ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ಅರ್ಜೆಂಟೀನಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದ್ದಾರೆ, ಹೀರೋ ಮೋಟೋಕಾರ್ಪ್ ಕಂಪನಿಯು ಅರ್ಜೆಂಟೀನಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲು ಗಿಲೆರಾ ಮೋಟಾರ್ಸ್‌ನೊಂದಿಗೆ ಕೈಜೋಡಿಸಿದ್ದಾರೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಹೀರೋ ಮೋಟೋಕಾರ್ಪ್ ಕಂಪನಿಯು ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ಜೊತೆ ಸೇರಿ ಲ್ಯಾಟಿನ್ ಅಮೇರಿಕನ್ ದೇಶದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದೆ ಮತ್ತು ಅರ್ಜೆಂಟೀನಾದಲ್ಲಿ ಪ್ರಮುಖ ಡೀಲರ್‌ಶಿಪ್ ಅನ್ನು ಉದ್ಘಾಟಿಸಿದೆ. ಹೀರೋ ಇತ್ತೀಚೆಗೆ ಅರ್ಜೆಂಟೀನಾದಲ್ಲಿ ಮೋಟಾರು ವಾಹನ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾದ ಗಿಲೆರಾ ಮೋಟಾರ್ಸ್‌ನೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಅರ್ಜೆಂಟೀನಾದಲ್ಲಿ ತನ್ನ ಅಸ್ತಿತ್ವವನ್ನು ಪುನಶ್ಚೇತನಗೊಳಿಸಿದೆ ಮತ್ತು ಲ್ಯಾಟಿನ್ ಅಮೆರಿಕದ ಅತ್ಯಂತ ಅನುಭವಿ ಮೋಟಾರ್‌ಸೈಕಲ್ ತಯಾರಕರಲ್ಲಿ ಒಂದಾಗಿದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ಹೀರೋ ಮೋಟೋಕಾರ್ಪ್‌ನ ಉತ್ಪನ್ನಗಳಿಗೆ ವ್ಯಾಪಾರ ಕಾರ್ಯಾಚರಣೆಗಳನ್ನು ತ್ವರಿತವಾಗಿ ವಿಸ್ತರಿಸಲು ಬಹಿರಂಗಪಡಿಸದ ಮೊತ್ತದ ಹೊಸ ಹೂಡಿಕೆಗಳನ್ನು ಮಾಡುತ್ತದೆ. ಇದು ಈ ಪ್ರದೇಶದಲ್ಲಿ ಸುಮಾರು 500 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಹೀರೋ ಮೋಟೋಕಾರ್ಪ್ ಹೇಳಿಕೆಯಲ್ಲಿ ತಿಳಿಸಿದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಹೀರೋ ಮೋಟೋಕಾರ್ಪ್‌ನ ಗ್ಲೋಬಲ್ ಬ್ಯುಸಿನೆಸ್ ಮುಖ್ಯಸ್ಥ ಸಂಜಯ್ ಭಾನ್ ಅವರು ಮಾತನಾಡಿ, ಅರ್ಜೆಂಟೀನಾದಲ್ಲಿ ನಮ್ಮ ಕಾರ್ಯಾಚರಣೆಗಳನ್ನು ತ್ವರಿತವಾಗಿ ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಅಕ್ಟೋಬರ್‌ನಲ್ಲಿ ಗಿಲೇರಾ ಮೋಟಾರ್ಸ್ ಅರ್ಜೆಂಟೀನಾದೊಂದಿಗೆ ನಮ್ಮ ಹೊಸ ಒಡನಾಟವನ್ನು ಘೋಷಿಸಿದ ನಂತರ ನಾವು ಈಗಾಗಲೇ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ನಾವು ಈಗಾಗಲೇ ಪ್ರಮುಖ ಮಳಿಗೆಯನ್ನು ಉದ್ಘಾಟಿಸಿದ್ದೇವೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ದೇಶಾದ್ಯಂತ ಮಾರಾಟ ಮತ್ತು ಸೇವೆಯನ್ನು ಹೆಚ್ಚಿಸುವತ್ತ ಗಮನಹರಿಸಿದ್ದೇವೆ. ನಮ್ಮ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಜಾಗತಿಕವಾಗಿ ಮೆಚ್ಚುಗೆ ಪಡೆದ ಉತ್ಪನ್ನಗಳ ಶ್ರೇಣಿಯೊಂದಿಗೆ, ನಾವು ಮಾರುಕಟ್ಟೆಯನ್ನು ಉತ್ತೇಜಕಗೊಳಿಸುವ ಮತ್ತು ಗ್ರಾಹಕರನ್ನು ಆಕರ್ಷಿಸುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ತನ್ನ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನವೀಕರಿಸಲು ಮತ್ತು ಹೀರೋ ಮೋಟೋಕಾರ್ಪ್ ಮಾದರಿಗಳಲಿ ಅಳವಡಿಸಲಾಗಿರುವ ಇತ್ತೀಚಿನ ಆಟೋಮೋಟಿವ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಬ್ಯೂನಸ್ ಐರಿಸ್‌ನ ಕಾರ್ಲೋಸ್ ಸ್ಪೆಗಜ್ಜಿನಿ ಪ್ರಾಂತ್ಯದಲ್ಲಿ ತನ್ನ ಸ್ಥಾವರವನ್ನು ವಿಸ್ತರಿಸಿದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಮೈತ್ರಿ ಕುರಿತು ಗಿಲೆರಾ ಮೋಟಾರ್ಸ್ ಅರ್ಜೆಂಟೀನಾದ ಉಪಾಧ್ಯಕ್ಷ ಒಮರ್ ಕರುಸೊ ಮಾತನಾಡಿ, ಹೀರೋ ಮೋಟೋಕಾರ್ಪ್ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ವಿಶ್ವದ ನಂ.1 ತಯಾರಕ ಮತ್ತು ಇದು ನಮಗೆ ಉತ್ತಮ ಪಾಲುದಾರಿಕೆಯಾಗಿದೆ. ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ಹೊಸ ಹೂಡಿಕೆ ಮತ್ತು ಹೊಸ ಸೌಲಭ್ಯಗಳು ತಯಾರಿಕೆಯು ದೇಶದಲ್ಲಿ ಉದ್ಯಮವನ್ನು ಉತ್ತೇಜಿಸುತ್ತದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಯೂರೋ 3 ಮತ್ತು ಯುರೋ 4 ಮಾನದಂಡಗಳನ್ನು ಅನುಸರಿಸುವ Xpulse 200 ಮತ್ತು Hunk 160R ನಂತಹ ಹೀರೋ ಮೋಟೋಕಾರ್ಪ್ ಉತ್ಪನ್ನಗಳ ಇತ್ತೀಚಿನ ತಂತ್ರಜ್ಞಾನಗಳಿಂದ ಗ್ರಾಹಕರು ಪ್ರಯೋಜನ ಪಡೆಯುತ್ತಾದೆ ಎಂದು ಹೇಳಿದ್ದಾರೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಹೀರೋ ಮೋಟೋಕಾರ್ಪ್ ಮತ್ತು ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ದೇಶಾದ್ಯಂತ ಮಾರಾಟ ಮತ್ತು ಸೇವಾ ಜಾಲವನ್ನು ವಿಸ್ತರಿಸುವ ಆಕ್ರಮಣಕಾರಿ ವಿಸ್ತರಣಾ ಯೋಜನೆಯನ್ನು ಹೊಂದಿವೆ. ಹೀರೋ ಮೋಟೋಕಾರ್ಪ್ ಶೀಘ್ರದಲ್ಲೇ ತನ್ನ ಉತ್ಪನ್ನಗಳನ್ನು ಅರ್ಜೆಂಟೀನಾದಲ್ಲಿ ಪರಿಚಯಿಸಲಿದೆ. ಹೀರೋ ಭಾರತ ಮತ್ತು ಜರ್ಮನಿಯಲ್ಲಿ R&D ಕೇಂದ್ರಗಳನ್ನು ಹೊಂದಿದೆ, ಭಾರತ, ಕೊಲಂಬಿಯಾ ಮತ್ತು ಬಾಂಗ್ಲಾದೇಶದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಇನ್ನು