ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರು ವಿನಾಕಾರಣ ಮನೆಯಿಂದ ಹೊರ ಬರುವುದನ್ನು ನಿರ್ಬಂಧಿಸಲಾಗಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಈ ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಗ್ರಾಹಕರು ತಮ್ಮ ವಾಹನಗಳ ಫ್ರೀ ಸರ್ವೀಸ್ ಅವಧಿ ಮುಕ್ತಾಯವಾಗುತ್ತದೆ ಎಂಬ ಆತಂಕದಲ್ಲಿದ್ದರು. ಗ್ರಾಹಕರ ಆತಂಕವನ್ನು ದೂರ ಮಾಡಲು ಹಲವು ವಾಹನ ತಯಾರಕ ಕಂಪನಿಗಳು ಫ್ರೀ ಸರ್ವೀಸ್ ಅವಧಿಯನ್ನು ವಿಸ್ತರಿಸಿವೆ. ಈಗ ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಸಹ ತನ್ನ ವಾಹನಗಳ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿರುವ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ಮುಂದಿನ 60 ದಿನಗಳವರೆಗೆ ಅಂದರೆ ಎರಡು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಹೀರೋ ಮೋಟೊಕಾರ್ಪ್ ಸೋಮವಾರ ತಿಳಿಸಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಜುಲೈ 31ರವರೆಗೆ ವಿಸ್ತರಣೆ

ತಕ್ಷಣದಿಂದ ಜಾರಿಗೆ ಬರುವಂತೆ ಹೀರೋ ಮೋಟೊಕಾರ್ಪ್ ಕಂಪನಿಯ ಬೈಕ್‌ ಹಾಗೂ ಸ್ಕೂಟರ್‌ಗಳ ಮೇಲಿನ ಫ್ರೀ ಸರ್ವೀಸ್, ವಾರಂಟಿ ಹಾಗೂ ಎಕ್ಸ್'ಟೆಂಟೆಡ್ ವಾರಂಟಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಈ ವಿಸ್ತರಣೆಯು ಏಪ್ರಿಲ್ 1ರಿಂದ ಮೇ 31ರವರೆಗೆ ವಾರಂಟಿ ಅವಧಿ ಮುಗಿಯುವ ವಾಹನಗಳಿಗೆ ಅನ್ವಯಿಸುತ್ತದೆ. ಹೀರೋ ಮೋಟೊಕಾರ್ಪ್'ಗೂ ಮುನ್ನ ಯಮಹಾ ಹಾಗೂ ಹೋಂಡಾ ಮೋಟಾರ್‌ಸೈಕಲ್ ಕಂಪನಿಗಳು ಸಹ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿವೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಗುರುಗ್ರಾಮ, ಧರುಹೆರಾ ಹಾಗೂ ಹರಿದ್ವಾರದಲ್ಲಿರುವ ತನ್ನ ಉತ್ಪಾದನಾ ಘಟಕಗಳಲ್ಲಿ ಮೇ 17ರಿಂದ ಉತ್ಪಾದನೆಯನ್ನು ಆರಂಭಿಸಿದೆ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಂಪನಿಯು ಏಪ್ರಿಲ್ 22ರಿಂದ ಮೇ 16ರವರೆಗೆ ತನ್ನ ಎಲ್ಲಾ ಉತ್ಪಾದನಾ ಘಟಕಗಳನ್ನು ಮುಚ್ಚಿತ್ತು.

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ಎರಡನೇ ಅಲೆ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ವಾಹನ ತಯಾರಕ ಕಂಪನಿಗಳು ಸೋಂಕಿತರಿಗೆ ತಮ್ಮದೇ ಆದ ರೀತಿಯಲ್ಲಿ ನೆರವನ್ನು ನೀಡುತ್ತಿವೆ. ಹೀರೋ ಮೋಟೊಕಾರ್ಪ್ ಕಂಪನಿಯು ಸಹ ತನ್ನ ಕೈಲಾದ ನೆರವನ್ನು ನೀಡುತ್ತಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಪ್ಲಾಟ್‌ಫಾರಂ ಹೀರೋ ವೀಕೇರ್ ಅಡಿಯಲ್ಲಿ, ಹೀರೋ ಮೊಟೊಕಾರ್ಪ್ ತನ್ನ ಕೋವಿಡ್ 19 ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಉತ್ತರಾಖಂಡದ ಹರಿದ್ವಾರದಲ್ಲಿರುವ ಕಾಂಖಾಲ್ ರಾಮಕೃಷ್ಣ ಮಿಷನ್ ಸೇವಾಶ್ರಮದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಈ ಅಭಿಯಾನದ ಭಾಗವಾಗಿ ಕಂಪನಿಯು ಹರಿಯಾಣದ ಧರುಹೆರಾ ಹಾಗೂ ಸುತ್ತಮುತ್ತಲಿನ ಏಳು ಆಸ್ಪತ್ರೆಗಳು, ಉತ್ತರಾಖಂಡದ ನಾಲ್ಕು ಆಸ್ಪತ್ರೆಗಳು, ಗುರುಗ್ರಾಮದ ನಾಲ್ಕು ಆಸ್ಪತ್ರೆಗಳು, ಜೈಪುರದ ಮೂರು ಆಸ್ಪತ್ರೆಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ತನ್ನ ದ್ವಿಚಕ್ರ ವಾಹನಗಳನ್ನು ಒದಗಿಸುತ್ತಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಕಂಪನಿಯು ರಾಜಸ್ಥಾನದ ಅಲ್ವಾರ್ ಹಾಗೂ ಗುಜರಾತ್‌ನ ಹಲೋಲ್‌ನಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಲ್ಲದೆ ದೆಹಲಿ ಹಾಗೂ ಹರಿಯಾಣದ ಕೆಲವು ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಬಳಕೆಗಾಗಿ ಹೀರೋ ಮೋಟೊಕಾರ್ಪ್ ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ವಿವಿಧ ರಾಜ್ಯಗಳ ಆರೋಗ್ಯ ಕಾರ್ಯಕರ್ತರಿಗಾಗಿ ಪಿಪಿಇ ಕಿಟ್‌ಗಳನ್ನು ನೀಡುತ್ತಿದೆ. ಒಟ್ಟಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಕರೋನಾ ವೈರಸ್ ಹೋರಾಟದಲ್ಲಿ ತನ್ನದೇ ಆದ ರೀತಿಯಲ್ಲಿ ಕೈಜೋಡಿಸಿದೆ.

Most Read Articles

Kannada
English summary
Hero Motocorp extends free service and warranty period for two months. Read in Kannada.
Story first published: Tuesday, May 18, 2021, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X