿಲಕ್ಸ್‌ನ ಮತ್ತೊಂದು ರೂಪಾಂತರವಾಗಿದೆ. ಬೆಲೆಯನ್ನು ಸಾಧ್ಯವಾದಷ್ಟು ಕಡಿಮೆ ಇರಿಸಲು, ಪ್ರಯಾಣಿಕರು ಅಗತ್ಯವಿರುವ ಕೆಲವು ವೈಶಿಷ್ಟ್ಯಗಳನ್ನು ಮಾತ್ರ ನೀಡಿದ್ದಾರೆ.

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಉದಾಹರಣೆಗೆ, ಇದು ಒಂದೇ ಬಣ್ಣದಲ್ಲಿ ಲಭ್ಯವಿದೆ, ಇತರ ಹೆಚ್‌ಎಫ್ ಡಿಲಕ್ಸ್ ರೂಪಾಂತರಗಳು ಭಿನ್ನವಾಗಿ ಅವುಗಳ ಬಣ್ಣದ ಪ್ಯಾಲೆಟ್‌ನಲ್ಲಿ ಅನೇಕ ಆಯ್ಕೆಗಳಿವೆ. ಹೊಸ ಹೀರೋ ಹೆಚ್‌ಎಫ್ 100 ಬೈಕಿನ ಹೆಚ್ಚಿನ ಭಾಗಗಳು ಕಪ್ಪು ಬಣ್ಣದಲ್ಲಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಉದಾಹರಣೆಗೆ ಅಲಾಯ್ ವ್ಹೀಲ್, ಚೈನ್ ಕವರ್, ಕ್ರ್ಯಾಶ್ ಗಾರ್ಡ್, ಮತ್ತು ಎಕ್ಸಾಸ್ಟ್ ಕೂಡ ಒಳಗೊಂಡಿದೆ. ಹೆಚ್‌ಎಫ್ ಡಿಲಕ್ಸ್‌ಗೆ ಹೋಲಿಸಿದರೆ ಹೊಸ ಹೆಚ್‌ಎಫ್ 100 ಬೈಕಿನಲ್ಲಿ ಪಿಲಿಯನ್ ಗ್ರ್ಯಾಬ್ ರೈಲ್ ತೆಳ್ಳಗಿದೆ.

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಹೊಸ ಹೀರೋ ಹೆಚ್‌ಎಫ್ 100 ಬೈಕಿನಲ್ಲಿ 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8000 ಆರ್‌ಪಿಎಂನಲ್ಲಿ 8.36 ಬಿಹೆಚ್‍ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಸುಧಾರಿತ ಪ್ರೊಗ್ರಾಮೆಬಲ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ನೀಡಿರುವುದರಿಂದ ಮೈಲೇಜ್ ಹೆಚ್ಚಿಸುತ್ತದೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಹೊಸ ಹೀರೋ ಹೆಚ್‌ಎಫ್ 100 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಸುರಕ್ಷತೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೀರೋ ಹೆಚ್‌ಎಫ್ 100 ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ.

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಇನ್ನು ಈ ಹೊಸ ಹೀರೋ ಬೈಕಿನಲ್ಲಿ ಎಲೆಕ್ಟ್ರಿಕ್ ಸ್ಟಾರ್ಟ್ ಫೀಚರ್ ಅನ್ನು ನೀಡಲಾಗಿಲ್ಲ. ಕೇವಲ ಕಿಕ್ ಸ್ಟಾರ್ಟ್ ಫೀಚರ್ ಅನ್ನು ನೀಡಿದ್ದಾರೆ. ಈ ಹೀರೋ ಹೆಚ್‌ಎಫ್ 100 ಬೈಕ್ 1965 ಎಂಎಂ ಉದ್ದ, 720 ಎಂಎಂ ಅಗಲ ಮತ್ತು 1045 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಇದರ ಸೀಟ್ 805 ಎಂಎಂ ಎತ್ತರವನ್ನು ಹೊಂದಿದೆ.

ಕಡಿಮೆ ಬೆಲೆಯ ಹೊಸ ಹೀರೋ ಹೆಚ್‌ಎಫ್ 100 ಬೈಕ್ ಬಿಡುಗಡೆ

ಬಿಡುಗಡೆಗೊಂಡ ಈ ಹೊಸ ಹೀರೋ ಹೆಚ್‌ಎಫ್ 100 ಬೈಕ್ 110 ಕೆಜಿ ತೂಕವನ್ನು ಹೊಂದಿದೆ. ಇನ್ನು ಇದರಲ್ಲಿ 9.1 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಹೊಸ ಬೈಕನ್ನು ಹೀರೋ ಮೊಟೊಕಾರ್ಪ್ ಕಂಪನಿಯು ಕೈಗೆಟುಕುವ ದರದಲ್ಲಿ, ಅವಶ್ಯಕ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
New Hero HF 100 Launched. Read In Kannada.
Story first published: Thursday, April 15, 2021, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X