ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಎಕ್ಸ್‌ಟ್ರಿಮ್ 160ಆರ್ ಬೈಕ್ ಸೇರಿ ಹಲವು ಬೈಕ್‍ಗಳ ಬೆಲೆಯನ್ನು ಹೆಚ್ಚಿಸಿದೆ. ಹೀರೋ ಸರಣಿಯಲ್ಲಿರುವ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್‌ಗಳು ಕೂಡ ಬೆಲೆ ಏರಿಕೆ ಪಡೆದುಕೊಂಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಹೀರೋ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್‌ಗಳು ರೂ.2,350 ವರೆಗೆ ಬೆಲೆ ಏರಿಕೆ ಪಡೆದುಕೊಂಡಿದೆ. ಬೆಲೆ ಏರಿಕೆ ಪಡೆದುಕೊಂಡ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯು ರೂ,1,23,150 ಗಳಾದರೆ, ಎಕ್ಸ್‌ಪಲ್ಸ್ 200ಟಿ ಬೈಕಿನ ಬೆಲೆಯನ್ನು ರೂ.1,20,650 ಗಳಾಗಿದೆ. 2021ರ ಏಪ್ರಿಲ್ ತಿಂಗಳಿನಿಂದ ಈ ಎರಡು ಬೈಕ್‌ಗಳು ಮೂರನೇ ಬಾರಿ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಈ ಎರಡು ಹೀರೋ ಎಕ್ಸ್‌ಪಲ್ಸ್ ಬೈಕಿನಲ್ಲಿ 199.6 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.1 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ 6,500 ಆರ್‌ಪಿಎಂನಲ್ಲಿ 16.15 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಇದರಲ್ಲಿ ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ ಏರ್/ಆಯಿಲ್-ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಹಿಂದಿನ ಮಾದರಿಗಿಂತ ತೂಕ ಹೆಚ್ಚಾಗಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 ಬೈಕ್ 157 ಕೆಜೆ ತೂಕವನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಈ ಎಕ್ಸ್‌ಪಲ್ಸ್ ಬೈಕಿನಲ್ಲಿ ಎಕ್ಸಾಸ್ಟ್ ಪೈಪಿನ ಸ್ಥಾನವನ್ನು ಬದಲಾಯಿಸಲಾಗಿದೆ. ಈ ಬೈಕಿನ ಎಂಜಿನ್ ಬೆಲ್ಲಿ-ಪ್ಯಾನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಬಿಎಸ್-6 ಎಕ್ಸ್‌ಪಲ್ಸ್ ಮೊದಲಿನಂತೆಯೇ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಹೊಸ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ. ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ. ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್, ಬ್ಲೂಟೂತ್ ಕನೆಕ್ಟ್ ಆಗಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಈ ಹೀರೋ ಎಕ್ಸ್‌ಪಲ್ಸ್ 200 ಬೈಕ್ ವೈಟ್, ಮ್ಯಾಟ್ ಗ್ರೀನ್, ಮ್ಯಾಟ್ ಗ್ರೇ, ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೀರೋ ಎಕ್ಸ್‌ಪಲ್ಸ್ 200 ಪ್ರತಿಷ್ಠಿತ ಭಾರತೀಯ ಮೋಟಾರ್‌ಸೈಕಲ್ ಆಫ್ ದಿ ಇಯರ್ 2020 ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಹೀರೋ ಎಕ್ಸ್‌ಪಲ್ಸ್ 200ಟಿ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೀರೋ ಎಕ್ಸ್‌ಪಲ್ಸ್ 200ಟಿ ಎಕ್ಸ್‌ಪಲ್ಸ್ ಸರಣಿಯ ಭಾಗವಾಗಿದ್ದು, ಇದು ಹೆಚ್ಚು ಜನಪ್ರಿಯವಾದ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಟೂರರ್ ಅನ್ನು ಒಳಗೊಂಡಿದೆ ಮತ್ತು 200ಸಿಸಿ ಸರಣಿಯ ಎಕ್ಟ್ರೀಮ್ 200ಎಸ್ ಫೇರ್ಡ್ ಬೈಕನ್ನು ಸಹ ಒಳಗೊಂಡಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮ್ಯಾಟ್ ಶೀಲ್ಡ್ ಗೋಲ್ಡ್, ಪ್ಯಾಂಥರ್ ಬ್ಲ್ಯಾಕ್ ಮತ್ತು ಸ್ಪೋರ್ಟ್ಸ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಈ ಹೀರೋ ಎಕ್ಸ್‌ಪಲ್ಸ್ 200ಟಿ ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿ ಕಾಲ್ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಎಲ್ಇಡಿ ಟೈಲ್ ಲ್ಯಾಂಪ್, 17 ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್, ಅಂಡರ್ ಕೌಲ್ ಮತ್ತು ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಈ ಹೀರೋ ಎಕ್ಸ್‌ಪಲ್ಸ್ 200ಟಿ ಬೈಕಿನ ಆಯಾಮದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು 177 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 13 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಮತ್ತು 799 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇನ್ನು ಹೀರೋ ಎಕ್ಸ್‌ಪಲ್ಸ್ 200ಟಿ ಬೈಕ್ 154 ಕೆಜಿ ತೂಕವನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ Hero Xpulse 200, Xpulse 200T ಬೈಕ್‍ಗಳು

ಇನ್ನು ಈ ಹೊಸ ಎಕ್ಸ್‌ಪಲ್ಸ್ 200ಟಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ಹೊಂದಾಣಿಕೆಯ ಮೊನೊಶಾಕ್ ಅನ್ನು ಒಳಗೊಂಡಿದೆ. 2021ರ ಹೀರೋ ಎಕ್ಸ್‌ಪಲ್ಸ್ 200ಟಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಿದೆ.

Most Read Articles

Kannada
English summary
Hero motocorp hiked xpulse 200 and xpulse 200t prices again in india details
Story first published: Tuesday, September 28, 2021, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X