ಇತ್ತೀಚೆಗೆ ಹೀರೋ ಮೋಟೋಕಾರ್ಪ್ ಕಂಪನಿಯು ದುಬೈನಲ್ಲಿ ಹೊಸ ವಿಶೇಷ ಡೀಲರ್‌ಶಿಪ್ ಅನ್ನು ಉದ್ಘಾಟಿಸುವ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಹೊಸ ಅತ್ಯಾಧುನಿಕ ಡೀಲರ್‌ಶಿಪ್ 625 ಚದರ ಅಡಿಗಳಿಂದ ಕೂಡಿದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಈ ಹೊಸ ಹೀರೋ ಡೀಲರ್‌ಶಿಪ್ ನಲ್ಲಿ ಸೇಲ್ಸ್, ಸರ್ವಿಸ್ ಮತ್ತು ಅಕ್ಸೆಸರೀಸ್ ಗಳು ಲಭ್ಯವಿರುತ್ತದೆ. ಹೀರೋ ಮೋಟೋಕಾರ್ಪ್ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಸಂಪೂರ್ಣ ಸರಣಿಯನ್ನು ಸಹ ಪ್ರದರ್ಶಿಸುತ್ತದೆ. ಕಾರ್ಯಾಗಾರವು ಎರಡು ಸೇವಾ ವಿಭಾಗವನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ-ದರ್ಜೆಯ ಮಾರಾಟದ ನಂತರದ ಸೇವಾ ಅನುಭವ ಮತ್ತು ಬಿಡಿಭಾಗಗಳನ್ನು ಒದಗಿಸುತ್ತದೆ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಹೊಸ ದುಬೈ ಡೀಲರ್‌ಶಿಪ್‌ನೊಂದಿಗೆ ಹೀರೋ ಮೋಟೋಕಾರ್ಪ್ಈಗ ಗಲ್ಫ್ ಮಾರುಕಟ್ಟೆಯಲ್ಲಿ 5 ದೇಶಗಳಲ್ಲಿ 10 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ.ಉದ್ಘಾಟನೆಯ ಸಮಯದಲ್ಲಿ, 100 ಹೀರೋ ಮೋಟೋಕಾರ್ಪ್ ಬೈಕ್ ಗಳನ್ನ್ ಎಸ್‌ಎಸ್ ಡೆಲಿವರಿ ಸರ್ವಿಸಸ್ ಎಲ್‌ಎಲ್‌ಸಿಗೆ ಹಸ್ತಾಂತರಿಸಲಾಯಿತು, ಇದು ಪ್ರದೇಶದ ಪ್ರಮುಖ ಆಹಾರ ವಿತರಣಾ ಅಗ್ರಿಗೇಟರ್‌ಗಳಿಗೆ ಆದ್ಯತೆಯ ಪಾಲುದಾರ.

ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ವಿಸ್ತರಿಸಿದ ಹೀರೋ ಮೋಟೋಕಾರ್ಪ್

ಹೀರೋ ಮೋಟೋಕಾರ್ಪ್ 2018 ರಲ್ಲಿ ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ಕಂಪನಿಯ ವಿಶೇಷ ವಿತರಕರಾದ Afriventures FZE ಸಹಯೋಗದೊಂದಿಗೆ. ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಹೊಂದಿದೆ. ಒಟ್ಟಿನಲ್ಲಿ ಜನಪ್ರಿಯ ಹೀರೋ ಮೋಟೋಕಾರ್ಪ್ ಕಂಪನಿಯು ಜಾಗತಿಕವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜಿಸುತ್ತಿದೆ. ಅಲ್ಲದೇ ಹಲವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
Hero motocorp expands its operations in argentina with gilera motors read to find more details
Story first published: Sunday, December 5, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X